By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಗ್ರಾಮ ದೇವತೆಗಳ ವೈಭವದ ಅಲಂಕಾರ
    ಶ್ರಾವಣ ಮಂಗಳವಾರ | ಹಣ್ಣು, ತರಕಾರಿ ಹಾಗೂ ಪುಷ್ಪಗಳಿಂದ ಗ್ರಾಮ ದೇವತೆಗಳ ವೈಭವದ ಅಲಂಕಾರ
    2 hours ago
    ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿದರು
    ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ | ಎಸ್.ಜಿ.ಸಿದ್ದರಾಮಯ್ಯ
    2 hours ago
    ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ
    ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ 
    3 hours ago
    ವಿಜೃಂಭಣೆಯಿಂದ ನಡೆದ ಈದ್ ಮಿಲಾದ್ ಮೆರವಣಿಗೆ
    ವಿಜೃಂಭಣೆಯಿಂದ ನಡೆದ ಈದ್ ಮಿಲಾದ್ ಮೆರವಣಿಗೆ
    3 hours ago
    ಸೆ.2ರಂದು ಬಾಪೂಜಿ ಪ್ರಬಂಧ ಸ್ಪರ್ಧೆ | ವಿದ್ಯಾರ್ಥಿಗಳಿಗೆ ಸಿಇಒ ಡಾ.ಆಕಾಶ್ ಕರೆ
    14 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    6 days ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    2 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    1 month ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    1 month ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    3 days ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    3 weeks ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    1 month ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    3 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಆಗಸ್ಟ್ 26 | ಶುಭ ಸುದ್ದಿ, ಕೈಗೊಂಡ ಕಾರ್ಯಗಳು ಯಶಸ್ವಿ
    14 hours ago
    today bhavishya
    ದಿನ ಭವಿಷ್ಯ | ಆಗಸ್ಟ್ 25 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    2 days ago
    today bhavishya
    ದಿನ ಭವಿಷ್ಯ | ಆಗಸ್ಟ್ 24 | ಅನಿರೀಕ್ಷಿತ ಸಮಸ್ಯೆಗಳು, ಉದ್ಯೋಗದಲ್ಲಿ ಬಡ್ತಿ
    3 days ago
    today bhavishya
    ದಿನ ಭವಿಷ್ಯ | ಆಗಸ್ಟ್ 23 | ಆಕಸ್ಮಿಕ ಧನಲಾಭ, ದೂರದ ಪ್ರಯಾಣ ಬೇಡ
    4 days ago
    today bhavishya
    ದಿನ ಭವಿಷ್ಯ | ಆಗಸ್ಟ್ 22 | ಉದ್ಯೋಗದಲ್ಲಿ ಕೆಲಸದ ಒತ್ತಡ, ಆರ್ಥಿಕ ಪರಿಸ್ಥಿತಿ ಆಶಾದಾಯಕ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಆಗಸ್ಟ್ 24 | ಮೆಕ್ಕೆಜೋಳ, ಶೇಂಗಾ ರೇಟ್…..
    2 days ago
    ಮಾರುಕಟ್ಟೆ ಧಾರಣೆ | ಆಗಸ್ಟ್ 20 | ಹತ್ತಿ ರೇಟ್ ಎಷ್ಟಿದೆ?
    6 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಆಗಸ್ಟ್ 19 | ಮೆಕ್ಕೆಜೋಳ, ಶೇಂಗಾ ರೇಟ್…..
    1 week ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    1 week ago
    ಮಾರುಕಟ್ಟೆ ಧಾರಣೆ | ಆಗಸ್ಟ್ 17 | ಶೇಂಗಾ ರೇಟ್ ಎಷ್ಟಿದೆ?
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    2 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    2 weeks ago
    ಗುರು–ಲಿಂಗ–ಜಂಗಮ ವಿಷಯದ ಕುರಿತು ಉಪನ್ಯಾಸ
    ಅಷ್ಟಾವರಣಗಳು ಆಧ್ಯಾತ್ಮಿಕ ಬದುಕಿನ ರಕ್ಷಣಾ ಕವಚ | ಡಾ.ಜಿ.ವಿ.ಮಂಜುನಾಥ
    3 weeks ago
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
    1 month ago
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    2 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    2 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    6 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    3 days ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    3 weeks ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    2 months ago
  • Life Style
    Life StyleShow More
    Pomegranate
    ಈ ಐದು ಜನರು ದಾಳಿಂಬೆ ತಿನ್ನುವುದು ಹಾನಿಕಾರಕವಂತೆ
    13 hours ago
    Noni fruit
    ಕೂದಲು ಉದುರುವಿಕೆಗೆ ನೋನಿ ಹಣ್ಣು ಪ್ರಯೋಜನಕಾರಿಯೇ? ತಿಳಿಯಿರಿ
    14 hours ago
    Rose petal
    ನಿಮ್ಮ ಮುಖ ಕಾಂತಿಯುತವಾಗಿರಲು ಗುಲಾಬಿ ದಳಗಳು ಮತ್ತು ಹಸಿ ಹಾಲಿನಿಂದ ತಯಾರಿಸಿದ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ
    2 days ago
    fruits
    ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಆಗಾಗ್ಗೆ ಕಡಿಮೆಯಾಗುತ್ತಿದ್ದರೆ ಈ ಹಣ್ಣುಗಳನ್ನು ತಿನ್ನಿ
    2 days ago
    Turmeric
    ಯಾವ ರೀತಿಯ ಗಾಯಗಳಿಗೆ ಅರಿಶಿನ ಮದ್ದು ಎಂಬುದನ್ನು ತಿಳಿಯಿರಿ
    3 days ago
Reading: ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಿ | ADC ಕುಮಾರಸ್ವಾಮಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಿ | ADC ಕುಮಾರಸ್ವಾಮಿ

