ಕ್ರೈಂ ಸುದ್ದಿ
ಡಿವೈಡರ್‍ಗೆ ಅಪ್ಪಳಿಸಿ ಕಾರು ಪಲ್ಟಿ | ಸ್ಥಳದಲ್ಲೇ ಇಬ್ಬರ ದುರ್ಮರಣ

CHITRADUGRA NEWS | 28 MAY 2024
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ಹಿರಿಯೂರು ತಾಲೂಕು ಕಳವಿಬಾಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ತುಮಕೂರು ಮೂಲದ ಅಪಘಾತದಲ್ಲಿ ವಿಶಾಲಾಕ್ಷಮ್ಮ(75) ಹಾಗೂ ನಾಗರಾಜ ಶೆಟ್ಟಿ(55) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್ ಗಳಿಗೆ ಸಿಸಿ ಕ್ಯಾಮರಾ ಕಡ್ಡಾಯ | 24 ಗಂಟೆಯೂ ಸೆಕ್ಯೂರಿಟಿ ನೇಮಿಸಿ | ಜಿಪಂ ಸಿಇಓ ಸೂಚನೆ
ಘಟನೆಯಲ್ಲಿ ನಾಗರಾಜ ಶೆಟ್ಟಿ ಅವರ ಮಗಳು ಬಿಂಧು, ಪತ್ನಿ ಭಾಗ್ಯಲಕ್ಷ್ಮೀ ಹಾಗೂ ಸಂಬಂಧಿ ಗೀತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಹಿರಿಯೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಗರಾಜ ಶೆಟ್ಟಿ, ಮಗಳು ಬಿಂಧು ಅವರನ್ನು ಬಳ್ಳಾರಿಗೆ ಶಾಲೆಗೆ ಬಿಟ್ಟು ಬರಲು ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಇದನ್ನೂ ಓದಿ: ನನ್ನ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ | ಅವರು ಬಂದು ಕಟ್ ಮಾಡ್ತಾರಾ | ಮಧು ಬಂಗಾರಪ್ಪ ಗರಂ
ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಿಎಸ್‍ಐ ಮಾರುತಿ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
