
CHITRADURGA NEWS | 09 JUNE 2025
ಚಿತ್ರದುರ್ಗ: ಮುಂಗಾರು ಪೂರ್ವದಲ್ಲೇ ತಂಪಾಗುವಂತೆ ಸುರಿದು ರೈತರಲ್ಲಿ ಸಂತಸ ಮೂಡಿಸಿದ್ದ ಮಳೆರಾಯ ಈಗ ಮರೆಯಾಗಿದ್ದಾನೆ.
ALSO READ: ಮಕ್ಕಳಿಗೆ ಅಲೋವೆರಾ ಜ್ಯೂಸ್ ಕುಡಿಸುವುದು ಸುರಕ್ಷಿತವೇ?

ಈ ವರ್ಷ ಮುಂಗಾರು ಪೂರ್ವ ಅಂದರೆ ಮೇ ತಿಂಗಳ ಮೊದಲ ವಾರದಿಂದಲೇ ಪ್ರಾರಂಭವಾಗಿದ್ದು, ಹೊಳಲ್ಕೆರೆ ಸೇರಿದಂತೆ ಜಿಲ್ಲೆಯ ಹಲವು ತಾಲೂಕಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ.
ಈಗಾಗಲೇ ಹಲವು ರೈತರು ಹತ್ತಿ,ಮೆಕ್ಕಜೋಳ ಬಿತ್ತನೆ ಮಾಡಿದ್ದು, ಮಳೆಗೆ ಎದುರು ನೋಡುತ್ತಿದ್ದಾರೆ.
ತಾಲೂಕಿನಲ್ಲಿ ಜನವರಿಯಿಂದ ಜೂನ್ 5 ರವರೆಗೆ 143 ಮಿ,ಮೀ ಮಳೆಯಾಗಿದ್ದು, 2025-26ನೇ ಸಾಲಿನಲ್ಲಿ ಹೊಳಲ್ಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರದ 52845 ಹೆಕ್ಟರ್ ಗುರಿ ಹೊಂದಿದ್ದು, ಇದರಲ್ಲಿ ಈಗಾಗಲೇ 2478 ಹೆಕ್ಟರ್ ಬಿತ್ತನೆಯಾಗಿದೆ. ರೈತರು ಹೊಲಗಳನ್ನು ಹದ ಮಾಡಿಕೊಂಡಿದ್ದು, ಈಗ ಮಳೆಯಾದರೆ ಬಿತ್ತನೆ ಶುರುವಾಗುತ್ತದೆ. ಕೃಷಿ ಇಲಾಖೆಯಲ್ಲಿ ಅಗತ್ಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಶೇ.50 ಸಬ್ಸಿಡಿಯಲ್ಲಿ ದೊರೆಯಲಿದೆ.
–ಡಾ.ಎಸ್.ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಹೊಳಲ್ಕೆರೆ.
ಕೃತಿಕಾ, ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯೂ ಬೇಗನೇ ಆರಂಭಗೊಂಡಿವೆ.

ಮುಂಗಾರು ಮಳೆ ಉತ್ತಮ ಆರಂಭದಿಂದ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದ ವರುಣ, ಕೃಷಿ ಚಟುವಟಿಕೆ ಭರದಿಂದ ಸಾಗಿದ್ದು, ಜಮೀನು ಹದ ಮಾಡಿಕೊಂಡಿದ್ದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ, ಬಿತ್ತನೆ ಮಾಡಿ ವಾರ ಕಳೆದರೂ ಮಳೆರಾಯನ ಪತ್ತೆಯೇ ಇಲ್ಲವಾಗಿದೆ.
ALSO READ: ಎಮ್ಮೆ ಹಾಲು ಕುಡಿದರೆ ತೂಕ ಹೆಚ್ಚಾಗುತ್ತದೆಯೇ?
ಹೊಳಲ್ಕೆರೆ ತಾಲೂಕಿನ ಸುತ್ತಮುತ್ತ ಮುಂಗಾರು ಆರಂಭದಲ್ಲಿ ಅರ್ಭಟಿಸಿದ ಮಳೆಯಿಂದ ರೈತರು ಸಂತಸಗೊಂಡು ಹೊಲವನ್ನು ಹದಗೊಳಿಸಿ, ಬಿತ್ತನೆ ಮಾಡಿದ್ದಾರೆ.
ಜಮೀನು ಹದ ಮಾಡಿಕೊಂಡ ರೈತರು, ಬಿತ್ತನೆ ಮಾಡಿದ ರೈತರು ಇಬ್ಬರೂ ಮಳೆಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಇಂದಿನಿಂದ ಮಳೆ ಆರಂಭವಾಗುವ ಸೂಚನೆ ನೀಡಿದ್ದು, ರೈತರಲ್ಲಿ ತುಸು ಭರವಸೆ ಮೂಡಿಸಿದೆ.
ಹೊಳಲ್ಕೆರೆ ತಾಲೂಕಿನ ಗುಂಡೇರಿ, ಮಳೇನಹಳ್ಳಿ, ಮಳೇನಹಳ್ಳಿ ಕಾವಲು, ಬೊಮ್ಮನಕಟ್ಟೆ, ಇಡೆಹಳ್ಳಿ, ಅವಳಿಹಟ್ಟಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮೆಕ್ಕೆಜೋಳ, ಹತ್ತಿ ಬಿತ್ತನೆಯಾಗಿದೆ.
ಈ ಬಾರಿ ಮುಂಗಾರು ಮಳೆ ಅವಧಿಗಿಂತ ಮೊದಲೇ ಬಂದಿರುವುದರಿಂದ ಹೊಲವನ್ನು ಹದ ಮಾಡಿ, ಬಿತ್ತನೆ ಮಾಡಲಾಗಿದೆ. ಒಳ್ಳೆ ಮಳೆಯಾದರೆ, ಉತ್ತಮ ಬೆಳೆ ಸಿಗಲಿದೆ.
–ನಾಗರಾಜಪ್ಪ ರೈತ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
