
CHITRADURGA NEWS | 27 AUGUST 2025
ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ಜರುಗಿದೆ.
ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯಲ್ಲಿರುವ ಜೈನಧಾಮದಲ್ಲಿ ನಿರ್ಮಿಸಿರುವ ಅರಮನೆಯಂತಹ ಪೆಂಡಾಲ್ ಒಳಗಿನ ಸಿಂದೂರ ವೇದಿಕೆಯಲ್ಲಿ ವಿಷ್ಣು ರೂಪಿ ಹಿಂದೂ ಮಹಾಗಣಪತಿ ವಿರಾಜಮಾನರಾಗಿದ್ದಾರೆ.
ಇದನ್ನೂ ಓದಿ : ಗಣಪತಿ ಮಂಟಪಕ್ಕೆ ಸಿಂಧೂರವೆಂದು ಹೆಸರು | ಆಪರೇಷನ್ ಸಿಂಧೂರ ವಿಶೇಷ
ಶಾಸ್ತ್ರೋಕ್ತ ಪೂಜೆ, ಪುನಸ್ಕಾರಗಳೊಂದಿಗೆ ಆಗಸ್ಟ್ 27 ಬೆಳಗ್ಗೆ ಹತ್ತು ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ದೇವರನ್ನು ಪ್ರತಿಷ್ಠಾಪನೆ ಮಾಡಿ ಮಹಾಮಂಗಳಾರತಿ ಸಲ್ಲಿಸಲಾಯಿತು.
ಈ ವೇಳೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾದ ಶರಣ್ ಕುಮಾರ್, ವಿಶ್ವಹಿಂದೂ ಪರಿಷತ್ ಬಜರಂಗದಳ ಪ್ರಮುಖರಾದ ಪ್ರಭಂಜನ್, ಕೇಶವ, ವಿಠಲ್, ಸಂದೀಪ್, ರಂಗನಾಥ್, ಅಶೋಕ್, ರೋಹಿತ್ ಗಾಯಕ್ವಾಡ್. ಮಂಜುನಾಥ್. ದೀಪಕ್ .ದಿನೇಶ್. ಹಾಗೂ ಸಮಿತಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
