By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಪದವಿ ವಿದ್ಯಾರ್ಥಿಗಳಿಗೆ ಕೆರಿಯರ್ ಕನೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ
    ಪದವಿ ವಿದ್ಯಾರ್ಥಿಗಳಿಗೆ ಕೆರಿಯರ್ ಕನೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ 
    33 minutes ago
    ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ
    ಚಿತ್ರದುರ್ಗದಲ್ಲಿ ಯಕ್ಷಗಾನ ತಾಳಮದ್ದಳೆ | ಆಲಾಪಕ್ಕೆ ತಲೆದೂಗಿದ ಯಕ್ಷಗಾನ ಪ್ರಿಯರು
    13 hours ago
    ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಪ್ರಗತಿ ಪರಿಶೀಲನಾ ಸಭೆಯ ಸಿದ್ಧತೆ ಪರಿಶೀಲನೆ
    ಬರದ ನಾಡಲ್ಲಿ ಮುಖ್ಯಮಂತ್ರಿ ಪ್ರಗತಿ ಪರಿಶೀಲನಾ ಸಭೆ | ಅನುಭವ ಮಂಟಪದಲ್ಲಿ ಭರದ ತಯಾರಿ
    13 hours ago
    ರೈತರ ತರಬೇತಿ ಕಾರ್ಯಕ್ರಮ
    ರೈತರು ಹನಿ ನೀರಾವರಿ, ಸಾವಯವ ಪದ್ಧತಿ ಅಳವಡಿಸಿಕೊಳ್ಳಿ | ಕೃಷ್ಣಮೂರ್ತಿ
    1 day ago
    ಟಿ. ರಘುಮೂರ್ತಿ
    ತಪ್ಪದೇ ಎಲ್ಲಾ ರೈತರು ಬೆಳೆವಿಮೆ ನೋಂದಾಯಿಸಿಕೊಳ್ಳಿ | ಶಾಸಕ ಟಿ.ರಘುಮೂರ್ತಿ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 days ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 weeks ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    4 weeks ago
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    1 month ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    2 months ago
  • ತಾಲೂಕು
    ತಾಲೂಕುShow More
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    1 week ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    2 weeks ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ | ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗೀ 
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 weeks ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಜುಲೈ 24 | ಆದಾಯಕ್ಕಿಂತ ಖರ್ಚು ಹೆಚ್ಚು, ಶುಭ ಸುದ್ದಿ
    2 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜುಲೈ 23 | ಕೈಗೊಂಡ ಕಾರ್ಯಗಳು ಪೂರ್ಣ, ವೃತ್ತಿ ಹಾಗೂ ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ
    1 day ago
    today bhavishya
    ದಿನ ಭವಿಷ್ಯ | ಜುಲೈ 22 | ಉದ್ಯೋಗದಲ್ಲಿ ಗೊಂದಲದ ವಾತಾವರಣ, ಅರೋಗ್ಯದ ಬಗ್ಗೆ ಕಾಳಜಿ ವಹಿಸಿ
    2 days ago
    today bhavishya
    ದಿನ ಭವಿಷ್ಯ | ಜುಲೈ 21 | ಆರ್ಥಿಕ ಪರಿಸ್ಥಿತಿ ಅನುಕೂಲಕರ, ಉದ್ಯೋಗದಲ್ಲಿ ಕೆಲಸದ ಒತ್ತಡ
    3 days ago
    today bhavishya
    ದಿನ ಭವಿಷ್ಯ | ಜುಲೈ 20 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೂರದ ಪ್ರಯಾಣ ಬೇಡ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
    17 hours ago
    ಮಾರುಕಟ್ಟೆ ಧಾರಣೆ | ಜುಲೈ 22 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಜುಲೈ 21 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಜುಲೈ 20 | ಮೆಕ್ಕೆಜೋಳ, ರಾಗಿ ರೇಟ್…
    4 days ago
    12 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
    35 minutes ago
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    5 days ago
    ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
    ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಲ್ಲ | KDP ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ 
    6 days ago
    ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    ಹೊಳಲ್ಕೆರೆ : ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    6 days ago
    ಪುರಾತನ ದೇವಾಲಯದ ಜೀರ್ಣೋದ್ಧಾರ, ವಿಶೇಷ ಪೂಜಾ ಕಾರ್ಯಕ್ರಮ
    ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
    2 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    1 month ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    1 month ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    3 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    5 months ago
  • ಹೊಸದುರ್ಗ
    ಹೊಸದುರ್ಗShow More
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    1 month ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 months ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 months ago
  • Life Style
    Life StyleShow More
    endometrial cancer that plague women
    ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯಲ್ ಕ್ಯಾನ್ಸರ್‍ನ ಲಕ್ಷಣಗಳ ಬಗ್ಗೆ ತಿಳಿಯಿರಿ
    23 minutes ago
    cow's milk to children
    ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲು ನೀಡಿದರೆ ಏನಾಗುತ್ತದೆ ಗೊತ್ತಾ?
    1 hour ago
    Damaged electronic item
    ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ?
    1 day ago
    Apply this tomato scrub to remove stubborn tanning
    ಮೊಂಡುತನದ ಟ್ಯಾನಿಂಗ್ ಅನ್ನು ತೆಗೆದುಹಾಕಲು ಹಚ್ಚಿ ಈ ಟೊಮೆಟೊ ಸ್ಕ್ರಬ್
    1 day ago
    Retinol
    ರೆಟಿನಾಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವವರು ಈ ನಿಯಮಗಳನ್ನು ಪಾಲಿಸಿರಿ
    2 days ago
Reading: ಜಾತಿ ಗಣತಿ ಬದಲಿಗೆ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ನೀಡಲಿ | ತರಳಬಾಳು ಶ್ರೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಜಾತಿ ಗಣತಿ ಬದಲಿಗೆ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ನೀಡಲಿ | ತರಳಬಾಳು ಶ್ರೀ

