
CHITRADURGA NEWS | 06 July 2025
ಹೊಳಲ್ಕೆರೆ: ಆಗಸ್ಟ್ 08 ರಂದು ಮಲ್ಲಿಕಾರ್ಜುನ ಶ್ರೀಗಳ 32ನೇ ಸ್ಮರಣೋತ್ಸವ ಅಂಗವಾಗಿ ಹೊಳಲ್ಕೆರೆHolalkere)ಯ ಒಂಟಿಕಂಬಮಠದಲ್ಲಿ ಪೂರ್ವಸಿದ್ಧತಾ ಸಭೆ ಜರುಗಿತು.
ಇದನ್ನೂ ಓದಿ: ಸರಳ ವಿವಾಹವೇ ಆದರ್ಶ | ಡಾ.ಬಸವಕುಮಾರ ಸ್ವಾಮೀಜಿ
ಪೂರ್ವಸಿದ್ಧತಾ ಸಭೆಯಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಯಾವುದೇ ಘಟನೆ ನಡೆದರೂ ಕ್ಷಣಮಾತ್ರದಲ್ಲಿ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತದೆ. ಆದರೆ ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಎಷ್ಟೇ ದೊಡ್ಡ ಕೆಲಸ ಮಾಡಿದರೂ ಸಹ ಅದನ್ನು ತಾನು ಮಾಡಿದ್ದು ಎಂದು ಗುರುತಿಸಿಕೊಳ್ಳಲಿಲ್ಲ.
ಸುಮ್ಮನೇ ಸಮಾಜ ಕಾರ್ಯವನ್ನು ಮಾಡುತ್ತ ಸಾಗಿದರು. ಹಾಗಾಗಿ ಅಂಥ ಮಹಾನುಭಾವರ ಜೀವನ ಸಾಧನೆಗಳನ್ನು, ಅವರು ಮಾಡಿದಂತಹ ಸತ್ಕಾರ್ಯಗಳನ್ನು ಸದಾ ಸ್ಮರಿಸಬೇಕಾಗುತ್ತದೆ ಎಂದು ಹೇಳಿದರು.
ಮಹಾತ್ಮರ ಮೂಲ ಹುಡುಕಬಾರದು ಎನ್ನುವ ಮಾತಿದೆ. ಜಯದೇವ ಶ್ರೀಗಳವರ ಮಾತುಗಳು ಭಾಷಣ ಆಗಿರುತ್ತಿತ್ತು. ಅವರ ಅಂತರ0ಗದ ನುಡಿಯು ಲಿಂಗ ಮೆಚ್ಚುವಂತಿರುತ್ತತ್ತು. ಅವರ ಒಂದು ಭಾಷಣ ಕೇಳಿದರೆ ಸಾಕು ಧನ್ಯತಾಭಾವ ಮೂಡುತ್ತಿತ್ತು. ಅಷ್ಟೊಂದು ಅಧ್ಯಯನಶೀಲರಾಗಿದ್ದರು.
ಇದನ್ನೂ ಓದಿ: Vikas Ranga: ವಿಕಾಸ ರಂಗದ ಜಿಲ್ಲಾಧ್ಯಕ್ಷರಾಗಿ KSRTC ಎಸ್.ನಟರಾಜ್ ಆಯ್ಕೆ
ಈಗಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ತುಂಬ ಸುಲಭ. ಆದರೆ ಸುಮಾರು 70ವರ್ಷಗಳ ಹಿಂದೆ ಸಂಸ್ಥೆಗಳನ್ನು ಕಟ್ಟುವುದು ಸುಲಭ ಆಗಿರಲಿಲ್ಲ.
ಮಲ್ಲಿಕಾರ್ಜುನ ಶ್ರೀಗಳು 1964ರಲ್ಲಿ ಎಸ್.ಜೆ.ಎಂ. ವಿದ್ಯಾಪೀಠವನ್ನು ಸ್ಥಾಪಿಸಿ ತಾಂತ್ರಿಕ, ದಂತವೈದ್ಯಕೀಯ, ಔಷಧೀಯ, ಪದವಿ, ಪದವಿ ಪೂರ್ವ, ಪ್ರೌಢಶಾಲೆ, ಪ್ರಾಥಮಿಕ ಹೀಗೆ ಒಂದೊ0ದೇ ಶಾಲಾ ಕಾಲೇಜುಗಳನ್ನು ಕಟ್ಟಿ ಶಿಕ್ಷಣ ಸಂಸ್ಥೆಗಳ ಮೂಲಪ್ರವರ್ತಕರಾಗಿದ್ದಾರೆ. ಅಂತಹ ಮಹಾಂತರ ಸ್ಮರಣೆಯನ್ನು ಎಲ್ಲರೂ ಸೇರಿ ಆಗಸ್ಟ್ 8ರಂದು ಅರ್ಥಪೂರ್ಣವಾಗಿ ಮಾಡೋಣ ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳವರು ಜ್ಞಾನದ ಸೂರ್ಯ. ಯಾವಾಗಲೂ ಅವರ ವಾಣಿಯಲ್ಲಿ ಜ್ಞಾನದ ಗಂಗೆ ಹರಿದುಬರುವಂತೆ ಭಾಸವಾಗುತ್ತಿತ್ತು. ಶ್ರೀಗಳು ಸಮಾಜಕ್ಕೆ ತಾತ್ವಿಕವಾದ ಸಂದೇಶವನ್ನು ನೀಡಿದ್ದಾರೆ.
