Connect with us

    ಇಂದಿನ ಯುವ ಪೀಳಿಗೆ ಕಾಡುತ್ತಿದೆ ದಶಕಗಳ ಹಿಂದಿನ ಭ್ರೂಣಹತ್ಯೆ ಶಾಪ | ಶಾಂತವೀರ ಶ್ರೀ

    ಹೊಸದುರ್ಗ

    ಇಂದಿನ ಯುವ ಪೀಳಿಗೆ ಕಾಡುತ್ತಿದೆ ದಶಕಗಳ ಹಿಂದಿನ ಭ್ರೂಣಹತ್ಯೆ ಶಾಪ | ಶಾಂತವೀರ ಶ್ರೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 JANUARY 2025

    ಹೊಸದುರ್ಗ: ಕಳೆದ ಮೂರು ನಾಲ್ಕು ದಶಕಗಳಿಂದ ಹೆಣ್ಣು ಭ್ರೂಣ ಹತ್ಯೆ ಮಾಡಿದ ಪಾಪವನ್ನು ಹೆಣ್ಣಿನ ಶಾಪವನ್ನು ಇಂದಿನ ಯುವಪೀಳಿಗೆ ಅನುಭವಿಸುವಂತಾಗಿದೆ ಎಂದು ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಹೇಳಿದರು.

    Also Read: ರ್ಯಾಂಕ್ ಪಡೆದ ಎಸ್‍ಜೆಎಂ ಕಾಲೇಜು ವಿದ್ಯಾರ್ಥಿನಿಯರು

    ಅವರು ಹೊಸದುರ್ಗ ಪಟ್ಟಣದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಕುಂಚಶ್ರೀ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ,

    ಕಳೆದ ಎರಡು ಮೂರು ದಶಕಗಳಿಂದ ಮಹಿಳೆಯನ್ನು ಅತ್ಯಂತ ನಿಕೃಷ್ಟವಾಗಿ ಹೆಣ್ಣು ಕನಿಷ್ಠ ಹೆಣ್ಣೆಂದರೆ ಖರ್ಚು ಹೆಣ್ಣೆಂದರೆ ಕಷ್ಟ ಎಂದು ಉದಾಸೀನತೆಯಿಂದ ಕಂಡ ಸಮಾಜ ಹಾಗೂ ಭ್ರೂಣ ಹತ್ಯೆ ಮಾಡಿದ ಪಾಪದ ಫಲ ಇಂದು ವಧು ಇಲ್ಲದೆ ಅಲೆದಾಡುವಂಥಾಗಿದೆ.

    ಪ್ರತಿ ಹಳ್ಳಿಯಲ್ಲಿ 35 ರಿಂದ 40 ವರ್ಷ ದಾಟಿದ ನೂರಾರು ಹುಡುಗರು ವಧುವಿಗಾಗಿ ಪರದಾಡುತ್ತಿದ್ದಾರೆ, ರಾಜ್ಯ ಅಂತರಾಜ್ಯಕ್ಕೆ ಹೋಗಿ ಮಧ್ಯವರ್ತಿಗೆ ಲಕ್ಷಾಂತರ ಹಣ ಕೊಟ್ಟು ಹೆಣ್ಣನ್ನು ತಂದು ಮದುವೆಯಾಗುತ್ತಿರುವುದು ಅತ್ಯಂತ ಆಶ್ಚರ್ಯಕರವಾಗಿದೆ.

    ದೂರದ ಗುಲ್ಬರ್ಗ, ರಾಯಚೂರು, ಬೀದರ್ ಕಡೆಗೆ ನಮ್ಮ ಜಿಲ್ಲೆಯ ಜನರು ಹೋಗಿ ವಧುವನ್ನು ಹುಡುಕುತ್ತಿರುವುದು ಮಾಮೂಲಿಯಾಗಿದೆ, ಗೊತ್ತು ಪರಿಚಯವಿಲ್ಲದ ಸಂಬಂಧಗಳಿಂದ ಅನೇಕ ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ.