News Desk Chitradurga News
Last updated: 15 October 2025 18:25
News Desk Chitradurga News
11 months ago
Share
ಕನ್ನಡ ರಾಜ್ಯೋತ್ಸವ ಆಚರಿಸುವ ಹಿನ್ನಲೆಯಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ
SHARE

CHITRADURGA NEWS | 15 OCTOBER 2025

ಚಿತ್ರದುರ್ಗ: ನಾಡಿನ ಇತಿಹಾಸ, ಕಲೆ ಹಾಗೂ ಸಾಂಸ್ಕøತಿಕ ವೈಭವ ಸಾರುವ ನಿಟ್ಟಿನಲ್ಲಿ ಬರುವ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸ್ವಾಗತ, ಹಣಕಾಸು, ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳ ಹಾಗೂ ವೇದಿಕೆ ಸಮಿತಿಗಳನ್ನು ರಚಿಸಲಾಗಿದೆ. ಇದರನ್ವಯ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: RSS BAN | ಮೂರ್ಖತನದ ಪರಮಾವಧಿ | ಬಿ.ವೈ.ವಿಜಯೇಂದ್ರ

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಹಿನ್ನಲೆಯಲ್ಲಿ ಜರುಗಿದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಜಿಲ್ಲಾ ಕೇಂದ್ರದಲ್ಲಿ ನ. 01 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮವನ್ನು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 07.30 ಗಂಟೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಬಳಿಕ ಬೆಳಿಗ್ಗೆ 09 ಗಂಟೆಗೆ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.  

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಅನುವಾಗುವಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗುವುದು. ಸ್ವಾಗತ ಸಮಿತಿ ಶಿಷ್ಟಾಚಾರದ ಅನುಸಾರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಬೇಕು. 

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 15 | ಮೆಕ್ಕೆಜೋಳ ರೇಟ್ ಎಷ್ಟಿದೆ?

ಆಯಾ ತಾಲ್ಲೂಕುಗಳ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಿ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಜಿಲ್ಲಾ ಪಂಚಾಯಿತಿ ಸಿಇಓ ನೇತೃತ್ವದಲ್ಲಿ ಹಣಕಾಸು ಸಮಿತಿ ರಚಿಸಲಾಗಿದ್ದು, ಸಮಿತಿಯ ಎಲ್ಲಾ ಸದಸ್ಯ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಗೆ ಅಗತ್ಯವಿರುವ ಖರ್ಚು ವೆಚ್ಚಗಳನ್ನು ಭರಿಸಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸ್ಥಬ್ದಚಿತ್ರ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸರ್ಕಾರದ ಸಾಧನೆ ಹಾಗೂ ಯೋಜನೆಗಳನ್ನು ಬಿಂಬಿಸುವ ವೈವಿಧ್ಯಮಯ ಸ್ತಬ್ಧಚಿತ್ರಗಳನ್ನು ನಿರ್ಮಿಸಿ, ರಾಜ್ಯೋತ್ಸವ ದಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. 

ದಸರಾ ಮೆರವಣಿಗೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಜಿಲ್ಲೆಯ ಸ್ತಬ್ಧಚಿತ್ರವನ್ನು ಸಹ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. ನವೆಂಬರ್ 01 ರಂದು ಬೆಳಿಗ್ಗೆ 7.30ಕ್ಕೆ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯು ನಗರದ ನೀಲಕಂಠೇಶ್ವರ ದೇಗುಲದಿಂದ ಪ್ರಾರಂಭವಾಗಲಿದೆ. 

ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮಿತಿ ಭಾಗವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಕಾರ್ಯ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ಕಚೇರಿಯಲ್ಲೇ‌ ನೀರಿನ ಕ್ಯಾನ್ ಗೆ ಮದ್ಯ ಮಿಕ್ಸ್ | ಡಿಡಿಪಿಐ ಕಚೇರಿ ಸಿಬ್ಬಂದಿ ಅಮಾನತು

ಮೆರವಣಿಗೆಯು ನಗರದ ನೀಲಕಂಠೇಶ್ವರದ ದೇಗುಲದಿಂದ ಹೊರಟು, ಪ್ರಮುಖ ರಸ್ತೆ ಮೂಲಕ ರಾಜ್ಯೋತ್ಸವ ಸಮಾರಂಭ ಜರುಗುವ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿ ಬರಲಿದೆ. ಕಾರ್ಯಕ್ರಮದಲ್ಲಿ ಶಿಷ್ಠಚಾರದ ಅನ್ವಯ ಎಲ್ಲ ಗಣ್ಯಮಾನ್ಯರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಬೇಕು. 

