ಮುಖ್ಯ ಸುದ್ದಿ
ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗಧಿ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ

CHITRADURGA NEWS | 9 APRIL 2024
ಚಿತ್ರದುರ್ಗ: ಕೋಟೆನಾಡಿನ ಶಕ್ತಿ ದೇವತೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿ ಜಾತ್ರೆ ಮೇ 14 ರಿಂದ28 ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ಮೇ.14 ರಂದು ಸಾರು ಹಾಕುವುದು, ಮೇ.18ರ ಬೆಳಗ್ಗೆ ಶಾಸ್ತ್ರೋಕ್ತವಾಗಿ ಕಂಕಣಧಾರಣೆ, ರಾತ್ರಿ ಹೂವಿನ ಅಲಂಕಾರದೊಂದಿಗೆ ಸಿಂಹೋತ್ಸವ, ಮೇ.19 ರಂದು ಸರ್ಪೋತ್ಸವ, ಮೇ.20 ರಂದು ನವಿಲೋತ್ಸವ ಜರುಗಲಿವೆ. ಮೇ.22ರಂದು ಕೆಳಗಿಳಿಯುವ ಕಾರ್ಯಕ್ರಮ, ಮೇ.24ರಂದು ನಾನಾ ಜನಪದ ಕಲಾಮೇಳಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಮೇ.25ರಂದು ಸಿಡಿ ಉತ್ಸವ ಜರುಗಲಿದೆ. ಮೇ.26ರಂದು ಮಹಾ ಭಕ್ತರಿಂದ ಓಕುಳಿ ಕಾರ್ಯಕ್ರಮ, ಮೇ.28ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

ಕ್ಲಿಕ್ ಮಾಡಿ ಓದಿ: ಲೋಕಸಭಾ ಚುನಾವಣೆಗೆ ಚಿಹ್ನೆ ಹಂಚಿಕೆ | ಯಾರಿಗೆ ಯಾವುದು ಸಿಕ್ತು | ಇಲ್ಲಿದೆ ನೋಡಿ ಪೂರ್ಣ ವಿವರ
ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ಬೆಳ್ಳಿಯ ಹೊಸ ಮುಖಪದ್ಮ, ಕಿರೀಟ, ಬೆಳ್ಳಿ ಕತ್ತಿ, ಛತ್ರಿ, ಸೊಂಟದ ಪಟ್ಟಿ ಹಾಗೂ ತಲೆಯ ಮೇಲಿನ ಸರ್ಪವನ್ನು ಹೊಸದಾಗಿ ಮಾಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಈಗಾಗಲೇ ದೇವಿಗೆ ಇದ್ದ ಮುಖಪದ್ಮ, ಕಿರೀಟ, ಸೊಂಟದ ಪಟ್ಟಿ ಸೇರಿದಂತೆ ಮತ್ತಿತರ ವಸ್ತುಗಳು ಮುಕ್ಕಾಗಿದ್ದು, ಈ ಹಳೆಯ ಸುಮಾರು 2 ಕೆ.ಜಿ.ಯಷ್ಟು ಬೆಳ್ಳಿಯ ಜತೆ ಹೊಸದಾಗಿ ಸುಮಾರು 3.50 ಕೆ.ಜಿ.ಯಿಂದ 4 ಕೆ.ಜಿ.ಯಷ್ಟು ಭಕ್ತರ ದೇಣಿಗೆಯಿಂದ ಬೆಳ್ಳಿ ಸಂಗ್ರಹಿಸಿ ಜಾತ್ರೆ ಒಳಗಾಗಿ ಈ ಎಲ್ಲ ಆಭರಣಗಳನ್ನು ಮಾಡಿಸುವ ಕುರಿತು ಚರ್ಚಿಸಲಾಯಿತು. ಭಕ್ತರು ಸ್ಥಳದಲ್ಲೇ ವಾಗ್ದಾನ ನೀಡಿದಂತೆ ಸುಮಾರು 2.80 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಯುಗಾದಿ ಹಬ್ಬದ ಬಳಿಕ ಆಭರಣ ಮಾಡಿಸಲು ಮುಂದಾಗುವುದಾಗಿ ಮುಖಂಡರು ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಮುಖಂಡರಾದ ಚಂದ್ರಶೇಖರ್, ಸುರೇಶ್ ಉಗ್ರಾಣ, ರಮೇಶ್, ವೀರೇಶ್, ಆರ್.ಮಂಜುನಾಥ್, ಪರಮೇಶ್, ಜಯಣ್ಣ, ರಾಘವೇಂದ್ರ, ಕುಮಾರ, ರಾಜೇಶ್, ಬಾಗೋಡಿಸ್ವಾಮಿ ಉಪಸ್ಥಿತರಿದ್ದರು.
