CHITRADURGA NEWS | 23 NOVEMBER 2025
ಚಿತ್ರದುರ್ಗ: ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾದ ವಾಲ್ಮೀಕಿ ಸಮುದಾಯವನ್ನು ರಾಜಕೀಯ ಪಕ್ಷಗಳು ಬರೀ ಮತದ ಬ್ಯಾಂಕ್ ಆಗಿ ರೂಪಿಸಿಕೊಂಡಿವೆ ಎಂದು ಡಾ.ವಾಲ್ಮೀಕಿ ಪ್ರಸನ್ನನಾಂದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒನಕೆ ಓಬವ್ವನಂತಹ ಧಿಟ್ಟ ಮಹಿಳೆ ಸಮಾಜಕ್ಕೆ ಅಗತ್ಯ | ಡಾ.ಎಂ.ಚಂದ್ರಪ್ಪ
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾ ನಾಯಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ 2025ರಲ್ಲಿ ಶ್ರೀ ಮಠ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಮತ್ತು ನಾಡದೂರೆ ಮದಕರಿ ನಾಯಕರ ಜಯಂತೋತ್ಸವಕ್ಕೆ ಸಹಕಾರ ನೀಡಿದ ಮಹನೀಯರ ಗೌರವ ಸಮರ್ಪಣೆ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,
ಚುನಾವಣೆಯಲ್ಲಿ ನಮ್ಮ ಸಮುದಾಯದ ನೆರವನ್ನು ಪಡೆದು ಗೆದ್ದ ಮೇಲೆ, ನಮ್ಮಗಳ ಸಮಸ್ಯೆಯ ಬಗ್ಗೆ ಗಮನ ನೀಡುತ್ತಿಲ್ಲ. ಇದರ ಬಗ್ಗೆ ನಮ್ಮ ಸಮುದಾಯ ಆಲೋಚನೆ ಮಾಡಬೇಕು.
ರಾಜ್ಯದಲ್ಲಿ ಲಿಂಗಾಯತ ಸಮುದಾಯ, ಒಕ್ಕಲಿಗ ಸಮುದಾಯ, ಕುರುಬ ಸಮುದಾಯದ ರೀತಿಯಲ್ಲಿ ನಮ್ಮ ವಾಲ್ಮೀಕಿ ಸಮುದಾಯವೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ನಮ್ಮನ್ನು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾತ್ರ ಪ್ರಾತಿನಿಧ್ಯವನ್ನು ನೀಡುತ್ತಾರೆ. ತದ ನಂತರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದರು.
ಯಾವುದೇ ಒಂದು ಸಮುದಾಯದ ಅಭಿವೃದ್ಧಿಯಾಗಲು ಗುರುವಿನ ಮಹತ್ವ ಅಗತ್ಯವಾಗಿದೆ. ಲಿಂಗಾಯತ ಸಮುದಾಯ ವಿಶ್ವ ಗುರು ಬಸವಣ್ಣ, ಕುರುಬ ಸಮುದಾಯ ಕನಕದಾಸರ ಹೆಸರಿನಲ್ಲಿ, ಗೊಲ್ಲ ಸಮುದಾಯ ಶ್ರೀ ಕೃಷ್ಣನ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ. ಪರಿಶಿಷ್ಟ ಜಾತಿಯ ಸಮುದಾಯಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ. ಬೇಡ ವಾಲ್ಮೀಕಿ ಸಮುದಾಯ ಭಾರತಿಯ ಸಂಸ್ಕøತಿಗೆ ರಾಮಯಾಣ ಮಹಾಕಾವ್ಯವನ್ನು ನೀಡಿದಂತಹ ಆದಿಕವಿ ವಾಲ್ಮೀಕಿ ಹೆಸರಿನಲ್ಲಿ ನಾವೆಲ್ಲರು ಸಹಾ ಸಂಘಟನೆ ಯಾಗುತ್ತಿದ್ದೇವೆ.
ಸಮುದಾಯದಲ್ಲಿ ದೊಡ್ಡದಾದ ಲಿಂಗಾಯತ ಅಥವಾ ವೀರಶೈವ ಸಮುದಾಯ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯದವರಿದ್ದಾರೆ, ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯದವರಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ವಾಲ್ಮೀಕಿ ಸಮುದಾಯವರಿದ್ದಾರೆ. ರಾಜ್ಯದಲ್ಲಿ ಲಿಂಗಾಯತರಷ್ಟೇ ಒಕ್ಕಲಿಗರು, ಕುರುಬರಿದ್ದಾರೆ, ಅಷ್ಟೇ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯವರು ಇದ್ದಾರೆ ಎಂದರು.
ಮಹರ್ಷಿ ವಾಲ್ಮಿಕಿ ಜಯಂತಿ, ಮಹರ್ಷಿ ವಾಲ್ಮೀಕಿ ಜಾತ್ರೆ ಬಂದಾಗ, ಮದಕರಿ ಜಯಂತಿ ಮಾಡುವಾಗ ನಾವೆಲ್ಲರೂ ಸಹಾ ಪಕ್ಷಾತೀತವಾಗಿ, ಸರ್ಕಾರದ ಕೂಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿದರೆ ನಾವೇಲ್ಲಾ ಒಂದಾಗಿ, ಬಗ್ಗಟಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಇದನ್ನೂ ಓದಿ: ಆಟೋ ಚಾಲಕ ಆತ್ಮಹತ್ಯೆಗೆ ಯತ್ನ | ಗಾಂಧಿ ವೃತ್ತದಲ್ಲಿ ನಡೆದ ಘಟನೆ | ಪೊಲೀಸರೊಂದಿಗೆ ವಾಗ್ವಾದ
ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಸಮುದಾಯದ ಮುಖಂಡರುಗಳಾದ ಸಂಪತ್ ಕುಮಾರ್, ಪಾಪನಾಯಕ, ವಿರೇಶ್, ಸೂರಗೌಡ, ಮಹೇಶ್, ರವಿಕುಮಾರ್, ಮಲ್ಲಿಕಾರ್ಜನ್, ಹೊರಕೇರಪ್ಪ, ತಿಪ್ಪಮ್ಮ, ಶ್ರೀನಿವಾಸ್ ನಾಯಕ, ಪ್ರಕಾಶ್, ಕವನ ಕರಿಯಮ್ಮ, ವಿಮಲಾಕ್ಷಿ, ಲೋಹಿತ್ ಕುಮಾರ್, ನರಸಿಂಹರಾಜು ದಿನೇಶ್ ಗೌಡಗೆರೆ, ಅಂಜನಪ್ಪ, ಶಿವಕುಮಾರ್, ಮಂಜುನಾಥ್, ಆಶೋಕ ಬೆಳಗಟ್ಟ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
