ಮೊಳಕಾಳ್ಮೂರು
Accident; ಭೀಕರ ಅಪಘಾತ | ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ | ಸ್ಥಳದಲ್ಲೇ ಸಾವು

Published on
CHITRADURGA NEWS | 19 SEPTEMBER 2024
ಮೊಳಕಾಲ್ಮೂರು: ತಾಲೂಕಿನ ಅಶೋಕ ಸಿದ್ದಾಪುರ ಬಳಿ ಪಾದಚಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಕಾರ್ಮಿಕ ಮಹಮ್ಮದ್ (36) ಮೃತಪಟ್ಟಿದ್ದಾನೆ.

ಕ್ಲಿಕ್ ಮಾಡಿ ಓದಿ: Adike: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್
ಮೊಹಮ್ಮದ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ವಾಹನ ಚಾಲಕವಾಹನ ಸಮೇತ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ, ಪಿಎಸ್ಐಗಳಾದ ಮಹೇಶ್, ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
Related Topics:Chitradurga, Chitradurga news, Chitradurga Updates, Collision, death, Kannada Latest News, pedestrian, stranger, terrible accident, vehicle, ಅಪರಿಚಿತ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಡಿಕ್ಕಿ, ಪಾದಚಾರಿ, ಭೀಕರ ಅಪಘಾತ, ವಾಹನ, ಸಾವು

Click to comment