    Also Read: ಹಾಸ್ಟೆಲ್ ನಿರ್ವಹಣೆಗೆ ಲೋಕಾಯುಕ್ತರ ಮೆಚ್ಚುಗೆ | ಲೈಬ್ರರಿ ತೆರೆಯಲು ಸಲಹೆ

    ಮದುವೆಯಾಗಿ ಮೂರು ತಿಂಗಳು, ಆರು ತಿಂಗಳಿಗೆ ತವರು ಮನೆಗೆ ಹೋದ ವಧು ಗಂಡನ ಮನೆಗೆ ಮತ್ತೆ ಬಾರದೆ ಆಸ್ತಿಯಲ್ಲಿ ಪಾಲು ಕೇಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅನೇಕ ಪಂಚಾಯತಿಗಳನ್ನು ಶ್ರೀಮಠದಲ್ಲೇ ಬಗೆಹರಿಸಿದ್ದೇವೆ ಹಾಗಾಗಿ ಹೆಣ್ಣನ್ನು ಗೌರವಿತವಾಗಿ ನಡೆಸಿಕೊಂಡು ಮತ್ತು ಹೆಣ್ಣು ಕೂಡ ಕೊಟ್ಟ ಮನೆಗೆ ಹೆತ್ತ ಮನೆಗೆ ಎರಡು ಮನೆಗಳ ಬೆಳಗಿಸುವ ಹಾಗೂ ಸೌಹಾರ್ದ ಸಹಬಾಳ್ವೆ ನಡೆಸುವ ಮನೋಭಾವವನ್ನು ಬೆಳೆಸಿಕೊಂಡು ಕುಟುಂಬದ ಹಿತರಕ್ಷಣೆಗಾಗಿ ಕಂಕಣಬದ್ಧವಾಗಿ ದುಡಿಯಬೇಕಿದೆ ಎಂದು ತಿಳಿಸಿದರು.

    ಹೆಣ್ಣು ಜನಿಸಿದರೆ ಶಾಪ ಎಂದು ಜರಿಯುತ್ತಿದ್ದ ಜನರು ಇಂದು ಹೆಣ್ಣು ಜನಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ, ಹೆಣ್ಣಿಗೆ ತಂದೆ ತಾಯಿ ಬಂಧು ಬಳಗ ತವರು ಮನೆ ಎಂಬ ಅಭಿಮಾನ ಹೆಚ್ಚಾಗಿರುವ ಕಾರಣ, ಹೆಣ್ಣೇ ಸಮಾಜದ ಕುಟುಂಬದ ಕಣ್ಣಾಗಿರುವುದು ವಾಸ್ತವಂಶ.

    ಇನ್ನು ಮುಂದಾದರು ಹೆಣ್ಣನ್ನು ಗೌರವದಿಂದ ಕಾಣುವ ನಡೆಸಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ 1000 ಗಂಡಿಗೆ. 700 ಹೆಣ್ಣು ಇರುವುದರಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ, ಸಮಾನಾಂತರವಾದ ಸಂಖ್ಯೆಯಲ್ಲಿ ಪುರುಷ ಮಹಿಳೆಯರು ಇದ್ದಲ್ಲಿ ವಧು ವರರ ಪರದಾಟ ಇಲ್ಲದಂತಾಗುತ್ತದೆ.

    ಕಾಲಜ್ಞಾನಿಗಳಾದ ಸಮಾಜವನ್ನು ತುಂಬಾ ಹತ್ತಿರದಿಂದ ಕಂಡಂತ ಬಸವೇಶ್ವರರು 12ನೇ ಶತಮಾನದಲ್ಲಿ ಹೆಣ್ಣನ್ನು ಪೂಜ್ಯ ಭಾವದಿಂದ ಗೌರವಿಸಿ ಸಮಾನಾಂತರವಾಗಿ ಗುರುತಿಸಿ ಅವಕಾಶಗಳನ್ನು ನೀಡಿ ಶ್ರೀ ಶಕ್ತಿ ಸಮಾಜದ ಶಕ್ತಿ ಎಂದು ಸಾರಿದ ಮಹಾತ್ಮರು, ಆದರೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವುಗಳು ಶೇ. 33 ರಷ್ಟು ಮೀಸಲಾತಿಯನ್ನು ನೀಡಲು ಕಳೆದ 75 ವರ್ಷಗಳಿಂದ ಮೀನಾ ಮೇಷ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ.

    Also Read: RTO ಕಚೇರಿಯಲ್ಲಿ ಕಡತ ನಿರ್ವಹಣೆಯ ವೈಪಲ್ಯ | ಸುಮೋಟೊ ಕೇಸ್

    ಹೆಣ್ಣಿಗೆ ಅಧಿಕಾರ ಸಿಕ್ಕರು ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಎಲ್ಲಾ ಅಧಿಕಾರವನ್ನು ಪುರುಷಣೆ ಅನುಭವಿಸುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ.

