
ಚಿತ್ರದುರ್ಗ ನ್ಯೂಸ್.ಕಾಂ: ಕಾರಿನಲ್ಲಿದ್ದ ಹತ್ತು ಲಕ್ಷ ರೂ.ಗಳನ್ನು ಬ್ಯಾಂಕಿನ ಮುಂದೆಯೇ, ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು ಕಳ್ಳತನ ನಡೆಸಿರುವ ಸಿ.ಸಿ.ಟಿವಿ. ವೀಡಿಯೋ ಪೊಲೀಸರಿಗೆ ಲಭ್ಯವಾಗಿದೆ.
ಹೊಸದುರ್ಗ ತಾಲೂಕು ಲಕ್ಕಿಹಳ್ಳಿ ಗ್ರಾಮದ ರೈತ ಮುದ್ದಪ್ಪ ಎಂಬುವವರು ಈ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದು ಕಾರಿನಲ್ಲಿಟ್ಟು, ಅಂಗಡಿಗೆ ಹೋಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ | ಮೂರು ದಿನ ಮಳೆ ಸಾಧ್ಯತೆ
ಈ ಸಮಯಕ್ಕೆ ಹೊಂಚು ಹಾಕಿದ್ದ ಕಳ್ಳರು ಡ್ರೈವರ್ ಬದಿಯ ಸೀಟಿನ ಕಡೆಯಿಂದ ಕಾರಿನೊಳಗೆ ಬಗ್ಗಿ ಪಕ್ಕದ ಸೀಟಿನಲ್ಲಿದ್ದ ಹಣದ ಬ್ಯಾಗನ್ನು ಕದ್ದು ಮತ್ತೊಂದು ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಹಣ ಕಳುವು ಮಾಡುವ ಕಳ್ಳ ಒಂದು ಬದಿಯಿಂದ ಬಂದು ಕಾರಿನ ಬಳಿ ನಿಂತರೆ ಮತ್ತೊಂದು ಬದಿಯಿಂದ ಒಂದು ಬೈಕಿನಲ್ಲಿ ಮತ್ತೊಬ್ಬ ಬಂದು ನಿಲ್ಲುತ್ತಾನೆ. ಕೆಲ ಕ್ಷಣದಲ್ಲೇ ಕಾರಿನೊಳಗೆ ಬಗ್ಗೆ ಬ್ಯಾಗ್ ಎಗರಿಸಿಕೊಂಡು ಬೈಕಿನಲ್ಲಿ ವೇಗವಾಗಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕಿಗೆ ಹಣ ಬಿಡಿಸಲು ಹೋಗುವ ಗ್ರಾಹಕರು, ಹಣವನ್ನು ಬೈಕಿನ ಬ್ಯಾಕು, ಕಾರುಗಳಲ್ಲಿಡುವ ಮುನ್ನಾ ಹತ್ತು ಬಾರಿ ಯೋಚನೆ ಮಾಡಬೇಕಾದ ಅವಶ್ಯಕತೆ ಈ ಘಟನೆಯಿಂದ ಕಲಿಯಬೇಕಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