News Desk Chitradurga News
Last updated: 24 September 2025 20:03
News Desk Chitradurga News
10 months ago
Share
ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿಯ ಸಮಾರೋಪ ಸಮಾರಂಭ
SHARE

CHITRADURGA NEWS | 24 SEPTEMBER 2025

ಚಿತ್ರದುರ್ಗ: ಮೀಸಲಾತಿ ಇಲ್ಲದೇ ಹೋಗಿದ್ದರೆ ಯಾರು ಸಹ ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಸುತ್ತಿರಲಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಜಾತಿ ಗಣತಿಯಿಂದ ಜಾತಿಗಳ ಸಂಘರ್ಷಕ್ಕೆ ಕಾರಣವಾಗುತ್ತದೆ. ಸರ್ಕಾರವು ರಾಜ್ಯದ ಜನರ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯಗಳನ್ನು ನೀಡಲು ಗಮನ ಹರಿಸಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಇದನ್ನೂ ಓದಿ: ಹಿರಿಯೂರು | ನಾಳೆ ವಿದ್ಯುತ್ ವ್ಯತ್ಯಯ

ಸಿರಿಗೆರೆಯಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿಯ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ತಾತ್ವಿಕ ನೆಲೆಗಟ್ಟಿನಲ್ಲಿ ಬಸವಪಂಥಿಯವರು ಮೀಸಲಾತಿ ಕೇಳಬಾರದು. ಸಾಮಾಜಿಕವಾಗಿ ಕೆಳಸ್ತರವಾಗಿರುವವರಿಗೆ ಮೀಸಲಾತಿ ಸಿಗಲಿ. ಸರ್ಕಾರ ಜಾತಿಗಳ ವರ್ಗಿಕರಣ ಮಾಡದೇ ಬಡತನದ ಮೇಲೆ ವರ್ಗೀಕರಣ ಮಾಡಿಲಿ. ಸಾಮಾಜಿಕವಾಗಿ ಜಾತಿ ಗಣತಿಯಿಂದ ಯಾವುದೇ ಉಪಯೋಗವಿಲ್ಲ. ಸರ್ಕಾರವು ಬಸವಣ್ಣನವರ ಭಾವಚಿತ್ರದ ಜೊತೆಗೆ ವಚನ ಸಾಹಿತ್ಯ ತತ್ವಗಳನ್ನು ಜಾತಿಗಣತಿಯಲ್ಲಿ ಅಳವಡಿಸಿಕೊಳ್ಳಬೇಕು. ಗ್ಯಾರಂಟಿಯೋಜನೆಗಳಲ್ಲಿ ಜಾತಿ ಇಲ್ಲ. ಹಾಗೆ ಗಣತಿಯಲ್ಲಿ ಜಾತಿಯನ್ನು ಪರಿಗಣಿಸಬಾರದು.