ತೋಟಗಾರಿಕೆ ಇಲಾಖೆ ಹಳದಿ ಮತ್ತು ಕೆಂಪು ಹೂಗಳ ಗಿಡಗಳಿಂದ ವೇದಿಕೆ ಸಿಂಗರಿಸಬೇಕು. ನಗರಸಭೆ ವತಿಯಿಂದ ಪೊಲೀಸ್ ಕವಾಯತು ಮೈದಾನವನ್ನು ಸ್ವಚ್ಛಗೊಳಿಸಿ, ಧ್ವಜಸ್ಥಂಭ ಸಿದ್ಧಪಡಿಸಬೇಕು. ಇದರೊಂದಿಗೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ಶಾಮಿಯಾನ ವ್ಯವಸ್ಥೆ ಮಾಡಬೇಕು. 

ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಶಿಷ್ಟಾಚಾರದ ಪ್ರಕಾರ ಧ್ವಜಗಳನ್ನು ಕಟ್ಟಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಿತಿ ರಚನೆ ಮಾಡಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಹಾರ ಇಲಾಖೆ ವತಿಯಿಂದ ಮಕ್ಕಳಿಗೆ ಸಿಹಿವಿತರಣೆಗೆ ಕ್ರಮ ಕೈಗೊಳ್ಳಬೇಕು.

 ಕೃಷಿ, ಕ್ರೀಡೆ, ಸಮಾಜ ಸೇವೆ, ಶಿಕ್ಷಣ ಮತ್ತು ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ, ಮಾಧ್ಯಮ ಮತ್ತು ಛಾಯಾಗ್ರಹಣ, ವೈದ್ಯಕೀಯ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆಗೈದ ಜಿಲ್ಲೆಯ ಮಹನೀಯರನ್ನು ಸನ್ಮಾನಿಸಲು ಉಪವಿಭಾಗಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ರಚಿಸಲಾಗಿದ್ದು, ಸಾಧಕರ ಆಯ್ಕೆ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಎಲ್ಲಾ ಸಮಿತಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ, ರಾಜ್ಯೋತ್ಸವವನ್ನು ಆಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಬೈಕ್ ಅಪಘಾತ | ಇಬ್ಬರು ಸಾವು 

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಡಿ.ಆರ್. ವಿಭಾಗದ ಡಿವೈಎಸ್ಪಿ ಶ್ರೀನಿವಾಸ್, ಆಹಾರ ಇಲಾಖೆ ಉಪನಿರ್ದೇಶಕ ಸಿದ್ರಾಮ ಮಾರಿಹಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ತಹಶೀಲ್ದಾರ್ ಗೋವಿಂದರಾಜು, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsKannada Rajyotsavaಕನ್ನಡ ರಾಜ್ಯೋತ್ಸವಚಿತ್ರದುರ್ಗಚಿತ್ರದುರ್ಗ ನ್ಯೂಸ್
Share This Article
Facebook Email Print
Previous Article ಬಿ.ವೈ.ವಿಜಯೇಂದ್ರ RSS BAN | ಮೂರ್ಖತನದ ಪರಮಾವಧಿ | ಬಿ.ವೈ.ವಿಜಯೇಂದ್ರ
Next Article arecanut price list ಅಡಿಕೆ ಧಾರಣೆ | ಗಗನಮುಖಿಯಾದ ಅಡಿಕೆ ಬೆಲೆ | ರೈತರಲ್ಲಿ ಕುತೂಹಲ
Leave a Comment

Leave a Reply Cancel reply

Your email address will not be published. Required fields are marked *

ಗ್ರಾಮ ದೇವತೆಗಳ ವೈಭವದ ಅಲಂಕಾರ
ಶ್ರಾವಣ ಮಂಗಳವಾರ | ಹಣ್ಣು, ತರಕಾರಿ ಹಾಗೂ ಪುಷ್ಪಗಳಿಂದ ಗ್ರಾಮ ದೇವತೆಗಳ ವೈಭವದ ಅಲಂಕಾರ
ಮುಖ್ಯ ಸುದ್ದಿ
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿದರು
ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ | ಎಸ್.ಜಿ.ಸಿದ್ದರಾಮಯ್ಯ
ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ
ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ 
ಮುಖ್ಯ ಸುದ್ದಿ
ವಿಜೃಂಭಣೆಯಿಂದ ನಡೆದ ಈದ್ ಮಿಲಾದ್ ಮೆರವಣಿಗೆ
ವಿಜೃಂಭಣೆಯಿಂದ ನಡೆದ ಈದ್ ಮಿಲಾದ್ ಮೆರವಣಿಗೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up