CHITRADURGA NEWS | 06 JULY 2025
ಹೊಳಲ್ಕೆರೆ: ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಮಳೆ(Rain)ಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿ, ಮೆರವಣಿಗೆ ಮಾಡಲಾಯಿತು.
ಇದನ್ನೂ ಓದಿ: ರೈಲು ಹಳಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮ*ಹತ್ಯೆ
ಗ್ರಾಮಕ್ಕೆ ಮಳೆ ಇಲ್ಲದೆ ಜನರ ಜೀವನ ಕಂಗಲಾಗಿದೆ. ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ, ಇದ್ದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದ್ದಲ್ಲದ ಮಧ್ಯೆ ಕರೆಂಟಿನ ಅಭಾವ ಇದೆ. ಕೃಷಿಗೆ ಮಳೆಯ ನೀರೇ ಆಧಾರವಾಗಿದೆ. ಆದರೆ ವರುಣ ಕಣ್ಣು ಬಿಡುತ್ತಿಲ್ಲ, ಮಳೆ ಇಲ್ದೆ ಗ್ರಾಮದ ಜನತೆ ಕಂಗಾಲಾಗಿದ್ದಾರೆ.
ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಈ ಹಿನ್ನಲೆಯಲ್ಲಿ ಇಂದು ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ನಡೆಸುವುದರ ಮೂಲಕ ಮಳೆ(Rain)ಗಾಗಿ ಪ್ರಾರ್ಥಿಸಲಾಯಿತು.
ಇದನ್ನೂ ಓದಿ: ಆಗಸ್ಟ್ 08 ರಂದು ಮಲ್ಲಿಕಾರ್ಜುನ ಶ್ರೀಗಳ 32ನೇ ಸ್ಮರಣೋತ್ಸವ | ಹೊಳಲ್ಕೆರೆ ಒಂಟಿಕಂಬಮಠದಲ್ಲಿ ಪೂರ್ವಭಾವಿ ಸಭೆ
ಈ ವೇಳೆ ಗ್ರಾಮಸ್ಥರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

