ಮುಖ್ಯ ಸುದ್ದಿ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ | ಶಿಕ್ಷಕರು, ಉಪನ್ಯಾಸಕರಿಗೆ ಓಓಡಿ ಸೌಲಭ್ಯ

CHITRADURGA NEWS | 18 MARCH 2025
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆಯಲಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗೆ ಅನ್ಯಕಾರ್ಯನಿಮಿತ್ತ (ಓಓಡಿ) ಸೌಲಭ್ಯ ಒದಗಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
ಇದೇ ಮಾರ್ಚ್ 27 ಮತ್ತು 28 ರಂದು ಹೊಳಲ್ಕೆರೆ ಪಟ್ಟಣದಲ್ಲಿ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಇದನ್ನೂ ಓದಿ: ಬಾನಾಡಿಗಳ ಬಾಯಾರಿಕೆಗೆ ನೀರೆರೆದ ಜಿಪಂ ಸಿಇಓ | ಮರ ಮರದಲ್ಲೂ ನೀರು, ಕಾಳಿನ ವ್ಯವಸ್ಥೆ
ಈ ಸಂಬಂಧ ಸಮ್ಮೇಳನಕ್ಕೆ ಹಾಜರಾಗುವ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳಿಗೆ ಓಓಡಿ ಸೌಲಭ್ಯ ಸಿಕ್ಕಿದ್ದು, ಕಾಲೇಜು ವಿಭಾಗದ ಉಪನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರು ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ಭಾಗವಹಿಸಿದ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಜರಾತಿ ಪ್ರಮಾಣ ಪತ್ರವನ್ನು ನೀಡಲಿದೆ. ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಮನವಿ ಮಾಡಿದೆ.
ಇದನ್ನೂ ಓದಿ: ಬೇಸಿಗೆ ಬಿಸಿಲು ಎದುರಿಸಲು ಇಲ್ಲಿದೆ ಸಲಹೆ | ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಮಾಹಿತಿ
ಸಮ್ಮೇಳನಕ್ಕೆ ಹಾಜರಾಗುವ ಶಿಕ್ಷಕರು ಆಯಾ ತಾಲ್ಲೂಕು ಕಸಾಪ ಅಧ್ಯಕ್ಷರು ಅಥಔಆ ಜಿಲ್ಲಾ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ನೊಂದಾಯಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೋರಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, 9980383294, 8310762431,9449510078.
