By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಸಚಿವ ಡಿ.ಸುಧಾಕರ್
    ಸಚಿವ ಡಿ.ಸುಧಾಕರ್‌ ಇನ್ನಿಲ್ಲ | ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
    2 hours ago
    ಮದಕರಿ ಸ್ಮಾರಕ ಮಾಡೇ ಮಾಡ್ತಿವಿ | ಚಿಂತೆ ಬೇಡ ಮೋದಿ ಸರ್ಕಾರ ಇದೆ | ಅಮಿತ್‌ ಶಾ ಭರವಸೆ
    9 hours ago
    ಅಭಿಮಾನೋತ್ಸವದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
    ಕರ್ನಾಟಕದಲ್ಲಿ ಬಿಜೆಪಿ ಸೂರ್ಯ ಉದಯಿಸುತ್ತಿದೆ | ಬಸವರಾಜ ಬೊಮ್ಮಾಯಿ
    11 hours ago
    ಮಕ್ಕಳ ಬೇಸಿಗೆ ಶಿಬಿರ
    ಮಕ್ಕಳ ಪ್ರತಿಭೆ ಗುರುತಿಸಲು ಬಾಲ ಭವನದ ಚಟುವಟಿಕೆಗಳು ಪೂರಕ | ಜೆ.ವೈಶಾಲಿ
    21 hours ago
    ಸಿರಿಗೆರೆ ಶ್ರೀ, ಬಿ.ಎಸ್.ಯಡಿಯೂರಪ್ಪ
    ಆಧುನಿಕ ಭಗೀರಥ ಯಡಿಯೂರಪ್ಪ | BSY ಕುರಿತು‌‌ ಸಿರಿಗೆರೆ ಶ್ರೀ ಲೇಖನ
    23 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    3 weeks ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    4 weeks ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    1 month ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    1 month ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    1 month ago
  • ತಾಲೂಕು
    ತಾಲೂಕುShow More
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 days ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    5 days ago
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 weeks ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    4 weeks ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    4 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 6 ಮೇ | ರಾಶಿ ಅಡಿಕೆ ಬೆಲೆ ಏರಿಕೆ
    3 days ago
    arecanut price list
    ಅಡಿಕೆ ಧಾರಣೆ | 30 ಏಪ್ರಿಲ್‌ | ಇಂದಿನ ಅಡಿಕೆ ರೇಟ್‌
    1 week ago
    arecanut price list
    ಅಡಿಕೆ ಧಾರಣೆ | 29 ಏಪ್ರಿಲ್‌ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ವಹಿವಾಟು ವಿವರ
    2 weeks ago
    arecanut price list
    ಅಡಿಕೆ ಧಾರಣೆ | 28 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌
    2 weeks ago
    arecanut price list
    ಅಡಿಕೆ ಧಾರಣೆ | 27 ಏಪ್ರಿಲ್‌ | ಇಂದಿನ ಮಾರುಕಟ್ಟೆ ವಿವರ
    2 weeks ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಮೇ.10 | ವೃತ್ತಿಪರ ವ್ಯವಹಾರಗಳಲ್ಲಿ ಕಿರಿಕಿರಿ, ಆರ್ಥಿಕ ತೊಂದರೆ
    56 minutes ago
    ದಿನ ಭವಿಷ್ಯ
    ದಿನ ಭವಿಷ್ಯ | ಮೇ.09 | ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ, ಶುಭವಾರ್ತೆ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಮೇ. 08 | ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ, ದೂರದ ಪ್ರಯಾಣ ಬೇಡ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮೇ. 07 | ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಹೊಸ ವಾಹನ ಖರೀದಿ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮೇ 06 | ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ವ್ಯವಹಾರಗಳು ಅಭಿವೃದ್ಧಿ, ಅರೋಗ್ಯದಲ್ಲಿ ಎಚ್ಚರ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ 08 | ಮೆಕ್ಕೆಜೋಳ, ರಾಗಿ ರೇಟ್…
    2 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ…
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ 06 | ಮೆಕ್ಕೆಜೋಳ ರೇಟ್…
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.05 | ಹತ್ತಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ 04 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್…
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    6 days ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    4 weeks ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    1 month ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    2 months ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 months ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    4 weeks ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    3 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    3 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    3 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 days ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    5 days ago
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 weeks ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    4 weeks ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    4 weeks ago
  • Life Style
    Life StyleShow More
    drinking water in summer
    ಬೇಸಿಗೆಯಲ್ಲಿ ನೀರು ಕುಡಿಯುವ ವಿಚಾರದಲ್ಲಿ ನೀವು ಈ ತಪ್ಪುಗಳನ್ನು ಮಾಡಬೇಡಿ
    50 minutes ago
    Heart disease
    ಹೃದ್ರೋಗ ಸಮಸ್ಯೆ ಇದ್ದವರ ಚರ್ಮದಲ್ಲಿ ಈ ಬದಲಾವಣೆಗಳು ಕಂಡುಬರುತ್ತವೆಯಂತೆ 
    24 hours ago
    Oily scalp
    ಎಣ್ಣೆಯಂಶ ಹೆಚ್ಚಾಗಿರುವ ತಲೆಗೆ ಯಾವ ಎಣ್ಣೆ ಹಚ್ಚಬೇಕು? ಎಂಬುದು ತಿಳಿಯಿರಿ
    1 day ago
    Diarrhea problem in summer
    ಯೂರಿಕ್ ಆಮ್ಲದ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ
    2 days ago
    Diarrhea problem in summer
    ಬೇಸಿಗೆಯಲ್ಲಿ ಅತಿಸಾರ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ ಹೊಟ್ಟೆ ಆರೋಗ್ಯಕ್ಕಾಗಿ ಈ ಸಲಹೆ ಪಾಲಿಸಿರಿ
    2 days ago
Reading: ಕರ್ನಾಟಕದಲ್ಲಿ ಬಿಜೆಪಿ ಸೂರ್ಯ ಉದಯಿಸುತ್ತಿದೆ | ಬಸವರಾಜ ಬೊಮ್ಮಾಯಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಕರ್ನಾಟಕದಲ್ಲಿ ಬಿಜೆಪಿ ಸೂರ್ಯ ಉದಯಿಸುತ್ತಿದೆ | ಬಸವರಾಜ ಬೊಮ್ಮಾಯಿ