ಭಕ್ತಿಸಂಪನ್ನ ಶಿಷ್ಯರು ಮಠಕ್ಕೆ ಹತ್ತಿರವಾಗುತ್ತಿದ್ದರೆ, ವ್ಯವಹಾರಿಕ ಸಂಬಂಧ ಇರುವವರು ಮಠದಿಂದ ದೂರ ಸರಿಯುತ್ತಿದ್ದಾರೆ. ಎಲ್ಲಾ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಸಂಪೂರ್ಣವಾಗಿ ಸ್ಪಂದಿಸಿವೆ. ಶಿವಕುಮಾರ ಶ್ರೀಗಳು ಮಠವನ್ನು ನೈತಿಕ ಶಕ್ತಿಯಿಂದ ಮುನ್ನಡೆಸಿದ್ದಾರೆ. ಶಿಷ್ಯರು ಶ್ರೀಮಂತರಾದರೆ ಮಠವು ತಾನಗೆ ಶ್ರೀಮಂತವಾಗುತ್ತದೆ. ಎಂದರು.

ಇದನ್ನೂ ಓದಿ: ಕರಾಟೆ ತರಬೇತಿ ನೀಡಲು ಮಹಿಳಾ ತರಬೇತಿದಾರರಿಂದ ಅರ್ಜಿ

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿರಿಗೆರೆ ಮಠವು ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುತ್ತಿದ್ದು, ಪ್ರಚಲಿತ ವರ್ತಮಾನಗಳಿಗೆ ತಕ್ಕಂತೆ ಸಹಕಾರ ನೀಡುತ್ತಿದೆ. ಗುರುಪರಂಪರೆಯನ್ನು ಆಚರಿಸುವುದು ಈ ಮಠದ ವೈಶಿಷ್ಟ್ಯ. ಲಿಂ.ಶ್ರೀಗಳು ನಡೆದಾಡುವ ದೇವರು. 

ಸಾಧಕರಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಅವರ ಬದುಕು ಜೀವಂತವಾಗಿರುತ್ತದೆ. ಮಠ ಶ್ರೀಮಂತವಾಗಿಲ್ಲ, ಆದರೆ ಮಠವನ್ನು ನಂಬಿದ ಭಕ್ತರು ಶ್ರೀಮಂತರಾಗಿದ್ದಾರೆ. ಶ್ರೀಗಳ ಹೃದಯ ತಾಯಿಯ ಹೃದಯದಂತೆ, ಶುದ್ಧ ಮನಸ್ಸಿನಂತೆ. ಮಾನವ ತತ್ವದ ಮೇಲೆ ನಡೆದು ಆತ್ಮಸಾಕ್ಷಾತ್ಕಾರವನ್ನು ಸಾಧಿಸುವುದು ಮುಖ್ಯ. ಇಂದಿನ ಸಂಘರ್ಷಮಯ ಬದುಕಿನಲ್ಲಿ ವೈಚಾರಿಕತೆ ಕೊರತೆಯಿಂದ ಸಮಾಜ ಗೊಂದಲದಲ್ಲಿದೆ ಎಂದರು.

ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ ಸರ್ಕಾರ ಮಾಡದ ಜನಪರ ಕೆಲಸಗಳನ್ನು ತರಳಬಾಳು ಶ್ರೀಗಳು ಮಾಡಿದ್ದಾರೆ. ರೈತಪರ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅನ್ನ, ಅಕ್ಷರ ದಾಸೋಹದ ಮೂಲಕ ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಸಂಸ್ಕಾರ ಬೆಳೆಸಿರುವುದು ಮಠದ ಹೆಗ್ಗಳಿಕೆ. ಈಡೀ ದೇಶಕ್ಕೆ ಮಾದರಿಯಾದ ಮಠವೆಂದರೆ ಅದು ತರಳಬಾಳು ಮಠ. ಮಠಕ್ಕಿಂತ ಮಠದ ಭಕ್ತರು ಶ್ರೀಮಂತರಾಗಲಿ ಎಂಬುದು ಶ್ರೀಗಳ ನಿಜವಾದ ಆಶಯ ಎಂದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 24 | ಮೆಕ್ಕೆಜೋಳ ರೇಟ್ ಎಷ್ಟಿದೆ?

ಶಾಸಕರಾದ ಶಿವಗಂಗಾ ಬಸವರಾಜ್ ಮಾತನಾಡಿ, ಇವತ್ತಿನ ದುಷ್ಟ ಶಕ್ತಿಗಳು ನಮ್ಮನ್ನು ಹಾಳು ಮಾಡಲು ಯತ್ನಿಸುತ್ತಿವೆ. ಆದರೆ ಲಿಂ. ಶಿವಕುಮಾರ ಶ್ರೀಗಳು ಕಟ್ಟಿಬೆಳೆಸಿದ ಸಮಾಜ ಉಳಿಯಬೇಕಾದರೆ ಎಲ್ಲರೂ ಶ್ರಮಿಸಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕಾಗಿದೆ. ತರಳಬಾಳು ಮಠ ಆಧುನಿಕ ಭಗೀರಥ ಪೀಠವಾಗಿದೆ. ಹಿರಿಯ ಗುರುಗಳ ದಿಟ್ಟತನ, ಆಶೀರ್ವಾದ ಮತ್ತು ಭಕ್ತಿಯ ಭಾವನೆ ಎಲ್ಲರ ಮೇಲೂ ಹರಿಯುತ್ತಿವೆ. ಹೀಗಾಗಿ ಸಮಾಜ ಉಳಿವಿಗೆ ಸದ್ಭಕ್ತರ ಸಮರ್ಪಣೆ ಅಗತ್ಯ ಎಂದರು.

ಮಾಜಿ ಸಚಿವರಾದ ಹೆಚ್.ಆಂಜನೇಯ ಮಾತನಾಡಿ ಲಿಂ. ಶಿವಕುಮಾರ ಶ್ರೀಗಳು ಗ್ರಾಮೀಣ ಭಾಗಗಳಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಬಡವರ ಬದುಕಿಗೆ ಬೆಳಕಾಗಿದ್ದಾರೆ. ಸಿರಿಗೆರೆ ಮಠ ಜಾತಿಯತೆ, ಅಸ್ಪೃಶ್ಯತೆಯನ್ನು ಹೊಗಲಾಡಿಸಿದೆ. ಇಲ್ಲಿ ಭಕ್ತರು ಶಿಸ್ತುವಂತರು, ಹೃದಯಂತರೂ, ಭಕ್ತಿವಂತರೂ ಆಗಿದ್ದಾರೆ. ಡಾ. ಶ್ರೀಗಳ ಇಚ್ಚಾಶಕ್ತಿ ರೈತರ ಕಲ್ಯಾಣಕ್ಕಾಗಿ ಮುಡಿಪಾಗಿದೆ. ಹಿರಿಯ ಗುರುಗಳು ಪ್ರಾರಂಭಿಸಿದ ವಚನ ಸಾಹಿತ್ಯ ಪ್ರಸಾರದ ಕಾರ್ಯವನ್ನು ಈಗಿನ ಶ್ರೀಗಳು ತಂತ್ರಜ್ಞಾನ ಸಹಾಯದಿಂದ ಮುಂದುವರೆಸುತ್ತಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಶಾಸಕರಾದ ಡಾ. ಎಂ. ಚಂದ್ರಪ್ಪ ಅವರು ಮಾತನಾಡಿ ಶಿವಕುಮಾರ ಶ್ರೀಗಳು ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಜ್ಞಾನದಾಸೋಹ, ಅನ್ನದಾಸೋಹ ಒದಗಿಸಿದರು. ಅವರು ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಭೇದಭಾವವಿಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಕಾಯಕಶೀಲತೆ ಒಂದು ವಿಶೇಷತೆ. ಇಂದಿನ ಶ್ರೀಗಳು ರೈತರ ಬದುಕಿಗೆ ದಾರಿದೀಪವಾಗಿ ಸಮಾಜವನ್ನು ಉನ್ನತ ಮಟ್ಟಕ್ಕೆ ತರುವ ಕಾರ್ಯಗಳಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಶಿಕ್ಷಕರ ಸೇವಾ ಮನೋಭಾವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ | ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ

