CHITRADURGA NEWS | 05 February 2026
ಚಿತ್ರದುರ್ಗ: ಸತಿ-ಪತಿಗಳ ಜೀವನದಲ್ಲಿ ಜ್ಞಾನದಷ್ಟೆ ನಂಬಿಕೆ ಬಹಳ ಮುಖ್ಯ. ಇಂದು ಇಡೀ ಜಗತ್ತು ಭಾರತದ ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಮ್ಮ ಕೌಟುಂಬಿಕ ಮೌಲ್ಯಗಳು ಅಷ್ಟು ಮಹತ್ವಪೂರ್ಣವಾಗಿವೆ ಎಂದು ಡಾ. ಬಸವಪ್ರಭು ಸ್ವಾಮಿಗಳು ಹೇಳಿದರು.
ಇದನ್ನೂ ಓದಿ: ಹೊಳಲ್ಕೆರೆ ತಾಲೂಕಿಗೆ 14 KPS ಶಾಲೆ ಮಂಜೂರು | ಡಾ.ಎಂ.ಚಂದ್ರಪ್ಪ
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 36ನೇ ವರ್ಷದ 2ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 3 ಜತೆ ಅಂತರ್ಜಾತಿ ವಿವಾಹ ಸೇರಿದಂತೆ 16 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು,
ಶ್ರೀಮಠವು ಸರ್ವಜನಾಂಗದ ಮಠದವಾಗಿದೆ. 12ನೇ ಶತಮಾನದ ಬಸವಾದಿ ಶರಣರ ಆದರ್ಶಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವುದಕ್ಕೆ ಇಂದಿನ ಕಲ್ಯಾಣ ಮಹೋತ್ಸವದಲ್ಲಿ 3 ಜೋಡಿ ಅಂತರ್ಜಾತಿ ವಿವಾಹ ನೆರವೇರುತ್ತಿರುವುದು ಉತ್ತಮ ನಿದರ್ಶನವಾಗಿದೆ ಎಂದರು.
ಮಾನವನಿಗೆ ಹೊಟ್ಟೆ ಹಸಿವು ಎಷ್ಟು ಮುಖ್ಯವೋ ನೆತ್ತಿಯ ಹಸಿವು ಕೂಡ ಅಷ್ಟೇ ಮುಖ್ಯ. ದೇಹವೆಂಬ ಕೊಡದಲ್ಲಿ ಸುಜ್ಞಾನವನ್ನು ತುಂಬಿಕೊಳ್ಳಬೇಕು. ಅಹಂಕಾರದ ಬದಲಾಗಿ ಜ್ಞಾನವನ್ನು ತುಂಬಿಕೊಂಡಾಗ ಅದು ಯಾವತ್ತೂ ತುಳುಕುವುದಿಲ್ಲ. ಎಷ್ಟೋ ಸಂಸಾರಗಳು ಭೌತಿಕ ಸಂಪತ್ತಿಗಾಗಿ ಮನಸ್ತಾಪಗೊಂಡು ವಿಚ್ಛೇದನಕ್ಕೆ ಒಳಗಾಗುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಸತಿ ಪತಿಗಳು ಪರಸ್ಪರರ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಸುಖ ಜೀವನವನ್ನು ನಡೆಸಬೇಕೆಂದು ತಿಳಿಹೇಳಿದರು.
ಇದನ್ನೂ ಓದಿ: ಬಾಕಿ ಬೆಳೆವಿಮೆ ಬಿಡುಗಡೆಗೆ ಸಂಸದ ಗೋವಿಂದ ಕಾರಜೋಳ ಮನವಿ | ಕೇಂದ್ರ ಕೃಷಿ ಸಚಿವರ ಭೇಟಿ
ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಅತ್ಯಂತ ಸಾತ್ವಿಕವಾದ ಜೀವನ ಸಾಗಿಸಲು ಗುರು-ಹಿರಿಯರ, ಶರಣರ, ಪುಣ್ಯಪುರಷರ ಸತ್ಸಂಗವಿರಬೇಕು. ನಮ್ಮ ದೇಹ, ಮನಸ್ಸು, ಪ್ರಾಣ ಈ ಮೂರನ್ನು ಉಪಯೋಗಿಸಿಕೊಂಡು ನಾವು ವಿಶ್ವಪ್ರಜ್ಞೆಯನ್ನು ಹೊಂದಬೇಕು. ಸತಿಪತಿಗಳಾಗಲಿರುವ ನವದಂಪತಿಗಳು ತಮ್ಮ ಆಲೋಚನೆಗಳನ್ನು ಕುಟುಂಬದಾಚೆಗೆ ವಿಸ್ತರಿಸಿಕೊಂದು ವಿಶ್ವ ಮಾನವರಾಗಬೇಕೆಂದರು.
ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಶ್ರೀಮಠದ ಸಾಮೂಹಿಕ ಕಲ್ಯಾಣ ಮಹೋತ್ಸವವು ಅತ್ಯಂತ ಸರಳವಾಗಿ ನಡೆಯುವಂಥದ್ದು ಮತ್ತು ಕಡಿಮೆ ಖರ್ಚಿನದು. ಇದರ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 5 ಫೆಬ್ರವರಿ | ಇಂದಿನ ಅಡಿಕೆ ಮಾರುಕಟ್ಟೆ ವಿವರ
ಪೈಲ್ವಾನ್ ತಿಪ್ಪೇಸ್ವಾಮಿ ಮಾತನಾಡಿದರು. ಲಿಂಗಾಯತ ನೌಕರರ ಸಂಘದಿಂದ ಹೊರತರಲಾದ ಗೋಡೆ ಕ್ಯಾಲೆಂಡರ್‌ನ್ನು ಶ್ರೀಗಳು ಬಿಡುಗಡೆಗೊಳಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