News Desk Chitradurga News
Last updated: 9 May 2026 21:18
News Desk Chitradurga News
11 hours ago
Share
ಅಭಿಮಾನೋತ್ಸವದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
ಅಭಿಮಾನೋತ್ಸವದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
SHARE

CHITRADURGA NEWS | 09 MAY 2026

ಚಿತ್ರದುರ್ಗ: ಬರ ಪಡೀತ ಮಧ್ಯ ಕರ್ನಾಟಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಗಂಗಾ ಮಾತೆಯನ್ನು ಭೂಮಿತಾಯಿಗೆ ಉಣಬಡಿಸಿ ಅದಕ್ಕೆ ರೈತರ ಬೆವರು ಸೇರಿದಾಗ ಅಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶ ಒದಗಿಸಿದ ಭಗೀರಥ ಬಿ.ಎಸ್. ಯಡಿಯೂರಪ್ಪ. ರಾಜ್ಯದ ಇತಿಹಾಸದಲ್ಲಿ ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಆಧುನಿಕ ಭಗೀರಥ ಯಡಿಯೂರಪ್ಪ | BSY ಕುರಿತು‌‌ ಸಿರಿಗೆರೆ ಶ್ರೀ ಲೇಖನ

ಅವರು ಇಂದು ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯಡಿಯೂರಪ್ಪ ಅನ್ನುವ ಹೆಸರಿನಲ್ಲಿಯೇ ದೊಡ್ಡ ಶಕ್ತಿ ಇದೆ. 

