CHITRADURGA NEWS | 23 APRIL 2026
ಚಿತ್ರದುರ್ಗ: ಎಲ್ಲದಕ್ಕೂ ಸಾವೇ ಪರಿಹಾರವಲ್ಲ. ಬದುಕಲು ನೂರಾರು ದಾರಿಗಳುಂಟು. ಶಿಕ್ಷಣದಲ್ಲಿ ವಿಫಲವಾದವರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧಿಸಿ ಪಠ್ಯವೇ ಆಗಿರುವ ಸಾವಿರಾರು ಉದಾಹರಣೆಗಳಿವೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 23 | ಹತ್ತಿ ರೇಟ್ ಎಷ್ಟಿದೆ?
ಆದರೂ, ಮಕ್ಕಳು ಅತಿಯಾದ ಒತ್ತಡ ಹಾಗೂ ಕ್ಷಣದ ಕೆಟ್ಟ ಆಲೋಚನೆಯಿಂದ ಅಮೂಲ್ಯವಾದ ಬದುಕನ್ನೇ ನಾಶ ಮಾಡಿಕೊಳ್ಳುವ ನಿರ್ಧಾರ ದೇವರಿಗೂ ಪ್ರಿಯವಲ್ಲ.
ಪ್ರತಿ ಸಲ ಫಲಿತಾಂಶ ಬಂದಾಗಲೂ ಇಂತಹ ಒಂದೆರಡು ಪ್ರಕರಣ ವರದಿಯಾಗುತ್ತಲೇ ಇರುತ್ತವೆ. ಇದು ಕೊನೆಯಾಗಬೇಕು. ಫಲಿತಾಂಶ ಎಲ್ಲದಕ್ಕೂ ಮಾನದಂಡವಲ್ಲ. ಬದುಕು ಮುಖ್ಯ. ನೀವು ಬದುಕಿ ತೋರಿಸುವುದೇ ಮುಖ್ಯ. ಹೀಗಾಗಿ ಸಾವಿನಂತಹ ಕೆಟ್ಟ ಯೋಚನೆ ಯಾವ ಮಕ್ಕಳಿಗೂ ಬರಬಾರದು ಎನ್ನುವುದು ಚಿತ್ರದುರ್ಗ ನ್ಯೂಸ್ ಕಳಕಳಿ.
ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಬರುತ್ತಲೇ ಕೋಟೆನಾಡು ಚಿತ್ರದುರ್ಗದಲ್ಲಿ ವಿದ್ಯಾರ್ಥಿಯೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡು ಮೃತಪಟ್ಟಿರುವ ಬೇಸರದ ವರದಿ ಇದು.
ಕನ್ನಡದಲ್ಲಿ ಫೇಲ್, ಆತ್ಮಹತ್ಯೆ ಮಾಡಿಕೊಂಡ ಬಾಲಕ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರರ್ಗದಲ್ಲಿ ನಡೆದಿದೆ.
ಇದನ್ನೂ ಓದಿ: ಏ.25 ರಂದು ಚಿತ್ರದುರ್ಗದಲ್ಲಿ ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನ
ನಗರದ ಹೊರಪೇಟೆಯ ಅಂಜುಮನ್ ಸರ್ಕಲ್ ಬಳಿಯ ಮನೆಯಲ್ಲಿ ಮನ್ಸೂರ್ ಬೇಗ್ ಎಂಬುವವರ ಪುತ್ರ ಆಯಾನ್ ಬೇಗ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆಯನ್ಬೇಗ್ ಕನ್ನಡ ವಿಷಯದಲ್ಲಿ ಅನುತ್ತೀರ್ಣನಾಗಿರುವ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಮನ್ಸೂರ್ ಬೇಗ್ ಬೆಳಗ್ಗೆಯೇ ಕೆಲಸಕ್ಕೆ ಹೋಗಿದ್ದು, ಅವರ ಪತ್ನಿ ಕೂಡಾ ಕಂಪ್ಯೂಟರ್ ಸೆಂಟರ್ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಇದ್ದ ಕಾರಣಕ್ಕೆ ಮಗನಿಗೆ ಪೋನ್ ಮಾಡಿ ರಿಸಲ್ಟ್ ಕೇಳಿದ್ದಾರೆ.
ಇದನ್ನೂ ಓದಿ: ಬಾಲಭವನದಲ್ಲಿ 15 ದಿನಗಳ ಮಕ್ಕಳ ಬೇಸಿಗೆ ಶಿಬಿರ
ನೋಡಿ ಹೇಳುತ್ತೇನೆ ಎಂದು ತಿಳಿಸಿದ ಮಗ ಆಯಾನ್ ಬೇಗ್ ಆನಂತರ ಪೋನ್ ರಿಸೀವ್ ಮಾಡಿಲ್ಲ. ಈ ಕಾರಣಕ್ಕೆ ಮನ್ಸೂರ್ ಬೇಗ್ ಮನೆಗೆ ಬಂದು ನೋಡಿದಾಗ ಮನೆಯ ರೂಮಿನಲ್ಲಿ ಆಯನ್ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