    ವಿಧಾನಸಭೆ ಸಂಸತ್ತು ಹಾಗೂ ಶಾಸಕಾಂಗದಲ್ಲಿ ಹೆಣ್ಣಿಗೆ ಶೇ.33 ರಷ್ಟು ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಿ, ಮಹಿಳಾ ಸಬಲೀಕರಣಕ್ಕೆ ಸರಕಾರಗಳು, ಸಂಘ-ಸಂಸ್ಥೆಗಳು, ಮಠಮಾನ್ಯಗಳು ಹೆಚ್ಚು ಆದ್ಯತೆಯನ್ನು ನೀಡಬೇಕಿದೆ. ಪ್ರತಿ ಮನೆಯಲ್ಲಿಯೂ ಒಂದು ಹೆಣ್ಣು ಹುಟ್ಟಲಿ ಎಂದು ಪ್ರಾರ್ಥಿಸಬೇಕಿದೆ.

    ವಯಸ್ಸಾದ ನಂತರ ಹೆಣ್ಣು ಸಮಾಜದ ಕಣ್ಣಾಗಿ ತಂದೆ ತಾಯಿಗಳ, ಅತ್ತೆ ಮಾವಂದಿರ, ಅಣ್ಣ-ತಮ್ಮಂದಿರ, ಗಂಡ, ಮಕ್ಕಳ ಪೋಷಣೆಯನ್ನು ಮಾತೃ ಹೃದಯದಿಂದ ಮಾಡುತ್ತಿರುವುದನ್ನು ನಾವೆಲ್ಲ ಹತ್ತಿರದಿಂದ ನೋಡಿದ್ದೇವೆ. ಹಾಗಾಗಿ ಹೆಣ್ಣನ್ನು ಗೌರವಿಸುವಬೇಕು ಎಂದು ಆಶೀರ್ವಚನ ನೀಡಿದರು

    ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘವು 2001 ರಿಂದ ಹೊಸದುರ್ಗದಲ್ಲಿ ಶ್ರೀಮಠದ ಅನೇಕ ಕಾರ್ಯಕ್ರಮಗಳ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ನಮ್ಮ ದೀಕ್ಷಾ ಮಹೋತ್ಸವ, ಪಟ್ಟಾಧಿಕಾರ ಮಹೋತ್ಸವ, ಜನ್ಮದಿನೋತ್ಸವ, ಸಂಗಮೇಶ್ವರ ಜಯಂತಿ, ಸುಜ್ಞಾನ ಸಂಗಮ ಸೇರಿದಂತ್ವ ಇನ್ನೂ ಅನೇಕ ಮಠದ ಕಾರ್ಯಕ್ರಮದ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.

    Also Read: ಸರಗಳ್ಳನನ್ನು ಬಂಧಿಸಿದ ಚಳ್ಳಕೆರೆ ಪೊಲೀಸರು | 7 ಸರ, 2 ಬೈಕ್ ವಶಕ್ಕೆ

    ಕುಂಚ ಶ್ರೀ ಸಂಗಮೇಶ್ವರ ಮಹಿಳಾ ಸಂಘದ ಪ್ರಭಕ್ಕ, ವಂಜಾಕ್ಷಮ್ಮ, ಪ್ರಿಯಾ ಲೋಕೇಶ್, ಜಾನಕಮ್ಮ, ಮಮತಾ ನಟರಾಜ್, ಅಂಬಿಕಾ.ಎಲ್, ಜೆಯಣ್ಣ, ಚಂದ್ರಿಕಾ ಮಹೇಶ್ವರಪ್ಪ, ಮಂಜುಳಾ ರಮೇಶ್, ಶಾಂತಮ್ಮ ಕೆಂಚಪ್ಪ, ಶೀಲಾ ರಾಜಶೇಖರಪ್ಪ, ರಂಜಿತಾ ವೀರಭದ್ರಪ್ಪ, ಸವಿತಾ ರಾಮಚಂದ್ರಪ್ಪ ಸೇರಿದಂತೆ ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು, ಶ್ರೀಮಠದ ಮಹಿಳಾ ಭಕ್ತರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top