CHITRAUDRGA NEWS | 03 DECEMBER 2025
ಚಿತ್ರದುರ್ಗ: ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಹೆಜ್ಜೆಗುರುತುಗಳನ್ನು ಅರಿತುಕೊಳ್ಳಿ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರು ಹಾಗೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯರಾದ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಇದನ್ನೂ ಓದಿ: ಗ್ಯಾರೆಂಟಿ ಯೋಜನೆಗಳ ಕಲಾ ಜಾಥಾ | ಅಧ್ಯಕ್ಷ ಆರ್.ಶಿವಣ್ಣ ಚಾಲನೆ
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ಅಧ್ಯಯನ ವಿಭಾಗದಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಮತ್ತು ನಾಮಕರಣ ಈ ಎರಡೂ ಘಟನೆಗಳು ಕರ್ನಾಟಕದ ಚರಿತ್ರೆಯಲ್ಲಿ ಸಾಂಸ್ಕøತಿಕವಾಗಿ ಮಹತ್ವ ಪಡೆದಿದ್ದು, ಜೊತೆಗೆ ಕನ್ನಡ-ಕನ್ನಡಿಗ ಮತ್ತು ಕರ್ನಾಟಕದ ಅಸ್ಮಿತೆಯ ಪ್ರತೀಕವೂ ಆಗಿದ್ದರಿಂದ ಹೋರಾಟಕ್ಕೆ ಗಂಭೀರವಾದ ಸಂಗತಿಗಳಾಗಿದ್ದವು ಎಂದು ಹೇಳಿದರು.
ಭಾರತ ಸ್ವತಂತ್ರ ಚಳುವಳಿಯ ಹೋರಾಟಗಾರರನ್ನು ಒಳಗೊಂಡಂತೆ ಕನ್ನಡ ಪರ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿದ್ದವು. ಈ ಚಳುವಳಿಗಳ ಮಧ್ಯೆಯೇ ಕನ್ನಡಿಗರ ಜಾಗೃತಿಗಾಗಿ ಕನ್ನಡ ಕುಲ ಪುರೋಹಿತ ಎಂದು ಕರೆಸಿಕೊಂಡಿದ್ದ ಆಲೂರು ವೆಂಕಟರಾವ್ ಅವರ ಕರ್ನಾಟಕ ಗತ ವೈಭವ ಕೃತಿ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಕನ್ನಡಿಗರ ಸಾಧನೆಗಳ ಕುರಿತ ಮಹತ್ವದ ಈ ಕೃತಿ 1912ರಲ್ಲಿ ಪ್ರಕಟವಾಗುತ್ತದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 3 | ಯಾವ ಅಡಿಕೆಗೆ ಎಷ್ಟು ರೇಟ್
ಕರ್ನಾಟಕ ಗತ ವೈಭವ ಎಂದರೆ ಕರ್ನಾಟಕದ ವೈಭವಯುತ ಇತಿಹಾಸ ಕಟ್ಟಿ ಕೊಟ್ಟಿರುವುದು. ಕನ್ನಡ ಅರಸರಿಂದ ಆರಂಭಿಸಿ ವಿಜಯನಗರದ ಉಚ್ಛ್ರಾಯ ಸ್ಥಿತಿ, ವಿಜಯ ನಗರದ ಪತನ, ಮರಾಠಿಗರು, ನಿಜಾಮರ ಆಳ್ವಿಕೆ ಮತ್ತು ಬ್ರಿಟಿಷ್ ಅಧಿಪತ್ಯ ಎಲ್ಲದರ ಮಾಹಿತಿಯನ್ನು ದಾಖಲಿಸಲಾಗಿದೆ. ಕನ್ನಡಿಗರ ಅದರಲ್ಲೂ ಜನಸಾಮಾನ್ಯರ ಜಾಗೃತಿಗೊಳಿಸಲು ಈ ಕೃತಿ ಪ್ರಯೋಜನವಾಯಿತು ಎಂದು ಹೇಳಿದರು.
ದೇಶದ ಸ್ವಾತಂತ್ರಕ್ಕಾಗಿ ನಡೆದ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳುವಳಿ ಒಗ್ಗಟ್ಟಾಗಿ ಹೋರಾಡದ ಫಲವೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ನಂತರ ಕರ್ನಾಟಕ ಏಕೀಕರಣವೂ ಆಯಿತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಲೇಖಕರ ಸಂಘ, ಕರ್ನಾಟಕ ರಾಜಕೀಯ ಪರಿಷತ್ತು, ಭಾರತ ಸ್ವತಂತ್ರ ಚಳುವಳಿಯ ಹೋರಾಟಗಾರರನ್ನು ಒಳಗೊಂಡಂತೆ ಕನ್ನಡ ಪರ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಹೇಳಿದರು.
