CHITRADURGA NEWS | 29 SEPTEMBER 2206
ಚಿತ್ರದುರ್ಗ: ಸುರಕ್ಷಿತ ಗರ್ಭಪಾತದ ಸರಿಯಾದ ಮಾಹಿತಿ ಸಿಗದೇ, ಎಲ್ಲಿ ಸೇವೆಗಳು ಸಿಗುತ್ತವೆ ಎಂದು ಗೊತ್ತಿಲ್ಲದೆ, ಸಾಕ್ಷಷ್ಟು ಮಹಿಳೆಯರು ಅಸುರಕ್ಷಿತ ಗರ್ಭಪಾತದ ವಿಧಾನಗಳನ್ನು ಅನುಸರಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ತಪ್ಪಿಸಿ, ಸುರಕ್ಷಿತ ಗರ್ಭಪಾತದ ಅರಿವು ಮೂಡಿಸುವುದು ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಪ್ರಮುಖ ಗುರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಸಿ.ಸುನಿಲ್ ಕುಮಾರ್ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಕೋಟೆಯಲ್ಲಿ ಶ್ರಮದಾನ | ಸ್ವಚ್ಛತೆ ಕಾಪಾಡಲು ಜಾಗೃತಿ
ಸೆ.28 ರಂದು ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಐ ಇ ಸಿ ವಿಭಾಗ, ಹೊಳಲ್ಕೆರೆ ತಾಲೂಕ ಆರೋಗ್ಯ ಅಧಿಕಾರಿಗಳು ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಭಯ ಮತ್ತು ಕಳಂಕದಿಂದ ಸಾಕಷ್ಟ ಜನರು ಆಸ್ಪತ್ರೆಗೆ ಬರಲು ಹಿಂಜರಿಯುತ್ತಾರೆ. ಸುರಕ್ಷಿತ ಗರ್ಭಪಾತ ಅಪರಾಧವಲ್ಲ. 1990 ರಲ್ಲಿ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಮಹಿಳಾ ಸಂಘಟನೆಗಳು ಸೆ.28ನ್ನು ಅಸುರಕ್ಷಿತ ಗರ್ಭಪಾತ ವಿರುದ್ಧದ ದಿನ ಎಂದು ಆಚರಿಸಲು ಪ್ರಾರಂಭಿಸಿದವು. 2011 ರಿಂದ ಇದನ್ನು ಜಾಗತಿಕ ದಿನವನ್ನಾಗಿ ಆಚರಿಸಲಾಯಿತು.
ಈಗ 75 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದೆ. ಸುರಕ್ಷಿತ ಗರ್ಭಪಾತಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಆರೋಗ್ಯವಂತ ಮಹಿಳೆ ಇದ್ದರೆ ಮಾತ್ರ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಈ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ವರ್ಷಪೂರ್ತಿ ನಾವು ಪ್ರತಿಯೊಬ್ಬ ಮಹಿಳೆಯರಿಗೆ ಗೌರವಯುತ ಆರೈಕೆ ನೀಡುವ ಸಂಕಲ್ಪ ಮಾಡೋಣ. ಇಲಾಖೆಯಲ್ಲಿ ಕ್ಷೇತ್ರ ಮಟ್ಟದ ಎಲ್ಲಾ ಸಿಬ್ಬಂದಿಯವರು ಇದರ ಬಗ್ಗೆ ಅರಿತುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.
ಇದನ್ನೂ ಓದಿ: ರಾಜ್ಯದ 69 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ಯಾತ್ರೆ | ಬಿ.ಕೆ.ಹರಿಪ್ರಸಾದ್
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾಕ್ಟರ್ ಅಭಿನವ ಎಂ.ಡಿ. ಮಾತನಾಡಿ, ಈ ವರ್ಷದ ಘೋಷಣೆ ನಾವು ಎಲ್ಲರೂ ಒಗ್ಗಟ್ಟಾಗಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಪ್ರತಿಯೊಬ್ಬ ಮಹಿಳೆಗೆ ನ್ಯಾಯಯುತ ಗೌರವಯುತ ಮತ್ತು ಗೌಪ್ಯ ಆರೈಕೆ ಸಿಗಬೇಕು. ಎಂಬುದಾಗಿದೆ. ಸುರಕ್ಷಿತ ಆರೈಕೆ ಎಂದರೆ ಕೇವಲ ವೈದ್ಯಕೀಯ ಸೇವೆ ಮಾತ್ರವಲ್ಲ ಅದು ಗೌಪ್ಯತೆ, ಗೌರವಯುತ ಮಾಹಿತಿ, ಸಮ್ಮತಿ ತಾರತಮ್ಯ ರಹಿತ ಸೇವೆ, ನಂತರದ ಆರೈಕೆ ಮತ್ತು ಕುಟುಂಬ ಯೋಜನೆ ಸಮಾಲೋಚನೆ ಎನ್ನುವ ಐದು ತತ್ವಗಳನ್ನು ಒಳಗೊಂಡಿದೆ.
