CHITRADURGA NEWS | 12 JANUARY 2026
ಚಿತ್ರದುರ್ಗ: ಗಣಿ ಲಾರಿಗಳ ಓಡಾಟದಿಂದ ಭೀಮಸಮುದ್ರ ಭಾಗದಲ್ಲಿ ರಸ್ತೆಗಳು ಹಾಳಾಗಿದ್ದು, ಜನರ ಜೀವನ ಕೂಡಾ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಅದಿರನ್ನು ರಸ್ತೆಗಳ ಬದಲಾಗಿ ರೈಲ್ವೇ ಮಾರ್ಗದಿಂದ ಸಾಗಾಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಇದನ್ನೂ ಓದಿ: ಆಡು ಮಲ್ಲೇಶ್ವರ ಮೃಗಾಲಯದ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಭೀಮಸಮುದ್ರ ಭಾಗದದಿಂದ ಗಣಿ ಅದಿರು ಸಾಗಾಟ ಮಾಡಲು ಗಣಿ ಕಂಪನಿಗಳು ಲಾರಿಗಳನ್ನು ಬಳಸುತ್ತಿವೆ. ಇದರಿಂದ ಸರ್ಕಾರ ಮಾಡಿರುವ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಇದ್ದಲ್ಲದೆ ಅದಿರಿನಿಂದ ಬರುವ ಧೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಮೀನುಗಳಲ್ಲಿ ಬೆಳೆದ ಬೆಳೆಯೂ ಹಾಳಾಗುತ್ತಿದೆ. ಇದರಿಂದ ಬೇಸತ್ತ ಜನತೆ ಲಾರಿಗಳ ಓಡಾಟ ತಡೆದು ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಲಾರಿಗಳ ಬದಲಾಗಿ ರೈಲ್ವೇ ವ್ಯಾಗನ್‌ಗಳ ಮೂಲಕ ಅದಿರು ಸಾಗಾಣೆ ಮಾಡಿದರೆ ರಸ್ತೆಗಳು ಹಾಳಾಗುವುದಿಲ್ಲ. ಜನರ ಆರೋಗ್ಯವೂ ಉಳಿಯುತ್ತದೆ. ಬೆಳೆಗಳಿಗೂ ರಕ್ಷಣೆ ಸಿಗುತ್ತದೆ. ಈ ಸಂಬಂಧ ಗಣಿ ಮಾಲಿಕರ ಜೊತೆ ಮಾತನಾಡಿ ತೀರ್ಮಾನಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿಗಳುಗೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಬಿ.ಜಗದೀಶ್ ಮಾತನಾಡಿ, ಗಣಿಗಾರಿಕೆಯಿಂದ ಸಣ್ಣ ಮಕ್ಕಳು ವಯಸ್ಸಾದವರು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಲಾರಿಗಳ ಧೂಳಿನಿಂದ ಜನರಿಗೆ ಕೆಮ್ಮು, ನೆಗಡೆ, ಕಫ, ಜ್ವರಗಳು ಕಾಣಿಸಿಕೊಳ್ಳುತ್ತಿದೆ. ರಾತ್ರಿ ಸಮಯದಲ್ಲಿ ಖಾಲಿ ಲಾರಿಗಳ ಓಡಾಟದಿಂದ ಮನೆಯಲ್ಲಿ ಮಲಗಿದವರಿಗೆ ನಿದ್ದೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಡೆಸ್ಟಿನಿಯಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶನ | ರಾಜೇಶ್ ಕೃಷ್ಣನ್ ಸಂಗೀತಾ ಮಾಯಾಲೋಕ
ಮನೆಯ ಬಾಗಿಲನ್ನು ಮುಚ್ಚಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದಿರು ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ರಸ್ತೆಗಳು ಪೂರ್ಣ ಕೆಂಪಾಗಿವೆ ಇದರ ನಿವಾರಣೆಗಾಗಿ ಅದಿರು ಕಂಪನಿಯವರು ನೀರನ್ನು ಹಾಕುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಗುಂಡಿ ಇದ್ದರೂ ಕಾಣುವುದಿಲಲ್ಲ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷ ಪೂರ್ಯನಾಯ್ಕ್, ಕಾರ್ಯದರ್ಶಿ ರಘು, ಸಂಘಟನಾ ಕಾರ್ಯದರ್ಶಿ ಈರಣ್ಣ, ಖಂಜಾಚಿ ಬಸವರಾಜು, ನಿರ್ದೆಶಕರಾದ ವಿರೇಶ್, ಕುಮಾರ್, ಜಗದೀಶ್, ಪ್ರಸನ್ನ, ರೈತ ಮುಖಂಡರಾದ ಭೂತಯ್ಯ, ಧನಂಜಯ ಬಸ್ತಿಹಳ್ಳಿ ಸುರೇಶ್ ಬಾಬು ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