ಇಡೀ ಕರ್ನಾಟಕದಲ್ಲಿ ಬಡವರ ಮನೆಯಲ್ಲಿ, ಬಡವರ ಮನದಲ್ಲಿ ದಲಿತರ ಹೃದಯದಲ್ಲಿ ಮಿಡಿಯುತ್ತಿರುವ ಹೆಸರು ಯಡಿಯೂರಪ್ಪ. ಕೋಟೆ ನಾಡು, ಒಣಕೆ ಓಬವ್ವನ ನಾಡು, ಮದಕರಿ ನಾಯಕನ ನಾಡಿನಲ್ಲಿ ಬಿಸಿಲು ಬರಗಾಲ ಶಾಸ್ವತವಾಗಿದ್ದಾಗ ಈ ನಾಡಿಗೆ ಶಾಶ್ಬತವಾಗಿ ನೀರು ಉಣಿಸಬೇಕೆಂದು ಭದ್ರಾ ಮೇಲ್ದಂಡೆ ಯೋಜನೆ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. 

ನಿಜಲಿಂಗಪ್ಪ ಅವರ ಕಾಲದಿಂದ ನೆನೆಗುದಿಗೆ ಬಿದ್ದಂತಹ ಈ ಯೋಜನೆಗೆ ಯಡಿಯೂರಪ್ಪ ಅವರು 2008 ರಲ್ಲಿ ಮುಖ್ಯಮಂತ್ರಿ ಆದ ತಕ್ಷಣವೇ ಮಧ್ಯ ಕರ್ನಾಟಕದ ಬಿಸಿಲಿನ ನಾಡಿಗೆ ಕುಡಿಯುವ ನೀರು ಕೊಡಬೇಕು ಎಂದು ನಿರ್ಣಯ ಮಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಅದೇ ರೀತಿ ವಾಣಿ ವಿಲಾಸ ಸಾಗರಕ್ಕೆ ಐದು ಟಿಎಂಸಿ ನೀರು ಕೊಟ್ಟಿದ್ದರಿಂದ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು, ಕೃಷಿಗೆ ನೀರು ಕೊಟ್ಟಿರುವ ಭಗೀರಥ ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಎಂದು ಹೇಳಿದರು.

ನೀರುಣಿಸಿದ ಭಗೀರಥ

ವಿರೋಧ ಪಕ್ಷದಲ್ಲಿ ಇದ್ದಾಗ ಯಾತಕ್ಕಾಗಿ ಹೋರಾಟ ಮಾಡಿದ್ದರೊ ಅಧಿಕಾರಕ್ಕೆ ಬಂದಾಗ ಆ ಹೊರಾಟದ ಬೇಡಿಕೆಗಳಿಗೆ, ಆ ಯೋಜನೆಗಳಿಗೆ ಕಾಯಕಲ್ಪ ಕೊಟ್ಟು ಅವರ ಹೋರಾಟದ ಪ್ರಾಮಾಣಿಕತೆಯ ಪ್ರದರ್ಶನ ಮಾಡಿರುವುದು ನಮ್ಮ ಧೀಮಂತ ನಾಯಕ ಯಡಿಯೂರಪ್ಪ. 

ಇದನ್ನೂ ಓದಿ: ಕೆ.ಆರ್. ಶಿವಪ್ರಕಾಶ್ ಅಂತಿಮ ದರ್ಶನ ಪಡೆದ ವಿಜಯೇಂದ್ರ

ಬಿಜಾಪುರದಲ್ಲಿ ಕೆರೆ ತುಂಬಿಸುವ ಯೋಜನೆ, ಶಿಗ್ಗಾವಿಯಲ್ಲಿ ಕೆರೆ ತುಂಬಿಸುವ ಯೋಜನೆ, ದಾವಣಗೆರೆಯ ರಾಜನಹಳ್ಳಿಯ ಕೆರೆ ತುಂಬಿಸುವ ಯೋಜನೆ, ಉಮ್ರಾಣಿ ಅಮೃತಪುರ ಯೋಜನೆ, ಚನ್ನಗಿರಿ ಯೋಜನೆ, ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಗೂಳೂರು ಹೆಬ್ಬೂರು ಯೋಜನೆ, ಬರ ಪೀಡಿತ ಚಾಮರಾಜ ನಗರದಲ್ಲಿಯೂ ಕೆರೆ ತುಂಬಿಸುವ ಯೋಜನೆ, ರಾಜ್ಯದ ಉದ್ದಗಲಕ್ಕೂ ಕೂಡ ಗಂಗಾ ಮಾತೆಯನ್ನು ಭೂಮಿತಾಯಿಗೆ ಉಣಬಡಿಸಿ ಅದಕ್ಕೆ ರೈತರ ಬೆವರು ಸೇರಿದಾಗ ಅಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶ ಒದಗಿಸಿದ ನಾಯಕ ಬಿ.ಎಸ್. ಯಡಿಯೂರಪ್ಪ. 

