CHITRADURGA NEWS | 22 JUNE 2025
ಚಿತ್ರದುರ್ಗ: ಭಾನುವಾರ ಸಂಜೆ ವೇಳೆಗೆ ಬೀಸಿದ ಜೋರಾದ ಗಾಳಿಗೆ ಟವರ್ ಮನೆಗಳ ಮೇಲೆ ಬಿದ್ದಿದ್ದು, ಮನೆಗಳಿಗೆ ಹಾನಿಯಾಗಿದೆ.
ಕೆಳಗೋಟೆಯ ಸುನೀತಾ ನರ್ಸಿಂಗ್ ಹೋಂ ಬಳಿ ಮರ್ಚೆಂಟ್ ಬ್ಯಾಂಕ್ ಬಳಿ ಕಟ್ಟಡದ ಮೇಲ್ಛಾವಣಿ ಮೇಲೆ ಸ್ಥಾಪಿಸಿದ್ದ ಜಿಪಿಎಸ್ ಟವರ್ ಗಾಳಿಯ ರಭಸಕ್ಕೆ ಪಕ್ಕದಲ್ಲಿದ್ದ ಮಾಯಪ್ಪ ಎಂಬುವವರ ಮನೆ ಮೇಲೆ ಬಿದ್ದಿದೆ.
Also Read: ಗರ್ಭಪಾತದ ನಂತರ ಬೇಗನೆ ಚೇತರಿಸಿಕೊಳ್ಳಲು ಈ ಸಲಹೆ ಅನುಸರಿಸಿ
ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಆದರೆ, ಮನೆಯ ಶೀಟು ಹಾಗೂ ಇತರೆ ಭಾಗಗಳಿಗೆ ಹಾನಿಯಾಗಿದೆ.
ಮರ್ಚೆಂಟ್ ಬ್ಯಾಂಕಿನ ಜಿಪಿಎಸ್ ಟವರ್ ಇದಾಗಿದ್ದು, ಘಟನಾ ಸ್ಥಳಕ್ಕೆ ಮರ್ಚೆಂಟ್ ಬ್ಯಾಂಕಿನ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
