
CHITRADURGA NEWS | 15 OCTOBER 2025
ಚಿತ್ರದುರ್ಗ: ಆರ್‍ಎಸ್‍ಎಸ್(RSS) ಬ್ಯಾನ್ ಮಾಡ್ತೀವಿ ಅನ್ನೋದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 15 | ಮೆಕ್ಕೆಜೋಳ ರೇಟ್ ಎಷ್ಟಿದೆ?
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ರೈತರ ಪರದಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಬಿಟ್ಟಿ ಪ್ರಚಾರಕ್ಕಾಗಿ ಗಿಮಿಕ್ ಬಿಡಲಿ. ಬೆದರಿಕೆ ಕರೆ ಬರುತ್ತಿದೆ ಎಂಬ ಅನಾವಶ್ಯಕ ಮಾತು ಬಿಡಲಿ. ತಮ್ಮ ಖಾತೆಯ ಅಭಿವೃದ್ಧಿ ಬಗ್ಗೆ ಮಾತಾಡಲಿ.
ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗದೆ ಶಾಸಕರಲ್ಲಿ ಹತಾಶೆ, ವಿಪಕ್ಷ ಶಾಸಕರಿಗೆ 25 ಕೋಟಿ, ಕೈ ಶಾಸಕರಿಗೆ 50 ಕೋಟಿ ಅನುದಾನ ವಿಚಾರ ಕೇವಲ ಹಾಳೆಯ ಮೇಲೆ ಮಾತ್ರ ಬರೆದಂತಾಗಿದೆ. ಅನುದಾನ ನೀಡದ ಬಗ್ಗೆ ಕೈ ಶಾಸಕರೇ ಬಹಿರಂಗವಾಗಿ ಹೇಳಿದ್ದಾರೆ.
ನಾವು ಸದನದ ಒಳಗೆ, ಹೊರಗೆ ಅನೇಕ ಸಲ ಅನುದಾನಕ್ಕೆ ಆಗ್ರಹಿಸಿದ್ದೇವೆ. ಈಗಲಾದರೂ ಸರ್ಕಾರ ಎಲ್ಲಾ ಕ್ಷೇತ್ರಕ್ಕೂ ಸಮಾನ ಅನುದಾನ ನೀಡಲಿ. ಸಚಿವರು ಇಲಾಖೆಯಲ್ಲಿ ಏನು ಕಡೆದು ಕಟ್ಟೆ ಹಾಕಿದ್ದಾರೆ ತಿಳಿಸಲಿ.
ಇದನ್ನೂ ಓದಿ: ಕಚೇರಿಯಲ್ಲೇ ನೀರಿನ ಕ್ಯಾನ್ ಗೆ ಮದ್ಯ ಮಿಕ್ಸ್ | ಡಿಡಿಪಿಐ ಕಚೇರಿ ಸಿಬ್ಬಂದಿ ಅಮಾನತು
ಸಚಿವ ಪ್ರಿಯಾಂಕ ಖರ್ಗೆಗೆ ಗೌರವಯುತವಾಗಿ ಹೇಳುತ್ತೇನೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ. ಇಲಾಖೆಯ ಅಭಿವೃದ್ಧಿ ಬಗ್ಗೆ ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡಿ. ಐದಾರು ದಶಕದಿಂದ ಕಲಬುರ್ಗಿ ಜಿಲ್ಲೆ ಖರ್ಗೆ ಕುಟುಂಬದ ಹಿಡಿತದಲ್ಲಿದೆ. ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ.
ರಾಜ್ಯದಲ್ಲಿ ಕಲಬುರ್ಗಿ ಜಿಲ್ಲೆ ಶಿಕ್ಷಣದಲ್ಲಿ ಕೊನೆ ಸ್ಥಾನದಲ್ಲಿ ಉಳಿದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಈ ರೀತಿ ಯತ್ನ ಮಾಡುತ್ತಿದ್ದಾರೆ.
ಸಿದ್ಧರಾಮಯ್ಯ ಡಿನ್ನರ್ ಮೀಟಿಂಗ್‍ನಲ್ಲಿ ಏನು ಚರ್ಚೆ ಆಯಿತು. ಕಲ್ಯಾಣ ಕರ್ನಾಟಕಕ್ಕೆ ಪರಿಹಾರ ಕ್ರಮದ ಚರ್ಚೆ ನಡೆಯಿತಾ? ರಾಜ್ಯವನ್ನು ಲೂಟಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಬಿಹಾರ ಚುನಾವಣೆಗೆ ಹಣ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಲಬುರ್ಗಿ ಲೈಬ್ರೆರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ರೈತರ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿದೆ.
ಬೆಂಗಳೂರು ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನ ಉಗಿಯುತ್ತಿದ್ದಾರೆ. ಬಯೋಕಾನ್ ನ ಕಿರಣ್ ಮುಜುಂದಾರ್ ಶಾ ಬಗ್ಗೆ ಇವರು ಕೆಟ್ಟದಾಗಿ ಮಾತಾಡ್ತಾರೆ.
ಇದನ್ನೂ ಓದಿ: ಬೈಕ್ ಅಪಘಾತ | ಇಬ್ಬರು ಸಾವು
ಈ ಹಿಂದೆ ಮೋಹನ್ ದಾಸ್ ಪೈ ಟೀಕಿಸಿದಾಗ ಅಂದು ಸಿಎಂ ಬಿಎಸ್‍ವೈ ಕರೆದು ಮಾತಾಡಿದ್ದರು. ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದರು. ಕಿರಣ್, ಮೋಹನ್ ದಾಸ್ ಪೈ ಅವರಂಥ ದಿಗ್ಗಜರು ಸಲಹೆ ನೀಡಿದಾಗ ಸ್ವೀಕರಿಸಬೇಕು. ದಿಗ್ಗಜರಿಗೆ ಟೀಕಿಸಿ ಅವಮಾನಿಸುವುದು ರಾಜ್ಯಕ್ಕೆ ಅವಮಾನ ಎಂದರು.
ಸಂಸದ ಗೋವಿಂದ ಕಾರಜೋಳ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಿದ್ದಾಪುರದ ಸುರೇಶ್, ಮಂಡಲ ಅಧ್ಯಕ್ಷ ನಾಗರಾಜ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
