
CHITRADURGA NEWS | 28 AUGUST 2025
ಚಿತ್ರದುರ್ಗ: ಮೆದಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್‍ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಮೂರು ಅಂಗಡಿಗಳ ಮೇಲಿನ ಶೀಟ್‍ಗಳನ್ನು ಮುರಿದು ಒಳಗೆ ಇಳಿದಿರುವ ಚಾಲಾಕಿಗಳು ಹಣ ಕಳ್ಳತನ ಮಾಡಿದ್ದಾರೆ.
ಎಸ್.ಆರ್.ಎಂ.ಎಸ್.ಮೋಟಾರ್ಸ್‍ನ ಶೀಟ್ ಮುರಿದು ಕೆಳಗೆ ನುಸುಳಿ ರೂ.1 ಲಕ್ಷ 20 ಸಾವಿರ, ವಿನಾಯಕ ಪ್ರಾವಿಜನ್ ಸ್ಟೋರ್‍ನಲ್ಲಿ ರೂ.12 ಸಾವಿರ, ಶಿವನ್ ಫಾರ್ಮದಲ್ಲಿ ರೂ.20 ಸಾವಿರ ಕಳ್ಳತನವಾಗಿದೆ.
ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರದ ಹಿಂದೆ ಷಡ್ಯಂತರ | ವಿಶ್ವ ಹಿಂದೂ ಪರಿಷತ್ ಭಜರಂಗದಳ ಖಂಡನೆ
ಎಸ್.ಆರ್.ಎಂ.ಎಸ್. ಮೋಟಾರ್ಸ್‍ನಲ್ಲಿ ಪೀಠೋಪಕರಣಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಹಣಕ್ಕಾಗಿ ಹುಡುಕಾಡಿರಬಹುದೆಂಬುದು ಗೊತ್ತಾಗುತ್ತದೆ.
ಬುಧವಾರ ಬೆಳ್ಳಿಗೆ ಮೂರು ಅಂಗಡಿಗಳ ಮಾಲೀಕರುಗಳು ಬೀಗ ತೆರೆದು ಒಳಗೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
