
CHITRADURGA NEWS | 03 NOVEMBER 2024
ಚಿತ್ರದುರ್ಗ: ಪ್ರಭಾವಿ ಮುಸಲ್ಮಾನರು ವಕ್ಫ್ (Wakf) ಹೆಸರಿನಲ್ಲಿ ಅಕ್ರಮ ಜಮೀನು ಒತ್ತುವರಿ ಮಾಡಿದ್ದು, ಇದರ ವಿರುದ್ಧ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಎಂಎಲ್ಸಿ ಕೆ.ಎಸ್. ನವೀನ್ ಹೇಳಿದರು.
ಕ್ಲಿಕ್ ಮಾಡಿ ಓದಿ: VaniVilasa: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ

ಮಾಧ್ಯಮದವರು ಕೇಳಿದ 90% ವಕ್ಫ್ ಆಸ್ತಿ ಮುಸ್ಲೀಮರೇ ವತ್ತುವರಿ ಮಾಡಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,
ಪ್ರಭಾವಿ ಮುಸಲ್ಮಾನರು ವಕ್ಫ್ ಹೆಸರಲ್ಲಿ ಆಸ್ತಿ ಮಾಡ್ತಿದ್ದಾರೆ, ಖಾಸಗಿ ಜಮೀನನ್ನು ಮೊದಲು ವಕ್ಫ್ ಹೆಸರಿಗೆ ಮಾಡಿಕೊಂಡು, ತದನಂತರ ಮುಸಲ್ಮಾನ ಪ್ರಭಾವಿಗಳು ಅಕ್ರಮ ಒತ್ತುವರಿ ನಡೆಸುತ್ತಾರೆ.
ಇವರ್ಯಾರೂ ಬಡವರಿಗಾಗಿ ಮಾಡಲ್ಲ, ಪ್ರಭಾವಿಗಳು, ಬಲಶಾಲಿಗಳು ತಮ್ಮ ಸುರ್ದಿಗೆ ಪಡೆಯುತ್ತಾರೆ.
ಕ್ಲಿಕ್ ಮಾಡಿ ಓದಿ: Actor Dhananjay: ಡಾಲಿ ಕೈ ಹಿಡಿಯುವ ಡಾಕ್ಟರ್ ಚಿತ್ರದುರ್ಗದವರು | ಮುಂದುವರೆದ ಚಿತ್ರದುರ್ಗದ ಸಿನಿಮಾ ನಂಟು..
ಈ ಮೂಲಕ ಸಾವಿರಾರು ಎಕರೆ ಬಡವರ ಜಮೀನು ಹೊಡೆದಿದ್ದಾರೆ, ಅದೆಲ್ಲವನ್ನು ವಾಪಸ್ ಕೊಡಿಸುವ ಕೆಲಸ ಮಾಡ್ತೇವೆ ಎಂದರು.
ಸಧ್ಯ ವಕ್ಫ್ ಹಗರಣ ರಾಜ್ಯದಲ್ಲಿ ಒಂದೊಂದೇ ಕಡೆ ಹೊರ ಬೀಳ್ತಿದೆ, ರಾಜ್ಯದಲ್ಲಿ ಯಾರದ್ದೇ ಒಂದು ಇಂಚು ಜಾಗ ವಕ್ಫ ವಶಕ್ಕೆ ಪಡೆದಿದ್ರೆ ಕೂಡಲೇ ಹಿಂದಿರುಗಿಸಬೇಕು.
ಚಳ್ಳಕೆರೆ ತಾಲೂಕಿನಲ್ಲೂ ಇಂಥ ಘಟನೆ ನಡೆದ ಬಗ್ಗೆ ವರದಿಯಾಗಿದೆ, ಹೊಳಲ್ಕೆರೆ ತಾಲೂಕಿನ ನಂದನ ಹೊಸೂರ ಗ್ರಾಮದಲ್ಲಿ 5 ಎಕರೆ ಜಾಗವನ್ನು ವಕ್ಫಗೆ ಖಾತೆ ಮಾಡಿದ್ದು ಗೊತ್ತಾಗಿದೆ.
ಕ್ಲಿಕ್ ಮಾಡಿ ಓದಿ: lake: 2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ
ಚಿತ್ರದುರ್ಗ ಜಿಲ್ಲೆಯ ರೈತರು ತಮ್ಮ ಖಾತೆಯನ್ನೊಮ್ಮೆ ಪರಿಶೀಲಿಸಿ, ಅಕ್ರಮವಾಗಿ ರೈತರ ಜಮೀನು ವಕ್ಫ್ ಬೋರ್ಡ ಗೆ ಆಗಿದ್ರೆ ಬಿಜೆಪಿ ರೈತರ ಬೆಂಬಲಕ್ಕೆ ಇರುತ್ತದೆ.
ಬಿಜೆಪಿ ಸರಕಾರದ ವಿರುದ್ಧ ಹೋರಾಡಿ ರೈತರ ಜಮೀನು ವಾಪಸ್ ಕೊಡಿಸುತ್ತೆ, ಬಹಳಷ್ಟು ರೈತರು ಈ ರೀತಿ ಆಗಿದ್ದಕ್ಕೆ ಆತಂಕದಲ್ಲಿದ್ದಾರೆ, ರೈತರ ಜಮೀನು ದಾಖಲೆ ರೈತರ ಸುಪರ್ದಿಗೆ ಬರುವಂತೆ ಮಾಡುತೇವೆ ಎಂದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
