
CHITRADURGA NEWS | 17 AUGUST 2024
ಚಿತ್ರದುರ್ಗ: ವರಮಹಾಲಕ್ಷ್ಮೀ ಹಬ್ಬದ ದಿನವೇ ಖತರ್‍ನಾಕ್ ಕಳ್ಳರ ಗ್ಯಾಂಗ್ ಲಕ್ಷ್ಮೀ ಕಳ್ಳತನ (Theft) ಮಾಡಿರುವ ಘಟನೆ ಆಗಸ್ಟ್ 16ರಂದು ಚಿತ್ರದುರ್ಗ ನಗರ ಹಾಗೂ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ಅರೇಹಳ್ಳಿ ರೈಲ್ವೇ ಗೇಟ್ ಬಳಿಯಿರುವ ವಿನಾಯಕ ಟ್ರೇಡರ್ಸ್ ಎಂಬ ಅಡಿಕೆ ಗೋಡಾನ್ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟ್ಟರ್‍ನಿಂದ ತುಂಡು ಮಾಡಿ, ಒಳಗಿದ್ದ ಲಾಕರ್ ಕೂಡಾ ಗ್ಯಾಸ್ ಕಟರ್‍ನಿಂದ ತೆಗೆದು ಅಲ್ಲಿದ್ದ 14 ಲಕ್ಷ ಹಾಗೂ ಕ್ಯಾಶ್ ಕೌಂಟರ್‍ನಲ್ಲಿದ್ದ 40 ಸಾವಿರ ಕಳ್ಳತನ ಮಾಡಲಾಗಿದೆ.
ಇದನ್ನೂ ಓದಿ: ಮತ್ತೋಡುನಲ್ಲಿ 49.6 ಮಿ.ಮೀ ಮಳೆ | ಜಿಲ್ಲೆಯಲ್ಲಿ 21 ಮನೆ ಹಾನಿ
ಅರೇಹಳ್ಳಿಯ ಸಂಪತ್ ಎಂಬುವವರಿಗೆ ಸೇರಿದ ಅಡಿಕೆಯ ಗೋದಾಮಿನಿಂದ ಆಗಸ್ಟ್ 15ರ ರಾತ್ರಿ ಕಳ್ಳತನ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‍ಪಿ ದಿನಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ನುಗ್ಗಿ 27.73 ಲಕ್ಷದ ನಗದು ಚಿನ್ನಾಭರಣ ದರೋಡೆ:
ಚಿತ್ರದುರ್ಗದ ಬಾಪೂಜಿ ಬಡಾವಣೆಯ ರಾಜು ಎಂಬುವವರಿಗೆ ಸೇರಿದ ಮನೆಗೆ ನುಗ್ಗಿರುವ ಕಳ್ಳರು ರಾತ್ರೋರಾತ್ರಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಕೋಟಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರ ಗ್ಯಾಂಗ್, ಬಾಗಿಲು ಮುರಿದು 21.95 ಲಕ್ಷ ರೂ. ನಗದು ಹಾಗೂ 5.78 ಲಕ್ಷ ರೂ. ಮೌಲ್ಯದ ಚುನ್ನಾಭರಣ ಕಳ್ಳತನ ಮಾಡಿದೆ.
ಕಳ್ಳರ ಗ್ಯಾಂಗ್ ಮನೆಯಲ್ಲಿದ್ದ ಸಿ.ಸಿ.ಟಿವಿ ಕ್ಯಾಮರಾದ ಡಿವಿಆರ್ ಕೂಡಾ ತೆಗೆದುಕೊಂಡು ಹೋಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ನಗರಠಾಣೆ ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲಿಸಿನ ದೂರು ದಾಖಲಿಸಿಕೊಂಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
