CHITRADURGA NEWS | 09 SEPTEMBER 2025
ಚಿತ್ರದುರ್ಗ: ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಆಚರಣೆ ಮಾಡುತ್ತಿರುವ ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ನಗರದ ನವದುರ್ಗೆಯರ ಅದ್ದೂರಿ ಮೆರವಣಿಗೆ ಹಾಗೂ ಗಣಪತಿ ಪೆಂಡಾಲ್ ಭೇಟಿ ವಿಜೃಂಭಣೆಯಿಂದ ಜರುಗಿತು.

ಇದನ್ನೂ ಓದಿ: ಅಡಿಕೆ ಧಾರಣೆ | ಸೆಪ್ಟಂಬರ್ 09 | ಯಾವ ಅಡಿಕೆಗೆ ಎಷ್ಟು ರೇಟ್
ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಗೆ ಆಗಮಿಸಿದ ಶಕ್ತಿ ದೇವತೆಯರು ಅಲ್ಲಿಂದ ಮಹಾಮಂಗಳಾರತಿ ನಂತರ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದರು.
ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿ ಯಲ್ಲಮ್ಮ ದೇವಿಯರ ಉತ್ಸವ ಮೂರ್ತಿಗಳು ನೇತೃತ್ವ ವಹಿಸಿದ್ದವು. ನಗರ ದೇವತೆಗಳಾದ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಬನಶಂಕರಿ ದೇವಿ, ಗೋಪಾಲಪುರ ರಸ್ತೆಯ ದುರ್ಗಾ ದೇವಿ, ಮಲೆನಾಡು ಚೌಡೇಶ್ವರಿ, ಸಿಗಂದೂರು ಚೌಡೇಶ್ವರಿ, ಕಣಿವೆ ಮಾರಮ್ಮ, ಬುಡ್ಡಾಂಬಿಕಾ, ಕನ್ಯಾಕಾ ಪರಮೇಶ್ವರಿ, ಆದಿಶಕ್ತಿ ಮಾರಿಕಾಂಬ, ಹಟ್ಟಿ ಮಾರಮ್ಮ, ಚಾಕಮ್ಮ, ಧರ್ಮ ದೇವತೆ ಸೇರಿ 15 ದೇವಿಯರ ಉತ್ಸವ ಮೂರ್ತಿಗಳು ನಗರದಲ್ಲಿ ಸಾಗಿದವು.
ಹೊಳಲ್ಕೆರೆ ರಸ್ತೆ, ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ, ಮದಕರಿನಾಯಕ ವೃತ್ತ, ಬಿ.ಡಿ.ರಸ್ತೆ ಮಾರ್ಗವಾಗಿ ಸಂಚರಿಸಿ ಮಹಾಗಣವನನ್ನು ಪ್ರತಿಷ್ಠಾಪಿಸಿರುವ ಜೈನ್ ಧಾಮ ಪ್ರವೇಶಿಸಿದ ದೇವತೆಗಳ ಮೂರ್ತಿಗೆ ಅದ್ಧೂರಿ ಸ್ವಾಗತ ದೊರೆಯಿತು. ಈ ಕ್ಷಣವನ್ನು ಸಾವಿರಾರು ಭಕ್ತರು ಕಣ್ಣುಂಬಿಕೊಂಡರು.
ಇದನ್ನೂ ಓದಿ: ಶರಣ್ ಪಂಪ್ ವೆಲ್, ಡಿಜೆ ನಿರ್ಬಂಧ ವಿರೋಧಿಸಿ VHP ಪ್ರತಿಭಟನೆ
ಹಿಂದೂ ಮಹಾಗಣಪತಿ ಮಂಟಪದಲ್ಲಿ ಶಕ್ತಿ ದೇವತೆಯರಿಗೆ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
