CHITRADURGA NEWS | 11 APRIL 2026
ಚಿತ್ರದುರ್ಗ: ಜಗತ್ತು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಮುಂದಡಿ ಇಡುತ್ತಿದೆ. ಅದರ ಪ್ರಯೋಜನವನ್ನು ಈಗಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ ಎಂದು ಭಾರತ ಸರ್ಕಾರದ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ತಾಂತ್ರಿಕ ಅಧಿಕಾರಿ ಹಾಗೂ ಎಸ್.ಜೆ.ಎಂ. ಪಾಲಿಟೆಕ್ನಿಕ್‌ನ ಹಳೆಯ ವಿದ್ಯಾರ್ಥಿಯೂ ಎಂ.ಜೆ.ಶಿವರಾಜ್ ತಿಳಿಸಿದರು.

ಇದನ್ನೂ ಓದಿ: ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
ಇಲ್ಲಿನ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,
ವಿಷಾದಕರ ಸಂಗತಿಯೆಂದರೆ ಮೊಬೈಲ್ ಬಳಕೆಯಿಂದ ನಮ್ಮ ತಿಳುವಳಿಕೆ ಮಟ್ಟ ಹೆಚ್ಚಿಸಲು ಶೇ.6ರಷ್ಟು ಮಾತ್ರ ಉಪಯೋಗ ಆಗುತ್ತಿದ್ದು, ಶೇ.60ರಷ್ಟು ಅಂತರ್ಜಾಲವನ್ನು ಕೇವಲ ರಂಜಿಸುವ ರೀಲ್ ಇನ್ನಿತರೆ ಚಟುವಟಿಕೆಗಳನ್ನು ನೋಡಲು ಬಳಸುತ್ತಿದ್ದೆವೆ. ವಿದ್ಯಾರ್ಥಿಗಳು ಅನ್ವೇಷಕರಾಗಬೇಕು ಎಲ್ಲಿಯವರೆಗೆ ಅಂದರೆ ನಾವು ಅಂದುಕೊಂಡದ್ದನ್ನು ಸಾಧಿಸುವ ಇಲ್ಲವೇ ಗುರಿ ತಲುಪುವವರೆಗೂ ನಿರಂತರ ಶ್ರಮ ಹಾಕಿದಾಗ ಮಾತ್ರ ನಾವು ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ ಸಲಹೆ ನೀಡಿದರು.
ನಾನು ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ನಾನೂ ಸಹ ನಿಮ್ಮ ಹಾಗೆ ವಿದ್ಯಾರ್ಥಿಯಾಗಿದ್ದೆ. ಓದುತ್ತ ಹೋದೆ. ನಾನು ಸಹ ಅನೇಕ ಸಂದರ್ಶನಗಳನ್ನು ಎದುರಿಸಿದ್ದೆನೆ. ನಮ್ಮ ದೃಢ ನಿರ್ಧಾರ, ಅಚಲ ನಂಬಿಕೆ ಮತ್ತು ವಿಶ್ವಾಸಗಳಿದ್ದಲ್ಲಿ ಯಾವುದೂ ಕಷ್ಟವಲ್ಲ.
ಇದನ್ನೂ ಓದಿ: PU ಫಲಿತಾಂಶ | SRS ಕಾಲೇಜಿನ ಸುದರ್ಶನ್ ರಾಜ್ಯಕ್ಕೆ 6ನೇ ಸ್ಥಾನ
ಮೊಬೈಲ್‌ನ್ನು ಕೇವಲ ಮನರಂಜನೆಗಾಗಿ ಬಳಸಬೇಡಿ ಅದೊಂದು ಒಳ್ಳೆಯ ವೇದಿಕೆ. ನಾನಾ ವಿಧವಾದ ಅಮೂಲ್ಯ ಸಲಹೆ ಸಂಗತಿಗಳಿರುತ್ತವೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಉದ್ಯೋಗ ಗಳಿಸಲು ಸಾಕಷ್ಟು ಅವಕಾಶಗಳಿವೆ. ಕುಂತಲ್ಲೇ ನೀವು ಅವುಗಳ ಬಗೆಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಕಲಿಯುತ್ತ ಕಲಿಯುತ್ತ ನಮ್ಮ ಜ್ಞಾನವನ್ನು ವೃದ್ಧಿಸಿಕೊಂಡು ತನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೂ ಪರೋಕ್ಷವಾಗಿ ನಿಮ್ಮಿಂದ ಉಪಯೋಗವಾಗಬೇಕೆಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ಈ ಪಾಲಿಟೆಕ್ನಿಕ್‌ನಲ್ಲಿ ಓದಿದಂತಹ ವಿದ್ಯಾರ್ಥಿಯೊಬ್ಬರು ಪ್ರತಿಷ್ಠಿತ ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿದ್ದಾರೆನ್ನುವುದೇ ದೊಡ್ಡಸ್ತಿಕೆಯ ಮಾತು. ಅವರು ಸಂದರ್ಶನ ನೀಡುವಾಗ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಿಮ್ಮ ಊರು ಯಾವುದು ಎಂದಾಗ ಚಿತ್ರದುರ್ಗ ಅಂತ ಹೇಳಿದ್ದಾರೆ. ಓಹ್ ಚಿತ್ರದುರ್ಗ ಕಲ್ಲಿನಕೋಟೆ ಮತ್ತು ಮುರುಘಾಮಠವನ್ನು ನೆನಪಿಸಿಕೊಂಡಿದ್ದಾರೆ. ಹೀಗೆ ನೀವುಗಳೆಲ್ಲರೂ ನಿಮ್ಮ ನಿಮ್ಮ ಓದಿನಲ್ಲಿ ಪ್ರತಿಭಾಶಾಲಿಗಳಾಗಬೇಕಿದೆ.