ಈಗಿನ ಕರ್ನಾಟಕವು ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 20 ಆಡಳಿತಾತ್ಮಕ ಘಟಕಗಳಾಗಿ ಹಂಚಿ ಹೋಗಿತ್ತು. ಮೈಸೂರು ಸಂಸ್ಥಾನ, ಹೈದರಾಬಾದಿನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಕೊಡಗು ಹೀಗೆ ಹಲವು ಪ್ರಮುಖ ಆಡಳಿತ ವಿಭಾಗಗಳಾಗಿದ್ದವು. ಕನ್ನಡವನ್ನು ಅಧಿಕೃತ ಆಡಳಿತ ಭಾಷೆ ಮಾಡಿಕೊಂಡಿದ್ದ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಬೇರೆ ಪ್ರದೇಶಗಳು ಬೇರೆಯವರ ಆಳ್ವಿಕೆಗೆ ಒಳಪಟ್ಟಿದ್ದವು. ಹೀಗಾಗಿ ಕನ್ನಡ ಭೂ ಪ್ರದೇಶ ಹರಿದು ಹಂಚಿ ಹೋಗಿದ್ದರೆ, ಕನ್ನಡ ಭಾಷೆ ಅವನತಿಯ ಸ್ಥಿತಿಯಲ್ಲಿತ್ತು.
ಇದನ್ನೂ ಓದಿ: ಡಿಸಿ ವೃತ್ತದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಮಾವಣೆ | ನಶಾಮುಕ್ತ ಭಾರತ ಅಭಿಯಾನಕ್ಕೆ ಕರೆ
ವಿವಿಧ ಆಡಳಿತದಲ್ಲಿ ತುಂಡು ತುಂಡಾಗಿದ್ದ ಕನ್ನಡ ಮಾತನಾಡುವ ಭೂಪ್ರದೇಶ ಮತ್ತು ಕನ್ನಡ ಭಾಷಿಕರನ್ನು ಒಂದುಗೂಡಿಸಿದ್ದು 1956 ನವೆಂಬರ್ 1 ರಂದು. ಆಗ ಅಸ್ತಿತ್ವಕ್ಕೆ ಬಂದಿದ್ದೇ ಮೈಸೂರು ರಾಜ್ಯ. ಇದಾದ 15-16 ವರ್ಷಗಳ ಕಾಲ ನಾಮಕರಣ ಚರ್ಚೆಗಳು, ಹೋರಾಟಗಳು ನಡೆಸಿದ ಫಲವಾಗಿ 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು.
ಇದಕ್ಕಾಗಿ ಹಲವಾರು ಸಂಘ-ಸಂಸ್ಥೆಗಳು, ಸಾಹಿತಿಗಳು, ಕಲಾವಿದರು, ವ್ಯಾಪಾರಿಗಳು, ಸಂಶೋಧಕರು ಮತ್ತು ಜನಸಮಾನ್ಯರು ಸೇರಿ ಒಗ್ಗಟ್ಟಾಗಿ ಹೋರಾಡಿದರು. ಅದರಲ್ಲೂ ಉತ್ತರ ಕರ್ನಾಟಕದ ಪಾತ್ರ ಹಿರಿದು ಎಂದು ಅಭಿಪ್ರಾಯಪಟ್ಟರು.
ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಜಿ.ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವವೆಂಬುದು ಬರೀ ನವೆಂಬರ್ ಮಾಸಕಷ್ಟೇ ಮೀಸಲಲ್ಲ. ಪ್ರತಿ ದಿನವೂ ಪ್ರತಿ ತಿಂಗಳು ಕನ್ನಡ ದಿನವೇ, ಕರ್ನಾಟಕದ ನೆಲ-ಜಲ ಎಲ್ಲವೂ ಕನ್ನಡವೇ ಎಂದು ಕನ್ನಡತ್ವದ ಬಗ್ಗೆ ತಿಳಿಸಿದರು.
ಇದನ್ನೂ ಓದಿ: ಟ್ರ್ಯಾಕ್ಟರ್ ಟ್ರಾಲಿಗೆ ರಿಪ್ಲೆಕ್ಟರ್ ಅಳವಡಿಕೆ ವಿಚಾರ | RTO ಬಗ್ಗೆ ಅಸಮಧಾನ
ಕಾರ್ಯಕ್ರಮದಲ್ಲಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸತ್ಯನಾರಾಯಣ, ಪ್ರಾಧ್ಯಾಪಕರಾದ ಡಾ.ಶಾಂತರಾಜ್, ಡಾ.ಆರ್.ರೂಪೇಶ್ ಕುಮಾರ್, ಡಾ.ಆರ್.ಶಶಿಧರ್, ಡಾ.ಕೀರ್ತಿಕುಮಾರ್, ಡಾ.ರಾಜೇಂದ್ರ ಪ್ರಸಾದ್, ಡಾ.ಶರಣ್ ರಾಜ್, ಡಾ.ಟಿ.ಸುಂದರಮ್ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

