
CHITRADURGA NEWS | 28 AUGUST 2025
ಚಿತ್ರದುರ್ಗ: ಬ್ಯಾಡಗಿ ಮತ್ತು ತೋರಣಗಲ್ಲು ಯಾರ್ಡುಗಳಲ್ಲಿ ತಿಕ್ ವೆಬ್ ಸ್ವಿಚ್ ಗಳ ಬದಲಾವಣೆಯ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಸೆಪ್ಟೆಂಬರ್ 03 ರಂದು ಈ ಕೆಳಗಿನ ರೈಲುಗಳು ಸಂಪೂರ್ಣ ರದ್ದು, ಭಾಗಶಃ ರದ್ದು, ನಿಯಂತ್ರಿಸಲ್ಪಡುತ್ತವೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿರಾಜಮಾನ | ಸಿಂಧೂರ ವೇದಿಕೆಯಲ್ಲಿ ಪ್ರತಿಷ್ಠಾಪನೆ
ಸೆಪ್ಟೆಂಬರ್ 03 ರಂದು ಸಂಪೂರ್ಣ ರದ್ದುಗೊಂಡ ರೈಲುಗಳು
1.ರೈಲು ಸಂಖ್ಯೆ. 57415 ಗುಂಟಕಲ್ – ಚಿಕ್ಕಜಾಜೂರು ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು.
2.ರೈಲು ಸಂಖ್ಯೆ. 57416 ಚಿಕ್ಕಜಾಜೂರು – ಗುಂಟಕಲ್ ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು.
3.ರೈಲು ಸಂಖ್ಯೆ. 07397 ಹೊಸಪೇಟೆ – ಬಳ್ಳಾರಿ ಡೆಮು ಸಂಪೂರ್ಣ ರದ್ದು.
ಭಾಗಶಃ ರದ್ದುಗೊಂಡ ರೈಲುಗಳು
1. ಸೆಪ್ಟೆಂಬರ್ 03 ರಂದು ರೈಲು ಸಂಖ್ಯೆ. 07395 ಬಳ್ಳಾರಿ – ದಾವಣಗೆರೆ ಡೆಮು ಬಳ್ಳಾರಿ – ಹೊಸಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಹೊಸಪೇಟೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
ಇದನ್ನೂ ಓದಿ: ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ಆ.29,30 ರಂದು
2. ರೈಲು ಸಂಖ್ಯೆ. 57406 ಕದಿರಿದೇವರಪಳ್ಳಿ – ತಿರುಪತಿ ಪ್ಯಾಸೆಂಜರ್ ಕದಿರಿದೇವರಪಳ್ಳಿ – ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್ ನಿಂದ ನಿಗದಿತ ಸಮಯದಲ್ಲಿ ಹೊರಡುತ್ತದೆ.
3. ರೈಲು ಸಂಖ್ಯೆ. 56911 ಎಸ್ಎಸ್ಎಸ್ ಹಬ್ಬಳ್ಳಿ – ಗುಂಟಕಲ್ ಪ್ಯಾಸೆಂಜರ್ ಮುನಿರಾಬಾದ್ – ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
4. ರೈಲು ಸಂಖ್ಯೆ. 56912 ಗುಂಟಕಲ್ – ಎಸ್ಎಸ್ಎಸ್ ಹಬ್ಬಳ್ಳಿ ಪ್ಯಾಸೆಂಜರ್ ಗುಂಟಕಲ್ – ಮುನಿರಾಬಾದ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
ಇದನ್ನೂ ಓದಿ: ಜಿಲ್ಲಾ ಹಾಪ್‍ಕಾಮ್ಸ್ | ಆ.30ರಂದು ವಾರ್ಷಿಕ ಮಹಾಸಭೆ
5. ಸೆಪ್ಟೆಂಬರ್ 02 ರಂದು ರೈಲು ಸಂಖ್ಯೆ. 57405 ತಿರುಪತಿ – ಕದಿರಿದೇವರಪಳ್ಳಿ ಪ್ಯಾಸೆಂಜರ್ ಗುಂಟಕಲ್ – ಕದಿರಿದೇವರಪಳ್ಳಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ರೈಲು ನಿಯಂತ್ರಣೆ
ಸೆಪ್ಟೆಂಬರ್ 03 ರಂದು ರೈಲು ಸಂ. 57402 ಎಸ್ಎಸ್ಎಸ್ ಹಬ್ಬಳ್ಳಿ – ತಿರುಪತಿ ಪ್ಯಾಸೆಂಜರ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
