ಕ್ರೈಂ ಸುದ್ದಿ
ಲಾಭದ ಆಸೆ ತೋರಿಸಿ ಆನ್‍ಲೈನ್ ಮೂಲಕ 14.21 ಲಕ್ಷ ರೂ. ವಂಚನೆ

Published on
CHITRADURGA NEWS | 14 JANUARY 2024
ಚಿತ್ರದುರ್ಗ: ಲಾಭದ ಆಸೆ ತೋರಿಸಿ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವ ಸಂಬಂಧ ಚಿತ್ರದುರ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಸದುರ್ಗದ ವಿಜ್ಞಾನಿ ವಿಜಯ್.ಎನ್ ಎಂಬುವವರಿಗೆ 2023 ನವೆಂಬರ್‍ನಲ್ಲಿ ವಾಟ್ಸಪ್ ಮೂಲಕ ಜೆಪಿ ಮಾರ್ಗನ್ ಫೈನಾನ್ಸ್ ಡಿಮ್ಯಾಟ್‍ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ಸಂದೇಶ ಕಳಿಸಿದ್ದಾರೆ.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆ | ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಇದನ್ನು ನಂಬಿದ ವಿಜಯ್ ಹಾಗೂ ಅವರ ಪತ್ನಿಯ ಖಾತೆಗಳಿಂದ ನವೆಂಬರ್ 21 ರಿಂದ 26ರವರೆಗೆ 14.21 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆದರೆ, ಇದೊಂದು ನಕಲಿ ಕಂಪನಿ ಎಂದು ಗೊತ್ತಾಗಿದ್ದು, ವಿಜಯ್ ಹಾಗೂ ಅವರ ಪತ್ನಿ ಮೋಸ ಹೋಗಿರುವ ಬಗ್ಗೆ ಸಂಪರ್ಕಿಸಿದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಸೈಬರ್ ಠಾಣೆಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
Continue Reading
Related Topics:Chitradurga, cyber fraud, Hosdurga, online cheating, ಆನ್‍ಲೈನ್ ಮೋಸ, ಚಿತ್ರದುರ್ಗ, ಸೈಬರ್ ವಂಚನೆ, ಹೊಸದುರ್ಗ

Click to comment