ಕ್ರೈಂ ಸುದ್ದಿ
ಅರೆಪೆಟ್ಟಾದ ಹಾವು – ವಿಪರೀತ ಗಾಳಿ, ಮಳೆ | ಬೈಕ್ ಅಪಘಾತ – ಮುಂದೇನಾಯ್ತು..?

CHITRADURGA NEWS | 26 MAY 2024
ಚಳ್ಳಕೆರೆ: ಬೈಕಿನಲ್ಲಿ ಹೋಗುವಾಗ ರಸ್ತೆಗೆ ಅಡ್ಡ ಬಂದ ಹಾವಿನ ಮೇಲೆ ಟೈಯರ್ ಹತ್ತಿದೆ. ಈ ವೇಳೆ ಅರೆಪೆಟ್ಟಾದ ಹಾವನ್ನು ಮತ್ತೆ ಮೂರು ಜನ ಬಂದು ಹಾವು ಹೊಡೆದು ವಾಪಾಸು ಹೋಗುವಾಗ ಅಪಘಾತವಾಗಿರುವ ಸುದ್ದಿ ಇದು.
ಚಳ್ಳಕೆರೆ ತಾಲೂಕು ನಾಗಗೊಂಡನಹಳ್ಳಿ ನಿವಾಸಿ ಪವನ್ ಮೇ.24 ರಂದು ಮಧ್ಯಾಹ್ನ 12 ಗಂಟೆ ವೇಳೆ ಚಳ್ಳಕೆರೆಗೆ ತೆರಳುತ್ತಿದ್ದಾಗ ಕರೀಕೆರೆ ಬಳಿ ಹಾವಿನ ಮೇಲೆ ಬೈಕ್ ಹರಿಸಿದ್ದಾರೆ. ಈ ವೇಳೆ ಹಾವು ಅರೆಪಟ್ಟಾಗಿದೆ.

ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ
ಈ ಕಾರಣಕ್ಕೆ ಹಾವನ್ನು ಹೊಡೆಯಲು ನಾಗಗೊಂಡನಹಳ್ಳಿ ನಿವಾಸಿಗಳಾದ ಬೋರಯ್ಯ, ರಘು, ಅಜ್ಜಣ್ಣ ಮತ್ತು ತಿಪ್ಪೇಸ್ವಾಮಿ ಸೇರಿ ಪವನ್ ಜೊತೆಗೆ ಹಾವು ಹೊಡೆದು ಹಾಕಿದ್ದಾರೆ.
ಪವನ್ ಚಳ್ಳಕೆರೆ ಕಡೆಗೆ ಬಂದಿದ್ದು, ಉಳಿದ ಮೂರು ಜನ ವಾಪಾಸು ನಾಗಗೊಂಡನಹಳ್ಳಿ ಕಡೆಗೆ ತೆರಳಿದ್ದಾರೆ.
ಬೊರಣ್ಣ ಒಂದು ಬೈಕಿನಲ್ಲಿದ್ದರೆ ತಿಪ್ಪೇಸ್ವಾಮಿ ಮತ್ತು ರಘು ಮತ್ತೊಂದು ಬೈಕಿನಲ್ಲಿ ಬರುತ್ತಿರುವಾಗ ಮಳೆ, ಗಾಳಿ ಶುರುವಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೋರಣ್ಣ ಬೈಕ್ ವೇಗ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ
ಹಾಲಿಗೊಂಡನಹಳ್ಳಿಯಿಂದ ಮುಂದೆ ರಾಘವೇಂದ್ರ ಪಾಟೀಲರ ಕೋಳಿ ಫಾರಂ ಬಳಿ ಜೊತೆಗೆ ತಿಪ್ಪೇಸ್ವಾಮಿ ಮತ್ತು ರಘು ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ.
ಎರಡೂ ಬೈಕುಗಳು ಬಿದ್ದು ಜಖಂ ಆಗಿವೆ. ಮೂರು ಜನ ಗಾಯಗೊಂಡಿದ್ದಾರೆ. ಬೋರಣ್ಣ ಅವರ ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ಮೂರು ಜನರನ್ನು 108 ಅಂಬ್ಯುಲೆನ್ಸ್ ಮೂಲಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ.
ಇದನ್ನೂ ಓದಿ: ಮೂಡಿಗೆರೆ ಬಳಿ ಭೀಕರ ಅಪಘಾತದಲ್ಲಿ ಮಡಿದವರಿಗೆ ಪರಿಹಾರದ ಭರವಸೆ | ಸಚಿವ ಡಿ.ಸುಧಾಕರ್
ಬೋರಣ್ಣನಿಗೆ ಹೆಚ್ಚು ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲು ವೈದ್ಯರು ಸಲಹೆ ನಿಡಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲೇ ಬೋರಣ್ಣ ಮೃತಪಟ್ಟಿದ್ದಾರೆ.
ಚಳ್ಳಕೆರೆ ತಾಲೂಕು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