ರಾಜ್ಯ ಹಾಗೂ ರಾಜ್ಯದ ಜನರು ಇದನ್ನು ಗುರುತಿಸಬೇಕು. ರಾಜಕಾರಣದಲ್ಲಿ ಸುಳ್ಳು ಹೇಳಿ ಜನರನ್ನು ಜನಾಂಗವನ್ನು ದಾರಿ ತಪ್ಪಿಸಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವಂತಹ ಈ ದಿನಮಾನಗಳಲ್ಲಿ ಒಬ್ಬ ಪ್ರಾಮಾಣಿಕ ಜನಪರವಾಗಿರುವ ಜನನಾಯಕರಾಗಿರುವಂತ ರೈತನ ಮಗ ಆಗಿರುವಂತವರ ಕೈಯಲ್ಲಿ ಅಧಿಕಾರ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಯಡಿಯೂರಪ್ಪ ನವರು ರಾಜ್ಯಕ್ಕೆ ಮಾಡಿ ತೋರಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದನ್ನು ಯಾರು ಮರೆಯಲು ಸಾಧ್ಯವಿಲ್ಲ. ಯಾರೇ ಪ್ರಯತ್ನ ಮಾಡಿದರೂ ಸಾಧ್ಯವಿಲ್ಲ ಎಂದು ಹೇಳಿದರು. 

ಬಿಎಸ್ ವೈ ಒಬ್ಬರೇ ಮಾಸ್ ಲೀಡರ್

ನಮ್ಮ ರಾಜ್ಯದ ಮುಖ್ಯಮಂತ್ರಿ ಮಾಸ್ ಲೀಡರ್ ಅಂತ ಹೇಳುತ್ತಾರೆ. ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ ಮಾಡುವಂತಹ ಈ ಬೃಹತ್ ಜನಶಕ್ತಿ ಕರ್ನಾಟಕದಲ್ಲಿ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ. ಸಾಮಾಜಿಕ ನ್ಯಾಯ ಅಂತ ಭಾಷಣ ಬಿಗಿದವರು, ಹಿಂದುಳಿದ ವರ್ಗಕ್ಕೆ ಏನು ಮಾಡಿದರು. ಎಸ್ಸಿ ಎಸ್ಟಿ ಜನಾಂಗಕ್ಕೆ ಏನು ಮಾಡಿದರು. ಮೊನ್ನೆ ಅವರು ತೆಗೆದುಕೊಂಡಿರುವ ನಿರ್ಣಯ ದಲಿತ ಸಮೂಹಕ್ಕೆ ಅನ್ಯಾಯ ಮಾಡಿದ್ದಾರೆ. 

ಇದನ್ನೂ ಓದಿ: ಕೆ.ಆರ್. ಶಿವಪ್ರಕಾಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಠಾಧೀಶರು | ಕುಟುಂಬಕ್ಕೆ ಸಾಂತ್ವಾನ

ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ, ಭಕ್ತ ಕನಕದಾಸರ ಜಯಂತಿ, ಹಲವಾರು ಹಿಂದುಳಿದ ವರ್ಗಗಳ ಪುಣ್ಯಾತ್ಮರನ್ನು ನೆನಪಿಸುವಂತ ಜಯಂತಿ ಮಾಡಿ, ಕಾಗಿನೆಲೆ ಅಭಿವೃದ್ಧಿ, ಬಂಜಾರ ಅಭಿವೃದ್ಧಿ ನಿಗಮ, ಹಲವಾರು ಹಿಂದುಳಿದ ವರ್ಗಗಳಿಗೆ ನಿಗಮ ಮಾಡಿ, ಹಣ ಕೊಟ್ಟು ಅಭಿವೃದ್ದಿ ಮಾಡಿರುವ ನಾಯಕ ಬಿ.ಎಸ್. ಯಡಿಯೂರಪ್ಪ ಎಂದು ಹೇಳಿದರು. 

ಜನನಾಯಕ ಬಿಎಸ್ ವೈ

ಬಡವರಿಗಾಗಿ ಹೃದಯ ಮಿಡಿಯುತ್ತದೆ. ಒಬ್ಬ ನಾಯಕನ‌ ಪರೀಕ್ಷೆ ಯಾವಾಗ ಆಗುತ್ತದೆ ಗೊತ್ತಾ ? ರಾಜ್ಯದ ಸಂಕಷ್ಟದ ಕಾಲದಲ್ಲಿ ಯಾರು ಜನರ ಮಧ್ಯ ಹೋಗಿ ಜನರಿಗೆ ನೈತಿಕ ಶಕ್ತಿ ತುಂಬಿ ಅವರ ದುಖ ದುಮ್ಮಾನವನ್ನು ದೂರ ಮಾಡುತ್ತಾರೆ. ಅವರೇ ನಿಜವಾದ ಜನನಾಯಕ. ಎರಡು ಉದಾಹರಣೆ 2009 ರಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿತ್ತು. 

ಆ ಸಂದರ್ಭದಲ್ಲಿ ನಾವು ಮೈಸೂರಿನಲ್ಲಿ ಮೀಟಿಂಗ್ ನಲ್ಲಿದ್ದೇವು, ಆ ಮೀಟಿಂಗ್ ಬಿಟ್ಟು ಹೊರಟರೆ ಪ್ರವಾಹವಾಗಿರುವ ಊರುಗಳಿಗೆ ಹೋಗಿ 22 ದಿನ ಮನೆಗೆ ಹೋಗಲಿಲ್ಲ. ಅಲ್ಲಿಂದ ಬಂದ ಮೇಲೆ ಶಾಶ್ವತ ಪರಿಹಾರ ಕೊಡಬೇಕು ಅಂತ ಅರವತ್ಮೂರು ಹಳ್ಳಿಗಳನ್ನು ಪುನರ್ ವಸತಿ ಮಾಡಿ, ಪುನರ್ ನಿರ್ಮಾಣ ಮಾಡಿ ಹೊಸ ಹಳ್ಳಿಗಳನ್ನು ಮಾಡಿ ಮೂಲಬೂತ ಸೌಕರ್ಯ ಕೊಟ್ಟು ಅರವತ್ತೇಳು ಸಾವಿರ ಮನೆ ಕೊಟ್ಟ ಧೀಮಂತ ನಾಯಕ ಯಡಿಯೂರಪ್ಪ. 

