ಮುಖ್ಯ ಸುದ್ದಿ
ಜಮೀನಿನಲ್ಲಿ ನಾಗರಹಾವು ಕಚ್ಚಿ ಬಾಲಕ ಸಾವು | ತಂದೆಯ ಜೊತೆ ನೀರು ಹಾಯಿಸಲು ಹೋಗಿದ್ದಾಗ ಘಟನೆ

CHITRADURGA NEWS | 25 JANUARY 2024
ಹಿರಿಯೂರು: ಜಮೀನಿನಲ್ಲಿ ಹಾವು ಕಚ್ಚಿ 11 ವರ್ಷದ ಬಾಲಕ ಮೃತಪಟ್ಟರುವ ಘಟನೆ ಹಿರಿಯೂರು ತಾಲೂಕಿನ ಧರ್ಮಪುರ ಸಮೀಪದ ಬೆನಕನಹಳ್ಳಿಯಲ್ಲಿ ನಡೆದಿದೆ.
ಬೆನಕನಹಳ್ಳಿಯ ಕೇಶವಮೂರ್ತಿ ಎಂಬುವವರ ಪುತ್ರ ಶಶಾಂಕ್(11) ನಾಗರ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಾಲಕ.

ಜ.23 ರಂದು ರಾತ್ರಿ ಪಾಳಿಯಲ್ಲಿ ವಿದ್ಯುತ್ ಇದ್ದ ಕಾರಣಕ್ಕೆ ಕೇಶವಮೂರ್ತಿ ನೀರು ಹಾಯಿಸುವಾಗ ಬ್ಯಾಟರಿ ಬಿಡಲು ಮಗ ಶಶಾಂಕನನ್ನು ಕರೆದುಕೊಂಡು ಜಮೀನಿಗೆ ಹೋಗಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಜನವರಿ 24 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್

ರಾತ್ರಿ 12 ಗಂಟೆ ಸುಮಾರಿನಲ್ಲಿ ಜಮೀನಿನ ಬದುವಿನಲ್ಲಿ ಕುಳಿತಿದ್ದ ಶಶಾಂಕನ ಕುತ್ತಿಗೆ ಭಾಗಕ್ಕೆ ಹಾವು ಕಚ್ಚಿದ್ದು, ತಕ್ಷಣ ಕೂಗಿಕೊಂಡಿದ್ದಾನೆ. ಈ ವೇಳೆ ಕೇಶವಮೂರ್ತಿ ಹಾಗೂ ಪಕ್ಕದ ಜಮೀನಿನಲ್ಲಿದ್ದವು ಓಡಿ ಬಂದು ನೋಡಿದಾಗ ನಾಗರಹಾವು ಕಚ್ಚಿರುವುದು ಗೊತ್ತಾಗಿದೆ.
ಅಲ್ಲೇ ಪಕ್ಕದ ಬೇಲಿಯಲ್ಲಿದ್ದ ನಾಗರಹಾವನ್ನು ಹೊಡೆದು ಹಾಕಿ, ಧರ್ಮಪುರ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಬಂದಿದ್ದಾರೆ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ಆದರೆ, ಬೆಳಗಿನ ಜಾವ 5 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಶಶಾಂಕ ಮೃತಪಟ್ಟಿದ್ದಾನೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೇಶದ ರಕ್ಷಣೆಯಲ್ಲೂ ಮಹಿಳೆಯ ಪಾತ್ರ ದೊಡ್ಡದು | ಕೆ.ಎಸ್.ನವೀನ್
ಧರ್ಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಬಾಲಕ ಸಾಯುವಂತಾಯಿತು ಎಂದು ಗ್ರಾಮಸ್ಥರು ಹಾಗೂ ಮೃತ ಬಾಲಕನ ಸಂಬಂಧಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
