
CHITRADURGA NEWS | 23 NOVEMBER 2025
ಹೊಳಲ್ಕೆರೆ: ಚಿತ್ರದುರ್ಗದ ಕೋಟೆಯೊಳಗೆ ನುಸುಳುತ್ತಿದ್ದ ಹೈದರಾಲಿ ಕಡೆಯ ಸೈನಿಕರನ್ನು ಓಬವ್ವ ಒನಕೆಯಿಂದ ಸದೆಬಡಿದು ಸಾಹಸ ಮೆರೆದಿದ್ದಾಳೆ. ಅಂತಹ ಧಿಟ್ಟ ಮಹಿಳೆಯರು ಸಮಾಜಕ್ಕೆ ಅಗತ್ಯ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಛಲವಾದಿ ಮಹಾಸಭಾ ತಾಲ್ಲೂಕು ಘಟಕದಿಂದ ಪಟ್ಟಣದ ಸಂವಿಧಾನಸೌಧದಲ್ಲಿ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಶಕ್ತಿ, ಸಾಮಥ್ರ್ಯ, ಬುದ್ದಿವಂತಿಕೆಯಿಂದ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ವೀರವನಿತೆ ಒನಕೆ ಓಬವ್ವಳ ಜಯಂತಿಯನ್ನು ಸರ್ಕಾರ ಪ್ರತಿ ವರ್ಷವೂ ಆಚರಿಸುವ ಮೂಲಕ ಸ್ಮರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಕೆ.ಹೆಚ್.ರಂಗನಾಥ್, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ ಇವರುಗಳೆಲ್ಲಾ ಛಲವಾದಿ ಜನಾಂಗದಲ್ಲಿ ಜನಿಸಿದವರು ಎಂದು ತಿಳಿಸಿದರು.
ಇದನ್ನೂ ಓದಿ: ಆಟೋ ಚಾಲಕ ಆತ್ಮಹತ್ಯೆಗೆ ಯತ್ನ | ಗಾಂಧಿ ವೃತ್ತದಲ್ಲಿ ನಡೆದ ಘಟನೆ | ಪೊಲೀಸರೊಂದಿಗೆ ವಾಗ್ವಾದ
ಮಲ್ಲಿಕಾರ್ಜುನ ಖರ್ಗೆರವರು ಎಂದೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಜಾತಿ ವ್ಯವಸ್ಥೆಯಲ್ಲಿ ಅವಕಾಶ ಸಿಗಲಿಲ್ಲ. ರಾಜ್ಯ ಸರ್ಕಾರ ಒನಕೆ ಓಬವ್ವ ಜಯಂತಿ ಆಚರಿಸುವ ಮೂಲಕ ಛಲವಾದಿ ಜನಾಂಗಕ್ಕೆ ಗೌರವ ಕೊಟ್ಟಿದೆ.
ತ್ಯಾಗ ಮತ್ತು ಸಾಹಸದ ಮೂಲಕ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಒನಕೆ ಓಬವ್ವ ಛಲವಾದಿ ಜನಾಂಗಕ್ಕೆ ಸೇರಿದವಳೆಂದು ನೀವುಗಳೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದರು.
ಯಾವುದೇ ಜಾತಿಯಾಗಲಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹಳ ಮುಖ್ಯ. ಅದಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಛಲವಾದಿ ಜನಾಂಗಕ್ಕೆ ಕರೆ ನೀಡಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಬಸವಲಿಂಗಾನಂದ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು.
ಇದನ್ನೂ ಓದಿ: ಕಬ್ಬಡ್ಡಿ ಪಂದ್ಯಾವಳಿ | ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ
ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಹೆಚ್.ಶೇಷಪ್ಪ, ಡಿ.ಹೆಚ್.ನಟರಾಜ್, ತಹಶೀಲ್ದಾರ್ ವಿಜಯಕುಮಾರ್, ಡಿ.ಆರ್.ರವೀಂದ್ರ, ನರಸಿಂಹಮೂರ್ತಿ, ಹಾಲಮ್ಮ ನಟರಾಜ್, ಶರಣಪ್ಪ, ಟಿ.ನರಸಿಂಹಮೂರ್ತಿ, ಹನುಮಂತಪ್ಪ ಮಾರಪ್ಪ ಚೀಳಂಗಿ, ತಿಮ್ಮರಾಯಪ್ಪ, ಹೆಚ್.ಅಣ್ಣಪ್ಪಸ್ವಾಮಿ, ಗೋವರ್ಧನ, ಹನುಮಂತಪ್ಪ, ಸುವರ್ಣಮ್ಮ, ದೇವರಾಜ್, ಹೆಚ್.ರಾಮಚಂದ್ರಪ್ಪ, ಎನ್.ರಂಗಸ್ವಾಮಿ ಮತ್ತಿತರರು ಒನಕೆ ಓಬವ್ವ ಜಯಂತಿಯಲ್ಲಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
