
CHITRADURGA NEWS | 22 NOVEMBER 2025
ಚಿತ್ರದುರ್ಗ: ಬೈಕ್ ಸವಾರರಿಗೆ ಹೆಲ್ಮೆಟ್ ಎಂಬುದು ಜೀವ ರಕ್ಷಕದ ಕವಚವಾಗಿದೆ, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಜೀವಗಳನ್ನ ರಕ್ಷಣೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: RTO ಕಚೇರಿ ಪ್ರಕರಣಗಳಲ್ಲಿ ಶೇ.50 ರಿಯಾಯಿತಿ | ಡಿಸೆಂಬರ್ 12 ಕೊನೆಯ ದಿನ

ನಗರದ ಮದಕರಿ ಸರ್ಕಲ್ ಬಳಿ ಸಂಚಾರಿ ಪೊಲೀಸ್ ಇಲಾಖೆ ಹಾಗೂ ಜೆ ಎಸ್ ಡಬ್ಲ್ಯೂ ಬೊಮ್ಮನ್ ಕಬ್ಬಿಣದ ಅದಿರು ಗಣಿ ಇವರ ನೇತೃತ್ವದಲ್ಲಿ ಸಂಚಾರಿ ನಿಯಮಗಳ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು,
ದಿನನಿತ್ಯ ಸಾಕಷ್ಟು ಬೈಕು ಅಪಘಾತಗಳಿಂದಾಗಿ ಸಾವು ನೋವುಗಳು ಆಗುತ್ತಲೇ ಇವೆ, ಅತಿ ವೇಗ ಪ್ರಾಣಕ್ಕೆ ಆಪತ್ತು, ದ್ವಿಚಕ್ರ ವಾಹನಗಳಲ್ಲಿ ನಿಯಮಿತ ವೇಗದಲ್ಲಿ ಸಂಚರಿಸಿ ತಮ್ಮ ಜೀವಿಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಜೆ ಎಸ್ ಡಬ್ಲ್ಯೂ ಬೊಮ್ಮನ್ ಕಬ್ಬಿಣದ ಅದಿರು ಗಣಿ ಮೆನ್ಸ್ ನ ಮ್ಯಾನೇಜರ್ ರವಿಕಿರಣ್ ಮಾತನಾಡಿ, ಜೆಎಸ್ ಡಬ್ಲ್ಯೂ ಗಣಿಗಾರಿಕೆ ವತಿಯಿಂದ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿತಿದೆ. ಇದರ ಜೊತೆಗೆ ದ್ವಿಚಕ್ರ ವಾಹನ ಸವಾರರಿಗೆ ಜೀವ ರಕ್ಷಾ ಕವಚ ಹೆಲ್ಮೆಟ್ ಗಳನ್ನ ನಿರಂತರವಾಗಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲಾಗುತ್ತದೆ.
ಅವಸರದಲ್ಲಿ ಆದ ಅಪಾಯಗಳು ಶಾಶ್ವತವಾಗಿ ಉಳಿಯುವಂತ ಪ್ರಸಂಗಗಳು ಎದುರಾಗುತ್ತವೆ ಹಾಗಾಗಿ ದ್ವಿಚಕ್ರ ವಾಹನ ಸವಾರರು ಮಂದಗತಿಯಲ್ಲಿ ವಾಹನವನ್ನ ಚಲಾಯಿಸಿ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಾನೂನು ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಸಾರ್ವಜನಿಕರಿಗೆ ಜೆ ಎಸ್ ಡಬ್ಲ್ಯೂ ಬೊಮ್ಮನ್ ಕಬ್ಬಿಣದ ಅದಿರು ಗಣಿ ಕಂಪನಿ ವತಿಯಿಂದ ಉಚಿತವಾಗಿ ಬೈಕ್ ಹೆಲ್ಮೆಟ್ ಗಳನ್ನ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ರಂಜಿತ್ ಕುಮಾರ್ ಭಂಡಾರ, ಹೆಚ್ಚುವರಿ ಪೊಲೀಸ್ ಅಧಿಕಾರ ಡಾ.ಶಿವಕುಮಾರ್, ಡಿವೈಎಸ್ಪಿ ದಿನಕರ್, ಚಿತ್ರದುರ್ಗ ನಗರ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್, ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಪ್ರಸಾದ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳಾದ ಬಸವರಾಜ್, ಶ್ರೀನಿವಾಸ್, ಜೆ ಎಸ್ ಡಬ್ಲ್ಯೂ ಬೊಮ್ಮನ್ ಕಬ್ಬಿಣದ ಅದಿರು ಗಣಿ ಮೆನ್ಸ್ ನ ಮ್ಯಾನೇಜರ್ ವಿನೋದ್ ಕುಮಾರ್ ಹಾಗೂ ಡೆಪ್ಯೂಟಿ ಮ್ಯಾನೇಜರ್ ರವಿಕಿರಣ್, ಸಾರ್ವಜನಿಕರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
