CHITRADURGA NEWS | 24 AUGUST 2025
ಚಿತ್ರದುರ್ಗ: ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಕುಂಚಿಗ ವೀರಶೈವ ಲಿಂಗಾಯತ ಸಮಾಜ, ಉತ್ಥಾನ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸತ್ಯಮೇವ ಜಯತೆ | ಸಚಿವ ಡಿ.ಸುಧಾಕರ್
ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ.ಬಿ.ತಿಪ್ಪೇರುದ್ರಪ್ಪ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ ಸಹಾಯವನ್ನು ಪಡೆದವರು ಮುಂದಿನ ದಿನದಲ್ಲಿ ಸಮಾಜಕ್ಕೆ ಏನಾದರೂ ಕೂಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಸಮುದಾಯದವರು ಬೇರೆಯವರ ಸಮಾಜದೊಂದಿಗೆ ಉತ್ತಮವಾದ ಭಾಂಧವ್ಯವನ್ನು ಹೊಂದುವುದರ ಮೂಲಕ ಅವರಂತೆ ನಾವಾಗಬೇಕೆಂದು ಮುನ್ನಡೆಯಬೇಕಿದೆ.
ಸಮಾಜದಲ್ಲಿನ ನಮ್ಮ ಜನತೆ ಇಂತಹ ಕಾರ್ಯಕ್ರಮಗಳಿಗೆ ಸಹಾಯ ಮಾಡುವಂತ ಗುಣ ಬೆಳಿಸಿಕೊಳ್ಳಬೇಕಿದೆ, ಇಲ್ಲವಾದಲ್ಲಿ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ, ಈಗ ಸಮಾಜದಿಂದ ಸಹಾಯ ಪಡೆದವರು ಮುಂದಿನ ದಿನದಲ್ಲಿ ಇದನ್ನು ನೆನಸಿಕೊಂಡು ಬೇರೆಯವರಿಗೆ ಸಹಾಯ ಮಾಡಿ ಎಂದರು.
ನಿವೃತ್ತ ಉಪನ್ಯಾಸಕರು, ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿಗಳಾದ ಹೆಚ್.ಕುಬೇರಪ್ಪ ಮಾತನಾಡಿ, ನಮ್ಮ ಸಮುದಾಯದಲ್ಲಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ನಮ್ಮ ಸಮುದಾಯದ ಕೆಲಸವಾಗಿದೆ, ಇದರಿಂದ ಮುಂದಿನ ಮಕ್ಕಳಿಗೆ ಸಹಾ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಒಳಹರಿವು ಹೆಚ್ಚಳ | ಇಂದಿನ ಜಲಾಶಯ ಮಟ್ಟ ?
ನಮ್ಮ ಸಮುದಾಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅಂಕಗಳನ್ನು ಪಡೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಮಾಡಿದ ಸಮಾಜವನ್ನು ಮರೆಯಬೇಡಿ, ತಂದೆ-ತಾಯಿಯನ್ನು ಗೌರವಿಸಿ, ಕಡೆಗಣಿಸಬೇಡಿ, ಇಂದಿನ ದಿನಮಾನದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ, ಇದಕ್ಕೆ ಶಿಕ್ಷಣವನ್ನು ಪಡೆದವರೆ ಕಾರಣರಾಗಿದ್ದಾರೆ ಎಂಬುದು ದುರಂತ ಎಂದರು.
ನಿವೃತ್ತ ಪ್ರಚಾರ್ಯರಾದ ಬಿ.ಸಿ.ಶಾಂತರಾಜಿ ಮಾತನಾಡಿದರು.
ಈ ವೇಳೆ ಕುಂಚಿಗ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಕೃಷ್ಣಮೂರ್ತಿ, ನಿವೃತ್ತ ಪೋಲಿಸ್ ಅಧಿಕಾರಿ ಬಸವರಾಜಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರಪ್ಪ ಭಾಗವಹಿಸಿದ್ದರು.
ಅನನ್ಯ ಪ್ರಾರ್ಥಿಸಿದರು. ರಾಜಪ್ಪ ಸ್ವಾಗತಿಸದರು. ಲವಕುಮಾರ್ ಕಾರ್ಯಕ್ರಮ ನಿರೂಪಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
