ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ಹದ ಮಳೆ | ಇಳೆಗೆ ಜೀವಕಳೆ ತುಂಬಿದ ಮಳೆರಾಯ

CHITRADURG NEWS | 22 APRIL 2024
ಚಿತ್ರದುರ್ಗ: ವರ್ಷದ ಮೊದಲ ಮಳೆ ಅಶ್ವಿನಿ ಆರ್ಭಟ ಶುರುವಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿಂದು ಉತ್ತಮ ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲದಿಂದ ಚಿತ್ರದುರ್ಗದವರೆಗೆ ಸೋಮವಾರ ಮಧ್ಯಾಹ್ನ ಹದವಾದ ಮಳೆ ಸುರಿದಿದೆ.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗೋದು ಸೂರ್ಯ, ಚಂದ್ರರಷ್ಟೇ ಸತ್ಯ | ಬಿ.ಎಸ್.ಯಡಿಯೂರಪ್ಪ
ಕೃಷಿ ಚಟುವಟಿಕೆಗಳಿಗೆ ಭೂಮಿ ಹಸನು ಮಾಡಿಕೊಂಡಿದ್ದ ರೈತರಿಗೆ ಮಳೆ ಸಂತಸ ತಂದಿದೆ. ಅಡಿಕೆ ಮತ್ತಿತರೆ ತೋಟಗಾರಿಕೆ ಬೆಳೆಗಾರರು ಮಳೆ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಐಮಂಗಲ ಕಡೆಯಿಂದ ಚಿತ್ರದುರ್ಗಕ್ಕೆ ಬರುವಾಗ ಮುಂದಿನ ವಾಹನ ಕಾಣದಷ್ಟು ಗಾಢವಾಗಿ ಮಳೆ ಹನಿಗಳು ಬೀಳುತ್ತಿದ್ದವು ಎಂದು ವಾಹನ ಸವಾರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ರೋಡ್ ಶೋ
ಬರದ ಬೇಗೆಗೆ ಬೆಂದು ಹೋಗಿದ್ದ ಚಿತ್ರದುರ್ಗ ಜಿಲ್ಲೆಗೆ ಮಳೆಯ ವಾತಾವರಣ ನೆಮ್ಮದಿ ನೀಡಿದೆ.
ಅಡಿಕೆ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದ ರೈತರು ಮುಂದಿನ 10-15 ದಿನ ನಿರಾಳರಾಗಿದ್ದಾರೆ. ಮುಂದೆ ಬೇರೆ ಮಳೆಗಳು ಹದವಾಗಿ ಸುರಿದರೆ ಬರದ ದವಡೆಯಿಂದ ಪಾರಾದಂತೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
