ಕ್ರೈಂ ಸುದ್ದಿ
ಸಾಲದ ಶೂಲಕ್ಕೆ ಇಂಜಿನಿಯರ್ ಬಲಿ | ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ಮಹಿಳೆ ಸಾವು

CHITRADURGA NEWS | 18 MARCH 2025
ಚಿತ್ರದುರ್ಗ: ಸಾಲದ ಶೂಲಕ್ಕೆ ಸಿಕ್ಕ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದ ಚಿತ್ರದುರ್ಗ ಮೂಲದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಲ್ಕೆರೆಯಲ್ಲಿ ನಡೆದಿದೆ.
ಸಾಯುವ ಮುನ್ನ ತನ್ನ ಮೂರು ವರ್ಷದ ಕಂದಮ್ಮನನ್ನು ಅಕ್ಕನ ಮಡಿಲಿಗೆ ಹಾಕಿಕೊಳ್ಳುವಂತೆ ವಾಯ್ಸ್ ಮೆಸೇಜ್ ಮಾಡಿದ್ದು, ಆ ಧ್ವನಿ ಕೇಳುತ್ತಲೇ ಎಂಥವರ ಕಣ್ಣಾಲಿಗಳೂ ಒದ್ದೆಯಾತ್ತವೆ.
ಇದನ್ನೂ ಓದಿ: ಬಾನಾಡಿಗಳ ಬಾಯಾರಿಕೆಗೆ ನೀರೆರೆದ ಜಿಪಂ ಸಿಇಓ | ಮರ ಮರದಲ್ಲೂ ನೀರು, ಕಾಳಿನ ವ್ಯವಸ್ಥೆ
ಹೌದು, ಹೊಳಲ್ಕೆರೆ ತಾಲೂಕು ಬಾಣಗೆರೆಯ ರಂಜಿತ್‍ಕುಮಾರ್ ಎಂಬುವವರ ಜೊತೆ ಮದುವೆಯಾಗಿದ್ದ ಚಿತ್ರದುರ್ಗ ತಾಲೂಕು ಮಲ್ಲಾಪುರ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಪುತ್ರಿ ಶೃತಿ ಮೃತ ಇಂಜಿನಿಯರ್.
ಶೃತಿ ಹಾಗೂ ರಂಜಿತ್ ಬೆಂಗಳೂರಿನಲ್ಲಿ ಇಂಜಿನಿಯರ್ ವೃತ್ತಿ ಮಾಡಿಕೊಂಡಿದ್ದರು. ಆದರೆ, ವಿಪರೀತ ಸಾಲದ ಕಾರಣಕ್ಕೆ ಆತ್ಮಹತ್ಯೆಯ ಹಾದಿ ಹಿಡಿದಿದ್ದು, ತನ್ನ ಮೂರು ವರ್ಷದ ಮಗುವನ್ನು ನೋಡಿಕೊಳ್ಳುವಂತೆ ಅಕ್ಕ ನಳಿನಿ ಅವರಿಗೆ ಮಾ.17 ರಾತ್ರಿ ವಾಯ್ಸ್ ಮೆಸೇಜ್ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಜಿಲ್ಲೆಯ ಜನರಿಗೆ ಎಚ್ಚರಿಕೆ | ಮಿತಿಮೀರಿದ ತಾಪಮಾನ | ಈ ಸಲಹೆ ಪಾಲಿಸಿ..
ತನ್ನ ಮಗ ಪ್ರಬುದ್ಧಮಾನಕ್ಕೆ ಬರುವವರೆಗೆ ಚೆನ್ನಾಗಿ ನೋಡಿಕೊಳ್ಳಿ. ನೀವೆ ಅವರ ಅಪ್ಪ, ಅಮ್ಮ ಎಂಬಂತೆ ಬೆಳೆಸಿ. ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಎಂದೂ ಅವನಿಗೆ ತಿಳಿಯುವುದು ಬೇಡ. ನೀವೆ ಅವನ ತಂದೆ ತಾಯಿ ಎಂದು ಬೆಳೆಸಿ ಎಂದು ಪದೇ ಪದೇ ಹೇಳಿ ಅಸುನೀಗಿದ್ದು, ಈ ಘಟನೆಯಿಂದ ಇಡೀ ಕುಟುಂಬ ಜರ್ಝರಿತವಾಗಿದೆ.
