
CHITRADURGA NEWS | 20 MARCH 2024
ಚಳ್ಳಕೆರೆ: ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಮಣ್ಣು ಸಾಗಿಸುವಾಗ ಅವಘಡ ನಡೆದಿದ್ದು, ಟ್ರ್ಯಾಕ್ಟರ್‍ನ ಟ್ರೈಲರ್ ಕೆಳಗೆ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ.
ರಾಮಜೋಗಿಹಳ್ಳಿ ಮೂಲದ ಹಾಲಿ ದೇವರೆಡ್ಡಿಹಳ್ಳಿಯ 26 ವರ್ಷದ ನಾಗೇಶ್ ಮೃತ ಟ್ರ್ಯಾಕ್ಟರ್ ಚಾಲಕ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್‍ಗೆ ಜೆಎಂಎಫ್‍ಸಿ ನ್ಯಾಯಾಲಯದಿಂದ ಜಾಮೀನು
ಬುಧವಾರ ರಾತ್ರಿ 12.15ರ ವೇಳೆಯಲ್ಲಿ ರಾಮಜೋಗಿಹಳ್ಳಿಯ ಚಂದ್ರಹಾಸ ಎನ್ನುವವರ ಜಮೀನಿನ ಬದುವಿನಲ್ಲಿದ್ದ ಮಣ್ಣನ್ನು ಲೋಡ್ ಮಾಡಿಕೊಂಡು ಅನ್‍ಲೋಡ್ ಮಾಡಲು ಜೆಸಿಬಿ ಬಳಿ ಇಳಿಜಾರಿನಲ್ಲಿ ನಿಲ್ಲಿಸಿದ್ದಾರೆ.
ಈ ವೇಳೆ ಟ್ರ್ಯಾಕ್ಟರ್‍ನಿಂದ ಇಳಿದು ಪಕ್ಕದಲ್ಲಿದ್ದ ಜೆಡಿಬಿ ಬಳಿಗೆ ಸಾಗುವಾಗ ಟ್ರೈಲರ್ ಏಕಾಏಕಿ ಮುಂದಕ್ಕೆ ಬಂದಿದೆ. ಈ ವೇಳೆ ನಾಗೇಶ ಕೆಳಗೆ ಬಿದ್ದಿದ್ದು, ತಕ್ಷಣ ರಕ್ಷಿಸಿ ಬಸವೇಶ್ವರ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಸಬ್ ಇನ್‍ಸ್‍ಪೆಕ್ಟರ್ ಹುದ್ದೆಗೆ ಅರ್ಜಿ
ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
