
CHITRADURGA NEWS | 28 AUGUST 2025
ಚಿತ್ರದುರ್ಗ: ಧರ್ಮಸ್ಥಳದ ವಿಚಾರದಲ್ಲಿ ನಡೆದಂತಹ ಅಪಪ್ರಚಾರದ ಹಿಂದೆ ದೊಡ್ಡ ಮಟ್ಟದ ಷಡ್ಯಂತರ ನಡೆದಿದೆ. ಇದನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್‍ನ ದಕ್ಷಿಣ ಪ್ರಾಂತ್ಯದ ಸಂಚಾಲಕ ಪ್ರಭಂಜನ್ ತಿಳಿಸಿದರು.
ಇದನ್ನೂ ಓದಿ: ಮೀನು ಮಾರಾಟಗಾರರಿಗೆ ವಾಹನ ಖರೀದಿಸಲು ಅರ್ಥಿಕ ನೆರವು | ಅರ್ಜಿ ಅಹ್ವಾನ

ನಗರದ ಹಿಂದೂ ಮಹಾ ಗಣಪತಿಯ ಮಹಾ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದಕ್ಕೆ ವಿದೇಶಗಳಿಂದ ಹಾಗೂ ಕ್ರಿಶ್ಚಿಯನ್ಮಿಷನರಿ ಗಳಿಂದ ಹಣದ ನೆರವು ಬಂದಿದೆ. ಇದರಿಂದ ಹಿಂದೂಗಳ ಧಾರ್ಮಿಕ, ಭಾವನೆ ಕ್ಷೇತ್ರವಾದ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.
ಈ ಪ್ರಕರಣವನ್ನು ಎನ್‍ಐಎ, ಇಡಿ ತನಿಖೆಗೆ ವಯಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳಿಗೆ, ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಧರ್ಮಸ್ಥಳ ಕ್ಷೇತ್ರ ಹಲವಾರು ವರ್ಷಗಳಿಂದ ಹಿಂದೂಗಳ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿಗೆ ದೇಶ-ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ
ಆದರೆ ಭಕ್ತಿ ಭಾವನೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಷಡ್ಯಂತರ ನಡೆಯುತ್ತಿದೆ. ಧರ್ಮಸ್ಥಳ ಕ್ಷೇತ್ರವು ರಾಜ್ಯದಲ್ಲಿ ಜನೋಪಕಾರಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನತೆಗೆ ಹತ್ತಿರವಾಗುತ್ತಿದೆ.
ಇದನ್ನು ಸಹಿಸದ ಕೆಲವು ಸಂಘಟನೆಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳು ಇದಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲು ಮುಂದಾಗಿವೆ. ಇದನ್ನು ಹಿಂದೂಗಳಾದ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಪ್ರಕರಣದಲ್ಲಿ ಪಿಎಫ್‍ಐ ಸಂಘಟನೆಯ ಪ್ರತಿರೂಪವಾಗಿರುವ ಎಸ್‍ಡಿಪಿಐ ಸಂಘಟನೆಯೂ ಕುಮ್ಮಕ್ಕು ನೀಡುತ್ತಿದೆ. ಅಲ್ಲಿ ಏನು ಆಗದಿದ್ದರೂ ಸಹ ಏನೋ ಆಗಿದೆ ಎನ್ನುವ ರೀತಿಯಲ್ಲಿ ವಾತಾವರಣವನ್ನು ನಿರ್ಮಿಸಿ ಯಾರೋ ಅನಾಮಿಕ ವ್ಯಕ್ತಿಯಿಂದ ದೂರನ್ನು ಕೊಡಿಸಿವೆ. ಇದನ್ನು ಪರಿಗಣಿಸಿದ ಸರ್ಕಾರ ಎಸ್‍ಐಟಿಗೆ ನೀಡಿ ತನಿಖೆ ನಡೆಸುತ್ತಿದ್ದರು ಸಹ, ಅಲ್ಲಿ ಏನೂ ಸಹ ಸಿಕ್ಕಿಲ್ಲ.
ಈ ಪ್ರಕರಣದ ಹಿಂದೆ ಮಹೇಶ್ ಶೆಟ್ಟಿ ತಿಮ್ಮರೋಡಿರವರ ಹೆಸರು ಸಹ ಇದ್ದು, ಧರ್ಮಸ್ಥಳ ಅಪಪ್ರಚಾರ ನಡೆದ ಘಟನೆಯಲ್ಲಿ ಪಾಲುದಾರನೆಂದು ಕಾಣುತ್ತಿದೆ. ಇವರ ಬಗ್ಗೆನೂ ಸಹ ತನಿಖೆ ನಡೆಸಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಸೆಪ್ಟೆಂಬರ್ 3 ರಂದು ರೈಲುಗಳ ತಾತ್ಕಾಲಿಕ ರದ್ದು
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾ ಗಣಪತಿಯ ಸಮಿತಿಯ ಅಧ್ಯಕ್ಷ ಶರಣ್ ಕುಮಾರ್, ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