ಇದನ್ನೂ ಓದಿ: ಯಡಿಯೂರಪ್ಪ ಅದ್ದೂರಿ ಪುರ ಪ್ರವೇಶ | ಸಂಭ್ರಮದಿಂದ ಸ್ವಾಗತಿಸಿದ ಕೋಟೆ ನಗರಿ

ಇನ್ನೊಂದು ಅಗ್ನಿ ಪರೀಕ್ಷೆ ಕೊವಿಡ್ ಆಗಿದ್ದ ಸಂದರ್ಭದಲ್ಲಿ ಅಕ್ಕಪಕ್ಕದ ರಾಜ್ಯಗಳು ಕೇರಳ, ಆಂಧ್ರಪ್ರದೇಶ ಮಹಾರಾಷ್ಟ್ರ ದಲ್ಲಿ ಹಲವಾರು ಸಾವು ನೋವುಗಳಾಗಿದ್ದವು. ಅದು ಕರ್ನಾಟಕದಲ್ಲಿ ಆಗಬಾರದು ಎಂದು ಮೊದಲನೇ ದಿನದಿಂದ ಹಠ ಮಾಡಿ ಔಷಧಿಗಳನ್ನು ತಂದು ಕೊವಿಡನ್ನು ನಿಯಂತ್ರಣ ಮಾಡಿ, ಕೊವಿಡ್ ನಿಯಂತ್ರಣ ಮಾಡಿ ಕೂಲಿ ಕಾರ್ಮಿಕರಿಗೆ ವಿಶೇಷ ಅನುದಾನ ಕೊಟ್ಟು, ಅವರ ಬದುಕನ್ನು ಉಳಿಸಿ ಆಕ್ಷಿಜನ್ ಇಲ್ಲದಾಗ ಬೇರೆ ಬೇರೆ ಪ್ರದೇಶಗಳಿಂದ ಆಕ್ಷಿಜನ್ ತಂದು ಆಸ್ಪತ್ರೆಗೆ ತಂದು ಕೊಟ್ಟಿರುವ ಧೀಮಂತ ನಾಯಕ ಯಡಿಯೂರಪ್ಪ ಎಂದು ಹೇಳಿದರು. 

ಕಾಂಗ್ರೆಸ್ ಸೂರ್ಯ ಮುಳುಗುತ್ತಿದೆ

ಯಡಿಯೂರಪ್ಪ ಅವರು ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಅಂತ ಹೇಳುತ್ತಿದ್ದರು. ಅಂತ ಧಿಮಂತ ನಾಯಕನ ಅಭಿಮಾನೋತ್ಸವ ಮಾಡುವ ಸೌಭಾಗ್ಯ ನಮ್ಮದಾಗಿದೆ. ವಯಕ್ತಿಕವಾಗಿ ನನಗೆ ಆಶೀರ್ವಾದ ಮಾಡಿ, ಮಾರ್ಗದರ್ಶನ ಮಾಡಿ, ಸ್ಥಾನ ಮಾನ, ಗೌರವ ಕೊಟ್ಟು, ನಮಗೆ ಶಕ್ತಿ ಕೊಟ್ಟು, ಇನಷ್ಷು ಶಕ್ತಿ ತುಂಬಿರುವ ನನ್ನ ನೆಚ್ಚಿನ ನಾಯಕ ಯಡಿಯೂರಪ್ಪ ನವರಿಗೆ ನೂರು ವರ್ಷಕಾಲ ಭಗವಂತ ಆಶೀರ್ವಾದ ಮಾಡಲಿ, ಆರೋಗ್ಯದಿಂದ ಇರಲಿ, ಕರ್ನಾಟಕವನ್ನು ಮುನ್ನಡೆಸಲಿ ನಮ್ಮೆಲ್ಲರಿಗೂ ಆಶಿರ್ವಾದ ಮಾಡಲಿ, ಈ ಅಭಿಮಾನೋತ್ಸವದಲ್ಲಿ ಒಂದೇ ಒಂದು ಆಡಳಿತ ಪಕ್ಚದ ಸೂರ್ಯ ಮುಳುಗುತ್ತಿದೆ. 

ನಮ್ಮ ಪಕ್ಷದ ಸೂರ್ಯ ಉದಯ ಆಗುತ್ತಿದೆ. ಅವರ ಹಡಗು ಮುಳಿಗುತ್ತಿದೆ. ನಮ್ಕ ಹಡಗು ದಡ ಸೇರುತ್ತಿದೆ. ಬರುವ ದಿನಗಳಲ್ಲಿ ಒಕ್ಕಟ್ಟಾಗಿ, ಒಂದಾಗಿ ಯಡಿಯೂರಪ್ಪ ಅವರ ಆಡಳಿತ ಅವರ ಕಾರ್ಯಕ್ರಮಗಳು ಮತ್ತೆ ಕರ್ನಾಟಕದಲ್ಲಿ ಸ್ಥಾಪನೆ ಆಗಬೇಕು ಅದಕ್ಕೆ ನಾವು ಇಲ್ಲಿಂದ ಸಂಕಲ್ಪ ಮಾಡಿದರೆ ಮತ್ತೆ ಯಡಿಯೂರಪ್ಪ ಅವರ ಆಶೀರ್ವಾದದ ನಮ್ಮ ಪಕ್ಷದ ಸರ್ಕಾರ ವಿಧಾನಸೌಧದ ಮೂರನೆ ಮಹಡಿಯಲ್ಲಿ ಆಗಬೇಕು. 