ಶಾಸಕರಾದ ಯು.ಬಿ.ಬಣಕಾರ್ ಮಾತನಾಡಿ ಶ್ರೀಗಳ ಶ್ರದ್ಧಾಂಜಲಿಯು ಸಮಾಜ ಚಿಂತನೆಯ ಕಾರ್ಯಕ್ರಮವಾಗಿದೆ. ಎಲ್ಲಾ ಸರ್ಕಾರಗಳು ಶ್ರೀಗಳ ಜನಪರ ಕೆಲಸಗಳಿಗೆ ಸ್ಪಂದಿಸಿವೆ. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಶಿವಕುಮಾರ ಶ್ರೀಗಳು ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ತೆರೆದು ಸಮಾನ ಶಿಕ್ಷಣ, ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡಿದರು. 

ಡಾ. ಶ್ರೀಗಳು ನೀರಾವರಿ ಯೋಜನೆಗಳ ಮೂಲಕ ರೈತರಿಗೆ ನೆರವಾಗಿದ್ದಾರೆ. ಬರುವ ದಿನಗಳಲ್ಲಿ ಪರಮಪೂಜ್ಯರ ಅಣತಿಯಂತೆ, ಆಶೀರ್ವಾದದಂತೆ ನಡೆಯೋಣ ಎಂದರು. 

ಶಾಸಕರಾದ ಟಿ.ರಘುಮೂರ್ತಿ ಮಾತನಾಡಿ, ಹಿರಿಯ ಗುರುಗಳ ಮಾರ್ಗದರ್ಶನ, ಚಿಂತನೆಗಳು ನಮ್ಮೆಲ್ಲರ ಬಾಳಿಗೆ ಬೆಳಕಾಗಲಿ. ಸಮಾಜದ ಸಂಸ್ಕೃತಿ, ಆಚರಣೆಗೆ ಅವರು ನೀಡುತ್ತಿರುವ ಸಹಕಾರ ಸಂತೋಷ ತಂದಿದೆ. ಶ್ರೀಗಳು ವಿಶ್ವಕ್ಕೆ ವಚನ ಸಾಹಿತ್ಯವನ್ನು ಪಸರಿಸಿದ್ದಾರೆ. ಬಿಸಿಲು ಬೆಳದಿಂಗಳು ಅಂಕಣದ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದುತ್ತಿದ್ದಾರೆ. ಸಮಾಜದಲ್ಲಿ ಕಾಲಕಾಲಕ್ಕೆ ನಡೆಯುವ ದೋಷಗಳನ್ನು ತಿದ್ದಿ, ಭಕ್ತರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರು.

ಶ್ರೀಮಠ ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಅವರು ಮಾತನಾಡಿ, ಸಿರಿಗೆರೆ ಮಠವು ಜಾತ್ಯತೀತ ಮಠವಾಗಿದೆ. ಕಾಲ ಕಾಲಕ್ಕೂ ಮಠಕ್ಕೆ ಒಳ ಶತ್ರುಗಳು ಇದ್ದರೂ, ಅವರಿಂದ ಮಠದ ಕೀರ್ತಿಗೆ ಧಕ್ಕೆ ಬರುವುದಿಲ್ಲ. ಉದ್ಯಮಿಗಳ ಪಾಲಾಗುತ್ತಿರುವ ರೈತರ ಭೂಮಿ, ಭೂಸ್ವಾದೀನದ ವಿರುದ್ದ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು. ರೈತನೇ ದೇಶದ ಮಾಲೀಕ. ವಯೋವೃದ್ಧ ತಂದೆ-ತಾಯಿಯರನ್ನು ಕೊನೆಯವರೆಗೂ ನೋಡಿಕೊಳ್ಳುವವರು ರೈತ ಮಾತ್ರ ಎಂದರು.

ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶ್ರೀಗಳ ಕತೃ ಗದ್ದಿಗೆಯಲ್ಲಿ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶ್ರೀಗಳಿಂದ ಪುಷ್ಪ ನಮನ, ಶಿವ ಧ್ವಜಾರೋಹಣ ಕಾರ್ಯಕ್ರಮಗಳು ಜರುಗಿದವು. ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳಾದ ಕದಲಿ.ಕ.ಕರ್ಪೂರ್, ಶಿವಸಿರಿ ಮಹಾಕಾವ್ಯ, ಭರಮಸಾಗರ ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ 2025 ಕೃತಿಗಳು ಲೋಕಾರ್ಪಣೆಗೊಂಡವು.

ಇದನ್ನೂ ಓದಿ: ಪ್ರಧಾನಿ ಮೋದಿ ಜೀವನ ಆಧಾರಿತ ವಸ್ತು ಪ್ರದರ್ಶನ | ಸಂಸದ ಗೋವಿಂದ ಕಾರಜೋಳ ಉದ್ಘಾಟನೆ

ನಿವೃತ್ತ ಪ್ರಾಚಾರ್ಯರಾದ ಡಾ.ನಾ.ಲೋಕೇಶಒಡೆಯರ್ ಅವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಅಸಾಧಾರಣ ಸಾಧನೆಯ ವಿಷಯದ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ ಹಾಗೂ ತರಳಬಾಳು ಕಲಾ ಸಂಘದಿಂದ ವಚನ ನೃತ್ಯಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಹೆಚ್.ಡಿ.ತಮ್ಮಯ್ಯ, ಪ್ರಕಾಶ್ ಕೋಳಿವಾಡ, ಕವಿ ಪ್ರದೀಪ್ ಕುಮಾರ್ ಹೆಬ್ರಿ, ಪ್ರದೀಪ್ ಶಾಂತನಗೌಡ, ನೀರಾವರಿ ನಿಗಮದ ಅಭಿಯಂತರಾದ ಮಲ್ಲಿಕಾರ್ಜುನ ಗುಂಗೆ ಹಾಗೂ ಅಪಾರ ಭಕ್ತಾಧಿಗಳು ಇದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsShraddhanjaliSirigereSri Shivakumar Shivacharya Swamijiಚಿತ್ರದುರ್ಗಚಿತ್ರದುರ್ಗ ನ್ಯೂಸ್ಶ್ರದ್ಧಾಂಜಲಿಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಸಿರಿಗೆರೆ
Share This Article
Facebook Email Print
Previous Article Power Cut chitradurga News (3) ಹಿರಿಯೂರು | ನಾಳೆ ವಿದ್ಯುತ್ ವ್ಯತ್ಯಯ
Next Article ಆಯುರ್ವೇದ ಎಲ್ಲ ಮದ್ದುಗಳ ತಾಯಿ | ಎಂ.ಸಿ.ರಘುಚಂದನ್
Leave a Comment

Leave a Reply Cancel reply

Your email address will not be published. Required fields are marked *

endometrial cancer that plague women
ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯಲ್ ಕ್ಯಾನ್ಸರ್‍ನ ಲಕ್ಷಣಗಳ ಬಗ್ಗೆ ತಿಳಿಯಿರಿ
Life Style
ಪದವಿ ವಿದ್ಯಾರ್ಥಿಗಳಿಗೆ ಕೆರಿಯರ್ ಕನೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ
ಪದವಿ ವಿದ್ಯಾರ್ಥಿಗಳಿಗೆ ಕೆರಿಯರ್ ಕನೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ 
ಮುಖ್ಯ ಸುದ್ದಿ
3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
ಹೊಳಲ್ಕೆರೆ
cow's milk to children
ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲು ನೀಡಿದರೆ ಏನಾಗುತ್ತದೆ ಗೊತ್ತಾ?
Life Style
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up