ಇತ್ತೀಚೆಗೆ ವಾಟ್ಸಾಪ್, ಯೂಟೂಬ್ ನಲ್ಲಿ ಬರುವ ಮನೆಮದ್ದು ಸ್ವಯಂ ಔಷಧಿಗಳ ಬಗ್ಗೆ ಜನ ನಂಬುತ್ತಾರೆ ಅದು ಜೀವಕ್ಕೆ ಅಪಾಯಕಾರಿ ಎಂಬುದನ್ನು ನಾವು ಸಾರ್ವಜನಿಕರಿಗೆ ತಿಳಿಸಬೇಕು. ಸರಕಾರಿ ಆರೋಗ್ಯ ಸಂಸ್ಥೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿದೆ ಎಂದು ಆಶಾ ಕಾರ್ಯಕರ್ತೆಯರು ಅತಿ ಗರ್ಭಿಣಿ ಮಹಿಳೆಯರಿಗೆ ಹರಿಹರದ ಹೆಣ್ಣು ಮಕ್ಕಳಿಗೆ ಮಾಹಿತಿ ನೀಡಬೇಕು ಉತ್ತಮ ಕುಟುಂಬ ಯೋಜನೆ ಮಾಹಿತಿ ಗರ್ಭನಿರೋಧಕ ವಿಧಾನಗಳ ಬಗ್ಗೆ ವೈಜ್ಞಾನಿಕ ಜಾಗೃತಿ ಇದ್ದರೆ ಅನಗತ್ಯ ಗರ್ಭಧಾರಣೆಗಳನ್ನೇ ತಡೆಗಟ್ಟಬಹುದು.
ಸುರಕ್ಷಿತ ಎಂಬ ಪದದ ಅರ್ಥವೇ ಅರ್ಹ ವೈದ್ಯರಿಂದ ಸರಿಯಾದ ಆಸ್ಪತ್ರೆಯಲ್ಲಿ ಸರಿಯಾದ ಸಮಯದಲ್ಲಿ ಪಡೆಯುವ ಆರೈಕೆ ದಯವಿಟ್ಟು ಯಾರು ತಮ್ಮಷ್ಟಕ್ಕೆ ತಾವೇ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಯಾರಿಗಾದರೂ ವಯಕ್ತಿಕ ಸಲಹೆ ಸಮಾಲೋಚನೆ ಅವಶ್ಯಕತೆ ಗಳಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿ ಅಥವಾ ಸಿಬ್ಬಂದಿಗಳಲ್ಲಿ ಆಶಾ ಕಾರ್ಯಕರ್ತೆರಲ್ಲಿ ಅಥವಾ 104 ಸಹಾಯವಾಣಿಯನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲು ಹೇಳಿದರು.
ಇದನ್ನೂ ಓದಿ: ಅ.3ರ ಹಿಂದೂ ಮಹಾಗಣಪತಿ ಶೋಭಾಯಾತ್ರೆ | 4 ಲಕ್ಷ ಜನರ ನಿರೀಕ್ಷೆ, ಬಿಗಿ ಭದ್ರತೆ | ಎಸ್ಪಿ ಕುಶಾಲ್ ಚೌಕ್ಸೆ
ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ರೇಖಾ.ಟಿ.ಡಿ ಮಾತನಾಡಿ, 1971ರಲ್ಲಿ ಎಂ.ಟಿ.ಪಿ ಕಾಯ್ದೆ ಜಾರಿಗೆ ಬಂದಿತು. 2021ರ ತಿದ್ದುಪಡಿಯ ನಂತರ ವಿಶೇಷ ಸಂದರ್ಭಗಳಲ್ಲಿ 24 ವಾರಗಳವರೆಗೆ ಮತ್ತು ಮಹಿಳೆಯ ಆರೋಗ್ಯಕ್ಕೆ ಅಪಾಯವಿದ್ದಾಗ ವೈದ್ಯಕೀಯ ಮಂಡಳಿಯ ಸಲಹೆ ಮೇರೆಗೆ ಸುರಕ್ಷಿತ ಸೇವೆಗೆ ಅವಕಾಶವಿದೆ. ಅರ್ಹ ಸ್ತ್ರೀರೋಗ ತಜ್ಞರು ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಅವಶ್ಯವಿದ್ದಲ್ಲಿ ಗರ್ಭಪಾತ ಮಾಡಿಸಲು ಅವಕಾಶವಿದೆ ಎಂದರು.
ಇದೆ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ವಸ್ತು ಪ್ರದರ್ಶನ ಮತ್ತು ಅವುಗಳ ಬಳಕೆಯ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ವೇ ಕ್ಷಣಾಧಿಕಾರಿಗಳು, ಡಾ. ಚಂದ್ರಶೇಖರ.ವಿ.ಕಂಬಾಳಿಮಠ, ತಾಲ್ಲೂಕು ಆರೋಗ್ಯ ಅಧಿಕಾರಿ, ಡಾ.ರವಿಕುಮಾರ್.ಬಿ.ವಿ, ಸ್ತ್ರೀರೋಗ ತಜ್ಞರು ಮಂಜುನಾಥ್ ಟಿ, ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ ಭಾಗವಹಿಸಿದ್ದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದ ರೆಡ್ಡಿ ಕೊಣ್ಣೂರ, ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗದಿಂದ ಸರಸ್ವತಿ ಮತ್ತು ರೋಷನ್ ಆರಾ, ಕಾರ್ಯಕ್ರಮ ಮೇಲ್ವಿಚಾರಕ ಸಂತೋಷ್.ಎಂ.ಎಲ್, ಆಶಾ ಮೇಲ್ವಿಚಾರಕರು ಉಷಾ.ಎಂ.ಆರ್, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 29 | ಹತ್ತಿ ರೇಟ್ ಎಷ್ಟಿದೆ?
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ನಾಯಕ ಕಾರ್ಯಕ್ರಮ ನಿರೂಪಿಸಿದರು. ರಂಗನಾಥ್ ಎಂ ಕೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