ಇದನ್ನೂ ಓದಿ: ಮಕ್ಕಳ ಪ್ರತಿಭೆ ಗುರುತಿಸಲು ಬಾಲ ಭವನದ ಚಟುವಟಿಕೆಗಳು ಪೂರಕ | ಜೆ.ವೈಶಾಲಿ

ಕರ್ನಾಟಕ ಮಾತೆ ಭುವನೇಶ್ವರಿಯ ಸೇವೆ ಮಾಡುವ ಅವಕಾಶ ನಮ್ಕದಾಗಬೇಕು. ಚಾಮುಂಡೇಶ್ವರಿ ದುರ್ಗಾಮಾತೆಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಯಡಿಯೂರಪ್ಪ ಅವರ ಮುಖಾಂತರ ‌ಎಲ್ಲರಿಗೂ ಆಶೀರ್ವಾದ ಹರಿದು ಬರಲಿ ಎಂದು ಹೇಳಿದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Basavaraj BommaiBJPChitradurgaChitradurga newsKarnatakaಕರ್ನಾಟಕಚಿತ್ರದುರ್ಗಚಿತ್ರದುರ್ಗ ನ್ಯೂಸ್ಬಸವರಾಜ ಬೊಮ್ಮಾಯಿಬಿಜೆಪಿ
Share This Article
Facebook Email Print
Previous Article ಮಕ್ಕಳ ಬೇಸಿಗೆ ಶಿಬಿರ ಮಕ್ಕಳ ಪ್ರತಿಭೆ ಗುರುತಿಸಲು ಬಾಲ ಭವನದ ಚಟುವಟಿಕೆಗಳು ಪೂರಕ | ಜೆ.ವೈಶಾಲಿ
Next Article ಮದಕರಿ ಸ್ಮಾರಕ ಮಾಡೇ ಮಾಡ್ತಿವಿ | ಚಿಂತೆ ಬೇಡ ಮೋದಿ ಸರ್ಕಾರ ಇದೆ | ಅಮಿತ್‌ ಶಾ ಭರವಸೆ
Leave a Comment

Leave a Reply Cancel reply

Your email address will not be published. Required fields are marked *

drinking water in summer
ಬೇಸಿಗೆಯಲ್ಲಿ ನೀರು ಕುಡಿಯುವ ವಿಚಾರದಲ್ಲಿ ನೀವು ಈ ತಪ್ಪುಗಳನ್ನು ಮಾಡಬೇಡಿ
Life Style
ದಿನ ಭವಿಷ್ಯ
ದಿನ ಭವಿಷ್ಯ | ಮೇ.10 | ವೃತ್ತಿಪರ ವ್ಯವಹಾರಗಳಲ್ಲಿ ಕಿರಿಕಿರಿ, ಆರ್ಥಿಕ ತೊಂದರೆ
Dina Bhavishya
ಸಚಿವ ಡಿ.ಸುಧಾಕರ್
ಸಚಿವ ಡಿ.ಸುಧಾಕರ್‌ ಇನ್ನಿಲ್ಲ | ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
ಮುಖ್ಯ ಸುದ್ದಿ
ಮದಕರಿ ಸ್ಮಾರಕ ಮಾಡೇ ಮಾಡ್ತಿವಿ | ಚಿಂತೆ ಬೇಡ ಮೋದಿ ಸರ್ಕಾರ ಇದೆ | ಅಮಿತ್‌ ಶಾ ಭರವಸೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up