
CHITRADURGA NEWS | 31 MAY 2026
ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್‍ಗಳ ವಿತರಣೆಗೆ ಚಾಲನೆ ನೀಡಲಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಶಾಲಾ-ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶದಂತೆ ಸಂಪೂರ್ಣ ವಿದ್ಯಾರ್ಥಿ ಬಸ್ ಪಾಸ್‍ಗಳನ್ನು ವಿತರಿಸಲು ನಿಗಮವು ಅಗತ್ಯ ಕ್ರಮ ಕೈಗೊಂಡಿದೆ.
ವಿದ್ಯಾರ್ಥಿಗಳು ಸೇವಾಸಿಂಧು ಫೋರ್ಟಲ್ ನ ಲಿಂಕ್ https://sevasindhuservices.karnataka.gov.in/buspassservices ಮೂಲಕ ಆನ್‍ಲೈನ್‍ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ದಿನಾಂಕ 29-05-2026 ರಿಂದಲೇ ಸೇವಾಸಿಂಧು ಫೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್‍ಲೈನ್ ಫೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.
ಚಿತ್ರದುರ್ಗ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ತಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ 30 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್‍ಗಾಗಿ ಅರ್ಜಿ ಪಡೆಯಲು ಡಿಕ್ಲರೇಷನ್ ಫಾರಂ ಅನ್ನು ಸೇವಾಸಿಂಧು ತಂತ್ರಾಂಶ ಅಥವಾ ಕರಾರಸಾ ನಿಗಮದ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು, ಅರ್ಜಿ ಸಲ್ಲಿಸುವಾಗ ತಮ್ಮ ವ್ಯಾಪ್ತಿಯಲ್ಲಿ ಬರುವ ಪಾಸ್ ಕೌಂಟರ್ ಅನ್ನು ಆಯ್ಕೆ ಮಾಡಿ ಸಬ್‍ಮಿಟ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಜಿಲ್ಲಾ ಯಾದವ ಗೊಲ್ಲ ಸಂಘದ ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ ಆಯ್ಕೆ
ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಕೌಂಟರ್ ವಿಳಾಸದ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಕಳುಹಿಸಲಾಗುವುದು. ದಿನಾಂಕ 01.06.2026 ರಿಂದ ವಿದ್ಯಾರ್ಥಿ ಪಾಸ್‍ಗಳ ವಿತರಣೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಕೌಂಟರ್‍ಗೆ ತೆರಳಿ, ನಿಗದಿತ ಪಾಸ್ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಂಚಾರ ಅಧಿಕಾರಿಗಳು-9606908962, ಚಿತ್ರದುರ್ಗ ಘಟಕ ವ್ಯವಸ್ಥಾಪಕರು-7760990465, ಚಳ್ಳಕೆರೆ ಘಟಕ ವ್ಯವಸ್ಥಾಪಕರು-7760999445, ಹೊಸದುರ್ಗ ಘಟಕ ವ್ಯವಸ್ಥಾಪಕರು-7760998020, ಪಾವಗಡ ಘಟಕ ವ್ಯವಸ್ಥಾಪಕರು-7760990918 ಹಾಗೂ ಹಿರಿಯೂರು ಘಟಕ ವ್ಯವಸ್ಥಾಪಕರು-6364220531 ಅನ್ನು ಸಂಪರ್ಕಿಸಬಹುದು.
ಪಾಸ್ ವಿತರಣೆ ಮಾಡುವ ಕೌಂಟರ್‍ಗಳ ವಿವರ ಇಂತಿದೆ. ಚಿತ್ರದುರ್ಗ- ನಗರದ ಎಸ್‍ಬಿಎಂ ರಸ್ತೆಯ ಮೃತ್ಯುಂಜಯ ಕಾಂಪ್ಲೆಕ್ಸ್, ಸೃಜನ್ ಇಎನ್‍ಟಿ ಕ್ಲೀನಿಕ್ ಹತ್ತಿರ ಹಾಗೂ ನಗರದ ಕೆಳಗೋಟೆಯ ವೈಶಾಲಿ ಸರ್ಕಲ್ ಬಾಯ್ಸ್ ಜೂನಿಯರ್ ಕಾಲೇಜು ಎದುರಿನ ಭೀಮಪ್ಪ ನಾಯಕ ರಸ್ತೆಯ ಕರ್ನಾಟಕ ಒನ್‍ನಲ್ಲಿ ಪಾಸ್ ವಿತರಣೆ ಮಾಡಲಾಗುವುದು.
ಇದನ್ನೂ ಓದಿ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ
ಚಳ್ಳಕೆರೆ ತಾಲ್ಲೂಕಿನಲ್ಲಿ ಚಳ್ಳಕೆರೆ ಕೆಎಸ್‍ಆರ್‍ಟಿಸಿ ಬಸ್‍ಸ್ಟಾಂಡ್ ಎದುರಿನ ಮುನಿಸಿಪಲ್ ಬಿಲ್ಡಿಂಗ್ ರೂಂ ನಂ-8ರ ಕರ್ನಾಟಕ ಒನ್, ಮೊಳಕಾಲ್ಮುರು ಎಸ್‍ಬಿಎಂಐ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್, ಹೊಸದುರ್ಗ ಗಾಂಧಿ ಸರ್ಕಲ್ ಹತ್ತಿರ ಹೊಳಲ್ಕೆರೆ ರೋಡ್ ಕರ್ನಾಟಕ ಒನ್, ಹೊಳಲ್ಕೆರೆ ಚಿತ್ರದುರ್ಗ ರೋಡ್ ತಾಲ್ಲೂಕು ಆಫೀಸ್ ಎದುರುಗಡೆಯ ಕರ್ನಾಟಕ ಒನ್, ಪಾವಗಡದಲ್ಲಿ ತಾಲ್ಲೂಕು ಆಫೀಸ್ ರೋಡ್ ಎಂಟಿಆರ್ ಹೋಟೆಲ್ ಹತ್ತಿರದ ಕರ್ನಾಟಕ ಒನ್ ಹಾಗೂ ಹಿರಿಯೂರು ನಗರದ ಕರೂರು ವೈಶ್ಯ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್‍ನಲ್ಲಿ ಪಾಸ್ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
