ಮುಖ್ಯ ಸುದ್ದಿ
ಮೊದಲು ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೊಳಿಸಿ | ರಾಜ್ಯ ರೈತ ಆಗ್ರಹ

CHITRADURGA NEWS | 14 JANUARY 2024
ಚಿತ್ರದುರ್ಗ (CHITRADURGA): ಹಲವು ವರ್ಷಗಳಿಂದ ಕಾಣದಂತಹ ಬರಸ್ಥಿತಿ ಜಿಲ್ಲೆಗೆ ಈ ವರ್ಷ ಪುನಃ ಜಿಲ್ಲೆಗೆ ಎದುರಾಗಿದೆ. ಆದ್ದರಿಂದ ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ನೀಡಬೇಕಿರುವ ₹ 5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಿಸಿದೆ.
ಮೊಳಕಾಲ್ಮುರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು, ಸಕಾಲಕ್ಕೆ ಅನುದಾನ ಬಿಡಗಡೆಯಾಗದ ಕಾರಣ ಕಾಮಗಾರಿ ಸ್ಥಗಿತವಾಗಿದೆ. ಅನುದಾನದ ವಿಚಾರದ ಬಂದರೆ ಸಾಕು ಸಾಲು..ಸಾಲು. ಸಬೂಬುಗಳನ್ನು ಹೇಳುತ್ತ ದಿನ ದೂಡಲಾಗುತ್ತಿದೆ. ಇದರಿಂದ ಯೋಜನೆ ವೆಚ್ಚ ಮಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ’ ಎಂದು ದೂರಿದರು.
ಇದನ್ನೂ ಓದಿ: ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಕೆ.ಗೋಪಾಲ ರೆಡ್ಡಿ ನಿಧನ

ಬರದಿಂದಾಗಿ ತಾಲ್ಲೂಕಿನಲ್ಲಿ ಜನ, ಜಾನುವಾರು ಸಂಕಷ್ಟಕ್ಕೀಡಾಗಿದ್ದಾರೆ. ನೆರವಿಗೆ ಬರಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕ್ಕೆ ಮೀನಮೇಷ ಎಣಿಸುತ್ತಿವೆ. ಕೂಡಲೇ ಬರ ಪರಿಹಾರ ಕಾರ್ಯಗಳನ್ನು ಆರಂಭಿಸುವ ಜತೆಗೆ ಬೆಳೆನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತು.
ಮುಖಂಡರಾದ ಎಸ್.ಮಂಜುನಾಥ್, ಟಿ.ಚಂದ್ರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕನಕ ಶಿವಮೂರ್ತಿ, ಪಿ.ಟಿ.ಹಟ್ಟಿ ಈರಣ್ಣ, ತಿಮ್ಮಣ್ಣ ಪಾಲ್ಗೊಂಡಿದ್ದರು.

