ಮುಖ್ಯ ಸುದ್ದಿ
ಮಂಗಳವಾರ ಆಡುಮಲ್ಲೇಶ್ವರ ಮೃಗಾಲಯಕ್ಕೆ ರಜೆ ಇಲ್ಲ !

CHITRADURGA NEWS | 30 DECEMBER 2024
ಚಿತ್ರದುರ್ಗ: ನಗರದ ಪಕ್ಕದಲ್ಲೇ ಇರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಈಗ ಆಧುನಿಕರಣಗೊಂಡಿದ್ದು, ಸಾಕಷ್ಟು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಅಭಿವೃದ್ಧಿಗೆ ತೆರೆದುಕೊಂಡಿರುವ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ಇದನ್ನೂ ಓದಿ: 30 TMC ದಾಟಿದ ವಾಣಿವಿಲಾಸ ಸಾಗರ ಜಲಾಶಯ
ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಪ್ರತಿ ಮಂಗಳವಾರ ರಜೆ ಇರುತ್ತದೆ. ಆದರೆ, ಡಿಸೆಂಬರ್ 31 ಮಂಗಳವಾರ ಮಾತ್ರ ರಜೆ ರದ್ದು ಮಾಡಲಾಗಿದೆ.
ಇಲ್ಲಿದೆ ನೋಡಿ ಆಡುಮಲ್ಲೇಶ್ವರ ಕಿರುಮೃಗಾಲಯದ ವೀಡಿಯೋ..
ಕಾರಣ, ಹೊಸ ವರ್ಷಕ್ಕೆ ಮುನ್ನಾ ದಿನವೇ ಅಂದರೆ ವರ್ಷಾಂತ್ಯದ (Year End) ದಿನ ಆಗಸ್ಟ್ 31 ಬಂದಿದ್ದು, ಸಾಕಷ್ಟು ಪ್ರವಾಸಿಗರು ಬಿಡುವು ಮಾಡಿಕೊಂಡು ವರ್ಷದ ಕೊನೆಯ ದಿನವನ್ನು ಸಂತೋಷವಾಗಿ ಕಳೆಯಲು ಆಡುಮಲ್ಲೇಶ್ವರ ಮೃಗಾಲಯ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿಗೆ ಬರುತ್ತಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಡುಮಲ್ಲೇಶ್ವರದ ರಜಾ ದಿನವನ್ನು ಈ ವಾರ ರದ್ದು ಮಾಡಲಾಗಿದೆ.
ಪ್ರವಾಸಿಗರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಆಡು ಮಲ್ಲೇಶ್ವರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.
