CHITRADURGA NEWS | 14 APRIL 2025
ಚಿತ್ರದುರ್ಗ: ಡಾ.ಬಿ.ಆರ್ ಅಂಬೇಡ್ಕರ್ ಅವರು ಭಾರತದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಘನತೆ ಮತ್ತು ಹಕ್ಕುಗಳಿಗಾಗಿ ಸುಮಾರು ನಾಲ್ಕು ದಶಕಗಳ ಕಾಲ ಹೋರಾಡಿದ ಮಹಾನ್ ನಾಯಕ, ಅವರ ಚಿಂತನೆಗಳು ಜಗತ್ತಿನ ಮಾನವ ಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾದಂತಹವುಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
Also Read: ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ನಿಧನ

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರು 134ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ಅವರು,
ಅಂಬೇಡ್ಕರ್ ರವರು ಜೀವನದಲ್ಲಿ ತಮೆಗೆ ಆದ ಅವಮಾನ ಬೇರೆ ಯಾರಿಗೂ ಆಗಬಾರದೆಂದು ಸಂವಿಧಾನದಲ್ಲಿ ಎಲ್ಲರಿಗೂ ಸಹಾ ಸಮಾನವಾದ ಅವಕಾಶವನ್ನು ನೀಡಿದ್ದಾರೆ. ಇದರಿಂದಾಗಿ ಭಾರತದಲ್ಲಿ ಬಲಿಷ್ಠವಾದ ಸಂವಿಧಾನ ಇದೆ. ಇದರ ಮೂಲಕ ಎಲ್ಲರಿಗೂ ನ್ಯಾಯ ಸಿಗುವಂತ ವಾತಾವರಣ ಸೃಷ್ಟಿಯಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಕಾರ್ಯದರ್ಶೀ ಮೋಹನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿದರು.
Also Read: ನಿಮ್ಮ ಮಗುವಿಗೆ ಆಟಿಸಂ ಸಮಸ್ಯೆ ಇದೇ ಎಂಬುದನ್ನು ಈ ಲಕ್ಷಣಗಳ ಮೂಲಕ ತಿಳಿದುಕೊಳ್ಳಿ
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಶ್ಯಾಮಲ ಶಿವಪ್ರಕಾಶ್, ಕೆ.ಮಲ್ಲಿಕಾರ್ಜನ್, ಸೌಭಾಗ್ಯ ಬಸವರಾಜನ್, ಲೋಕೇಶ್ ನಾಗರಾಜ್, ವೆಂಕಟೇಶ್ ಯಾದವ್, ನಂದಿನಾಗರಾಜ್, ಪರಶುರಾಮ್, ಪಾಂಡು, ಶಿವಣ್ಣಚಾರ್, ಬಸಮ್ಮ, ಶಾಂತಮ್ಮ, ಗಾಯತ್ರಿ, ಅರುಣ್ ಕುಮಾರಿ, ಕಿರಣ, ಲಿಂಗರಾಜು, ಛಲವಾದಿ ತಿಪ್ಪೇಸ್ವಾಮಿ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
