CHITRADURGA NEWS | 01 AUGUST 2026
ಚಿತ್ರದುರ್ಗ: ಪತ್ರಕರ್ತರು ಮತ್ತು ಮಾಧ್ಯಮಳಿಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆಯವರು ವಾಹನಗಳಿಗೆ ‘PRESS’ ಎಂದು ಹೆಸರಿನ ಫಲಕ ಹಾಕಿಕೊಂಡು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಆರೋಪ -3 ಜನರಿಗೆ ಕಾರಣ ಕೇಳಿ ನೋಟಿಸ್
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಸಂಬಂಧಿಸಿದವರು ಹೊರತುಪಡಿಸಿ, ಅನಧಿಕೃತ ವ್ಯಕ್ತಿಗಳು ಕೂಡ ತಮ್ಮ ಬೈಕ್ ಮತ್ತು ಕಾರುಗಳ ಮೇಲೆ ‘PRESS’ ಬೋರ್ಡ್ ಹಾಕಿಕೊಂಡು ವಾಹನಗಳನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ಇದು ಕಾನೂನು ಬಾಹಿರ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸರ ಎಚ್ಚರಿಕೆ ಏನು?
ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ, “ನಂಬರ್ ಪ್ಲೇಟ್ ಮತ್ತು ವಾಹನಗಳ ಮೇಲೆ ಸಾರ್ವಜನಿಕರು ‘PRESS’ ಎಂದು ಬರೆಯಿಸಿಕೊಂಡು ಚಾಲನೆ ಮಾಡುತ್ತಿರುವಂತಹ ಮೋಟಾರ್ ಸೈಕಲ್ಗಳನ್ನು ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸ್ಪೆಷಲ್ ಡ್ರೈವ್ ಮಾಡುವ ಮೂಲಕ ವಾಹನಗಳನ್ನು ಪತ್ತೆ ಮಾಡಿ” ಎಂದು ಹೇಳಲಾಗಿದೆ.
ಅಂತಹ ವಾಹನ ಚಾಲಕರು ಮತ್ತು ಮಾಲೀಕರ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಯಾರಿಗೆ ಮಾತ್ರ ಅನುಮತಿ?
ಪತ್ರಕರ್ತರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರು ಮಾತ್ರ ಗುರುತಿಗಾಗಿ ‘PRESS’ ಎಂಬ ನಾಮ ಫಲಕ ಹಾಕಿಕೊಳ್ಳಲು ಅನುಮತಿ ಇದೆ. ಉಳಿದವರು ಹಾಗೆ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ.
ಇದನ್ನೂ ಓದಿ: ಸಾಮಾನ್ಯ ವರ್ಗದ ಪುರುಷರು/ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ | ಅರ್ಜಿ ಆಹ್ವಾನ
ಪೊಲೀಸ್ ಇಲಾಖೆ ಶೀಘ್ರದಲ್ಲೇ ಜಿಲ್ಲೆಯಾದ್ಯಂತ ತಪಾಸಣೆ ನಡೆಸಿ ಅನಧಿಕೃತ ‘PRESS’ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