ಶಿವರಾಜ್ ಇಸ್ರೋದಲ್ಲಿದ್ದಾರೆ ಎನ್ನುವುದು ನಮ್ಮ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳಿಗೆ ಗೊತ್ತಾಗಿದ್ದರೆ ಅದೆಷ್ಟು ಖುಷಿಪಡುತ್ತಿದ್ದರೇನೋ? ಅದೇ ರೀತಿ ಬಡ ವಿದ್ಯಾರ್ಥಿಗಳಿಗೆ ಜಯದೇವ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದ ಜಯದೇವ ಮುರುಘರಾಜೇಂದ್ರರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಅವರ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಲ್ಲಿಯೂ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕೆಂದಿದ್ದರಂತೆ.
ಇದನ್ನೂ ಓದಿ: ಮೇದಾರ ಕೇತೇಶ್ವರ ಮಠಕ್ಕೆ ಕೆ.ಜಿ.ಜಗದೀಶ್ ಭೇಟಿ
ಈ ಮಾತನ್ನು ತುಮಕೂರಿನ ಭಕ್ತರೊಬ್ಬರು ಹೇಳುತ್ತಾರೆ. ಅದರಂತೆ ಪ್ರತಿಷ್ಠಿತ ಶ್ರೀ ಜಗದ್ಗುರು ಮುರುಘರಾಜೇಂದ್ರ ಸಂಸ್ಥೆಯಲ್ಲಿ ಹಿಂದೆ ಅಧ್ಯಯನ ಮಾಡಿದವರು ರಾಷ್ಟ್ರಕವಿ, ರಾಷ್ಟ್ರನಾಯಕ ಮತ್ತಿತರ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈಗಲೂ ಇದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ನಿಮಗೆ ಚಟುವಟಿಕೆಗಳ ಮೇಲೆ ಗಮನವಿದ್ದರೂ ಸಹಿತ ಅಧ್ಯಯನವನ್ನು ಮೊಟಕುಗೊಳಿಸಬಾರದು. ನೋಡಿ ನಮ್ಮ ಪಾಲಿಟೆಕ್ನಿಕ್‌ನಲ್ಲಿ ಓದಿ ಒಳ್ಳೊಳ್ಳೆಯ ಹುದ್ದೆ ಪಡೆದು ಲಕ್ಷ ಲಕ್ಷ ವೇತನ ಪಡೆಯುವವರಿದ್ದಾರೆ. ತಾವು ಕಲಿತ ಮಾತೃಸಂಸ್ಥೆಯನ್ನು ಮರೆಯಬಾರದು. ಆಗಾಗ ಬರುತ್ತಿರಬೇಕು.
ಮಠ ಮತ್ತು ಅದರ ಬೆಳವಣಿಗೆಗೆ ಬೇಕಾದ ಸಲಹೆ ಸಹಕಾರ ನೀಡುತ್ತಿದ್ದರೆ ಪ್ರೇರಕವಾಗುತ್ತದೆಂದ ಶ್ರೀಗಳು ಈಗಿನ ವಿದ್ಯಾರ್ಥಿಗಳೂ ಸಹ ನೀವು ಕಲಿಯುತ್ತಿರುವ ಸನಿಹದಲ್ಲೇ ಶ್ರೀಮಠವಿದೆ ಅಲ್ಲಿ ನಡೆಯುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಂಸ್ಕೃತಿಯ ವಾರಸುದಾರರೂ ನೀವಾಗಬೇಕಿದೆ. ಅದಕ್ಕೆ ತಕ್ಕ ಮಾರ್ಗದರ್ಶನ ಇಲ್ಲಿನ ಬೋಧಕ ವರ್ಗದಿಂದ ನೀಡಬೇಕೆಂದು ತಿಳಿಸಿದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎನ್.ಚಂದ್ರಶೇಖರ್, ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ಭರತ್,ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್ ಮಾತನಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 10 | ರಾಗಿ, ಮೆಕ್ಕೆಜೋಳ, ಶೇಂಗಾ ರೇಟ್…
ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ, ಪ್ರಮಾಣ ಪತ್ರ ನೀಡಲಾಯಿತು. ವಿದ್ಯಾರ್ಥಿಗಳು, ಬೋಧಕರು, ಪೋಷಕರು, ಹಳೇವಿದ್ಯಾರ್ಥಿಗಳು, ನಿವೃತ್ತ ಸಿಬ್ಬಂದಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
