
CHITRADURGA NEWS | 27 AUGUST 2025
ಚಳ್ಳಕೆರೆ: ನಿವೃತ್ತ ಪೊಲೀಸ್ ಅಧಿಕಾರಿಯ ಹಣವನ್ನು ಎಗರಿಸಿದ್ದ ಕಾರು ಚಾಲಕನನ್ನು ಕಾರು ಸಹಿತ ಪತ್ತೆ ಹಚ್ಚುವಲ್ಲಿ ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿರಾಜಮಾನ | ಸಿಂಧೂರ ವೇದಿಕೆಯಲ್ಲಿ ಪ್ರತಿಷ್ಠಾಪನೆ

ಬೆಂಗಳೂರಿನಲ್ಲಿ ವಾಸವಿರುವ ನಿವೃತ್ತ ಪೊಲೀಸ್ ಎಸ್‌ಪಿ ಕೆ.ವೈ.ಗುರುಪ್ರಸಾದ್ (65) ತಮ್ಮ ಹೆಂಡತಿ ಲಲಿತರೊಂದಿಗೆ ಬೆಂಗಳೂರಿನಿಂದ ಆ.25ರ ಬೆಳಗಿನ ಜಾವ ಬಾಡಿಗೆ ಕಾರಿನಲ್ಲಿ ಬಳ್ಳಾರಿಗೆ ತೆರಳಿದ್ದು, ಅಲ್ಲಿ ತಮ್ಮ ಬಾಬು ಜಮೀನು ಮಾರಿ 97 ಲಕ್ಷ ಹಣವನ್ನು ಕಾರಿನಲ್ಲಿಟ್ಟುಕೊಂಡು ವಾಪಸ್ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಚಳ್ಳಕೆರೆ ನಗರದ ಉಡುಪಿ ಗಾರ್ಡ್ ಹೋಟೆಲ್‌ನಲ್ಲಿ ಊಟ ಮಾಡಲು ತೆರಳಿದ್ದರು.
ಹಣ ಕಾರಿನಲ್ಲಿದ್ದು ಚಾಲಕ ರಮೇಶ್‌ಗೆ ಊಟ ಮಾಡಲು ಹೇಳಿದರು. ಊಟ ಮಾಡಿ ಹೊರಗೆ ಬಂದ ನಿವೃತ್ತ ಪೊಲೀಸ್ ಅಧಿಕಾರಿ ವೈ.ಗುರುಪ್ರಸಾದ್ ಸ್ಥಳದಲ್ಲಿ ಕಾರು ಇರದೇ ಇದ್ದಾಗ ಗಲಿಬಿಲಿಗೊಂಡು ಕೂಡಲೇ ಚಾಲಕ ರಮೇಶ್‌ಗೆ ಪೋನ್ ಮಾಡಿದ್ದಾರೆ, ಚಾಲಕನ ಪೋನ್ ಸ್ವೀಚ್ ಆಫ್ ಆಗಿತ್ತು. ಕೂಡಲೇ ಹೆಂಡತಿ ಲಲಿತರೊಂದಿಗೆ ಠಾಣೆಗೆ ಆಗಮಿಸಿ ದೂರು ನೀಡಿರುತ್ತಾರೆ.
ಇದನ್ನೂ ಓದಿ: ಜಿಲ್ಲಾ ಹಾಪ್‍ಕಾಮ್ಸ್ | ಆ.30ರಂದು ವಾರ್ಷಿಕ ಮಹಾಸಭೆ
ದೂರು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಉಪ ವಿಭಾಗದ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಹಣವನ್ನು ಕದ್ದು ಪರಾರಿಯಾಗಿದ್ದ ಬೆಂಗಳೂರಿನ ನಾಗಚಂದ್ರ ನಿವಾಸಿ ರಮೇಶನನ್ನು ಕಾರುಸಹಿತ ಪತ್ತೆಹಚ್ಚಿದ್ದಾರೆ.
ಠಾಣಾ ವೃತ್ತ ನಿರೀಕ್ಷಕ ಕೆ.ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಚಾಲಕನ್ನು ಕಾರು ಸಹಿತ ವಶಕ್ಕೆ ಪಡೆದು, ಆರೋಪಿತನ ವಿರುಧ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿಯನ್ನು ಮತ್ತು ಹಣವನ್ನು ಪತ್ತೆ ಮಾಡಲು ಶ್ರಮಿಸಿದ ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸರಿಗೆ ಎಸ್ಪಿ ರಂಜಿತ್‌ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
