CHITRADURGA NEWS | 28 JANUARY 2026
ಚಿತ್ರದುರ್ಗ: 12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 28 | ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ರೇಟ್ ಎಷ್ಟಿದೆ?
ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಮಹಿಳೆ ಯಾವುದರಲ್ಲೂ ಸಹಾ ಕಡಿಮೆ ಇಲ್ಲ ಎಲ್ಲದರಲ್ಲೂ ಸಹಾ ಸಾಧನೆ ಮಾಡಿದ್ದಾಳೆ, ಅವರಿವರ ಮಾತನ್ನು ಕೇಳದೆ ತಮ್ಮ ಸ್ವಂತಿಕೆಯಿಂದ ಬುದ್ದಿಯನ್ನು ಚಲಾಯಿಸಬೇಕು.
ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯವಾಗಿದೆ. ಯಾವ ಕುಟುಂಬದಲ್ಲೂ ಸಹಾ ಮಹಿಳೆ ಇಲ್ಲದೆ ಆ ಕುಟುಂಬ ನಡೆಯಲು ಸಾಧ್ಯವಿಲ್ಲ. ಹೆಣ್ಣು ಪುರುಷನ ಬದುಕಿಗೆ ಮುಖ್ಯವಾಗಿದ್ದಾಳೆ. ವಚನ ಸಾಹಿತ್ಯದಲ್ಲಿ ಗಂಡು, ಹೆಣ್ಣು ಎಂಬ ಬೇಧ ಇಲ್ಲದೆ ಎಲ್ಲರನ್ನು ಸಮನಾಗಿ ಕಾಣಲಾಗಿದೆ. ನಮಗೆ ಶರಣರ ಸಾಹಿತ್ಯ ಪ್ರೇರಣೆಯಾಗಬೇಕು. ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: 2 ದಿನ ರೈತರಿಗೆ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಮಾನವನಾಗಿ ಬಂದ ಮೇಲೆ ಬರೀ ಸುಖವನ್ನು ಅನುಭವಿಸುವುದು ಮಾತ್ರವಲ್ಲ, ಮೋಕ್ಷದ ದಾರಿಯನ್ನು ಕಂಡುಕೊಳ್ಳಬೇಕು. ಈ ಹಿನ್ನಲೆಯಲ್ಲಿ ನಮಗೆ ಶರಣರ ವಚನಗಳು ದಾರಿ ದೀಪವಾಗಿವೆ. ಮಹಿಳೆಯರು ಕೀಳೀರಿಮೆಯನ್ನು ಬಿಡುವುದರ ಮೂಲಕ ಸಮಾಜದಲ್ಲಿ ತನ್ನನ್ನು ತಾನು ಪ್ರತಿಬಿಂಬಿಸಿಕೊಳ್ಳಬೇಕು ಎಂದರು.
ಬಸವಮಂಟಪದ ಶರಣೆ ದಾನೇಶ್ವರಿ ಮಾತಾಜಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮಹಿಳೆ ಎಲ್ಲಾ ಕಡೆಯಲ್ಲಿಯೂ ಸಹಾ ಪ್ರಗತಿಯನ್ನು ಸಾಧಿಸಿದ್ದಾಳೆ, ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಿದ್ದಾಳೆ, ಮಹಿಳೆಯರಿಗಾಗಿ ಮೊಟ್ಟ ಮೊದಲ ಬಾರಿಗೆ ಪೀಠವನ್ನು ಸ್ಥಾಪಿಸಿದ್ದು, ಮಾತೆ ಮಹಾದೇವಿಯವರು ಇವರು ಆಂದು ಸ್ಥಾಪಿಸಿದ ಪೀಠ ಇಂದು ಹೆಮ್ಮರವಾಗಿ ಬೆಳೆದಿದೆ.
ಲಿಂಗಾಯತರಾದವರು ದೇಹದ ಮೇಲೆ ಲಿಂಗ ಇರಬೇಕು, ರುದ್ರಾಕ್ಷಿಯನ್ನು ಧರಿಸಿರಬೇಕು, ಹಣೆಗೆ ವಿಭೂತಿ ಧಾರಣೆಯಾಗಿರಬೇಕು, ಇದರ ಬದಲು ಬಂಗಾರ ನಮ್ಮ ದೇಹದ ಮೇಲೆ ಇದ್ದರೆ ಯಾರೂ ಬೇಕಾದರೂ ಸಹಾ ಕಳ್ಳತನ ಮಾಡಬಹುದಾಗಿದೆ. ನಮ್ಮಲ್ಲಿ ಇವುಗಳು ಇದ್ದರೆ ಯಾರು ಸಹಾ ಇದನ್ನು ಕೇಳುವುದಿಲ್ಲ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆಂಚವೀರಪ್ಪ, ಹೊಸದುರ್ಗ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಆರ್.ಶೈಲಜಾ ಬಾಬು ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆಯ ಶಾಮನೂರಿನ ಜ್ಞಾನಧಾರೆ ಪುನರುತ್ಥಾನ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶಶಿಕಲಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
