Connect with us

    ರಂಗಭೂಮಿಯಲ್ಲಿ ಅಭಿನಯಿಸುವ ಆಸಕ್ತಿ ಇದೆಯಾ | ಹಾಗಾದರೆ ಇಲ್ಲಿದೆ ಗುಡ್‍ನ್ಯೂಸ್

    ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ

    ಹೊಸದುರ್ಗ

    ರಂಗಭೂಮಿಯಲ್ಲಿ ಅಭಿನಯಿಸುವ ಆಸಕ್ತಿ ಇದೆಯಾ | ಹಾಗಾದರೆ ಇಲ್ಲಿದೆ ಗುಡ್‍ನ್ಯೂಸ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 MAY 2024

    ಹೊಸದುರ್ಗ: ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಹೊಸದುರ್ಗ ತಾಲೂಕು ಸಾಣೇಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯು 2024-25ನೇ ಸಾಲಿನ ರಂಗಶಿಕ್ಷಣಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ರಂಗಶಾಲೆ ಪ್ರವೇಶಕ್ಕೆ ಕನಿಷ್ಟ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು ಮತ್ತು ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದದ್ದು ಅಗತ್ಯ.

    ಇದನ್ನೂ ಓದಿ: ಡಿವೈಡರ್‍ಗೆ ಅಪ್ಪಳಿಸಿ ಕಾರು ಪಲ್ಟಿ | ಸ್ಥಳದಲ್ಲೇ ಇಬ್ಬರ ದುರ್ಮರಣ

    ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ-ವಸತಿ ವ್ಯವಸ್ಥೆ ಇರುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರಿಂದ ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ.

    ಗ್ರಂಥಭಂಡಾರ ಹಾಗೂ ದೃಶ್ಯ, ಶ್ರವ್ಯ, ಪರಿಕರಗಳ ಅನುಕೂಲತೆ ಇದೆ. ರಂಗಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ, ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ.

    ಇದನ್ನೂ ಓದಿ: ನನ್ನ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ | ಅವರು ಬಂದು ಕಟ್ ಮಾಡ್ತಾರಾ | ಮಧು ಬಂಗಾರಪ್ಪ ಗರಂ

    ಅರ್ಜಿ ಸಲ್ಲಿಸುವ ವಿಳಾಸ: ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-577515, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

    ಈ ವಿಳಾಸಕ್ಕೆ ಬರೆದು ಪ್ರವೇಶ ಅರ್ಜಿಗಳನ್ನು ತರಿಸಿಕೊಳ್ಳಬಹುದು ಅಥವಾ ರಂಗಶಾಲೆಯ ವೆಬ್‍ಸೈಟ್ www.theatreschoolsanehlli.org ನಲ್ಲಿ ಪ್ರವೇಶ ಅರ್ಜಿಗಳನ್ನು ಡೌನ್‍ಲೋಡ್ ಮಾಡಿ ಜೂನ್ 25ರ ಒಳಗಾಗಿ ಅರ್ಜಿಯನ್ನು ರಂಗಶಾಲೆಗೆ ಸಲ್ಲಿಸುವುದು.

    ಇದನ್ನೂ ಓದಿ: ಲೋಕಸಭೆ ಚುನಾವಣೆ | ಎಷ್ಟು ಸುತ್ತಿನಲ್ಲಿ ಮತ ಎಣಿಕೆ | ಎಷ್ಟು ಟೇಬಲ್ ಇರಲಿದೆ | ಏಜೆಂಟರೇಷ್ಟು ಗೊತ್ತಾ ?

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448398144, 8861043553 ಸಂಪರ್ಕಿಸಬಹುದು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top