ಮಾತನಾಡಿದರೆ ಮುತ್ತಿನಂತೆ ಮಾತನಾಡಬೇಕು. ಮಾತೆಂಬುದು ಜ್ಯೋತಿರ್ಲಿಂಗ ಎನ್ನುವ ಅಲ್ಲಮಪ್ರಭುಗಳ ವಾಣಿಗೆ ಶ್ರೀಗಳು ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರಲ್ಲದೆ, ಇಂಥ ಶ್ರೀಗಳವರ ಸ್ಮರಣೋತ್ಸವವನ್ನು 2022ರಿಂದ ಪ್ರತಿವರ್ಷ ಆಗಸ್ಟ್ 8ನೇ ತಾರೀಕು ಆಯೋಜಿಸುತ್ತ ಬರಲಾಗಿದೆ. ಈ ಬಾರಿಯೂ ಆಗಸ್ಟ್ 8ಕ್ಕೆ ಆಚರಿಸಲು ಶ್ರೀಮಠದ ಆಡಳಿತ ಮಂಡಳಿಯು ತೀರ್ಮಾನಿಸಿದೆ ಎಂದರು.
ಇದನ್ನೂ ಓದಿ: folk music: ಬೀದಿ ನಾಟಕ, ಜಾನಪದ ಸಂಗೀತ ಪ್ರದರ್ಶನಕ್ಕೆ ಸರ್ಕಾರದಿಂದ ಅರ್ಜಿ ಆಹ್ವಾನ
ಹೊಳಲ್ಕೆರೆ(Holalkere) ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಮಾಡಿರುವ ಸಾಧನೆಗಳು, ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಶಾಲಾಕಾಲೇಜುಗಳ ಸ್ಥಾಪಿಸುವುದರ ಮೂಲಕ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ.
ಅಪರಿಮಿತವಾದ ಹೆಸರು ಮಾಡಿದವರು. ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಅವರ ಘನತೆ, ಗಾಂಭಿರ್ಯ ಮತ್ತು ಪ್ರೌಢಿಮೆಯಿಂದ ಮೇರು ವ್ಯಕ್ತಿತ್ವವುಳ್ಳರಾಗಿದ್ದರು. ಅಂಥ ಪೂಜ್ಯರನ್ನು ಸದಾ ಸ್ಮರಿಸಿಕೊಳ್ಳುತ್ತ ಗೌರವ ಸಲ್ಲಿಸುವಂತಾಗಬೇಕು ಎನ್ನುವುದು ಇಡೀ ಸಮಾಜಕ್ಕೆ ಒಪ್ಪಿಗೆಯಾಗಿರುವ ಮಾತಾಗಿದೆ. ಈ ಬಾರಿಯ ಸ್ಮರಣೋತ್ಸವಕ್ಕೆ ಹೊಳಲ್ಕೆರೆ ಭಾಗದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕು ಎಂದರು.
ಶ್ರೀಮಠಕ್ಕೆ ನಾವೆಲ್ಲ ಭಕ್ತರಷ್ಟೆ. ಯಾವುದೇ ಪ್ರತಿಫಲಾಪೇಕ್ಷೆ ಹೊಂದಿದವರಲ್ಲ. ಮಠವು ಎತ್ತರಕ್ಕೆ ಬೆಳೆದಷ್ಟೂ ಸಮಾಜವು ಅಷ್ಟೇ ಸಂತೋಷವಾಗಿರುತ್ತದೆ. ಜಯದೇವ ಶ್ರೀಗಳು ಹಾಕಿಕೊಟ್ಟಿರುವ ದಾರಿಯಲ್ಲಿ ಜಯವಿಭವ ಶ್ರೀಗಳು ಮಾಡಿದಂತಹ ಕಾರ್ಯಕ್ರಮಗಳು, ಅದಕ್ಕೆ ಪೂರಕವಾದಂತಹ ವ್ಯವಸ್ಥೆಯ ತಂದ0ತಹ ಮಲ್ಲಿಕಾರ್ಜುನ ಶ್ರೀಗಳವರನ್ನು ಭೂಮಿ-ಚಂದ್ರ-ಸೂರ್ಯ ಇರುವವರೆಗೂ ಸ್ಮರಿಸುವಂತಹ ಕರ‍್ಯ ಇಂಥ ಪವಿತ್ರ ಜಾಗದಲ್ಲಿ ನಡೆಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನಗರಸಭೆಯ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಗಿರೀಶ್, ಕೆಇಬಿ ಷಣ್ಮುಖಪ್ಪ, ರೈತಸಂಘದ ಮುಖಂಡರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಸುತ್ತಮುತ್ತಲು ತಾಲ್ಲೂಕುಗಳಿಂದ ಭಕ್ತರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
