CHITRADURGA NEWS | 19 MAY 2026
ಚಿತ್ರದುರ್ಗ: ಪಠ್ಯದಲ್ಲಿ ಇತಿಹಾಸವನ್ನು ಓದುವುದರ ಜೊತೆಗೆ ಹೊರಗೆ ಬಂದು ಇತಿಹಾಸವನ್ನು ತಿಳಿದುಕೊಳ್ಳಬೇಕೆಂದು ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಸುರೇಶ್ ಬಿ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.18 | ಮೆಕ್ಕೆಜೋಳ, ಶೇಂಗಾ ಸೂರ್ಯಕಾಂತಿ ರೇಟ್..
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಸಹಾಯಕ ನಿರ್ದೇಶಕರ ಕಚೇರಿ ಸಹಯೋಗಹದೊಂದಿಗೆ ರಂಗಯ್ಯನಬಾಗಿಲು ಸಮೀಪವಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
1977 ರಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಘೋಷಿಸಲಾಯಿತು. ಇತಿಹಾಸದ ಕುರುಹುಗಳನ್ನು ತಿಳಿದುಕೊಳ್ಳುವುದು ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಉದ್ದೇಶ. ಬ್ರಿಟೀಷರ ಕಾಲದಲ್ಲಿ ಇತಿಹಾಸದ ಅಧ್ಯಯನ ಆರಂಭಗೊಂಡಿತು. ಅಂದಿನಿಂದ ಶಾಸನ, ಸ್ಮಾರಕ, ವೀರಗಲ್ಲುಗಳ ಸಂಗ್ರಹವಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಇತಿಹಾಸದ ಉಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಡಾ.ರೇವಣಸಿದ್ದಪ್ಪ ಎಸ್. ಮಾತನಾಡಿ, 158 ದೇಶಗಳಲ್ಲಿ 37 ವಸ್ತು ಸಂಗ್ರಹಾಲಯಗಳಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ನಡೆಯುತ್ತಿದೆ. ವಸ್ತು ಸಂಗ್ರಹಾಲಯಗಳು ಪೂರ್ವಜರ ಜ್ಞಾನ, ವಿಜ್ಞಾನ ಸಾಂಸ್ಕøತಿಕ ಪರಂಪರೆಯನ್ನು ಜೀವಂತ ಸ್ಮಾರಕಗಳನ್ನಿಟ್ಟುಕೊಂಡಿರುವ ಕೇಂದ್ರಗಳು. ಯುನೆಸ್ಕೋ ಅಡಿಯಲ್ಲಿ 1946 ರಲ್ಲಿ ಐಸಿಓಎಂ. ಎನ್.ಜಿ.ಓ. ಆರಂಭವಾಯಿತು. ವಸ್ತು ಸಂಗ್ರಹಾಲಯಗಳು ಚರಿತ್ರಕಾರನ ಅವಿಭಾಜ್ಯ ಅಂಗ ಎಂದರು.
ಇದನ್ನೂ ಓದಿ: ಜಿಲ್ಲಾ ಯಾದವ ಗೊಲ್ಲರ ಸಂಘದ ಚುನಾವಣೆ | ನಿರ್ದೇಶಕರಾಗಿ 15 ಜನ ಆಯ್ಕೆ
ವಸ್ತು ಸಂಗ್ರಹಾಲಯಗಳು ಶಿಕ್ಷಣ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ. ಪ್ರಾಥಮಿಕ ಆಕಾರಗಳನ್ನು ಒದಗಿಸಿಕೊಡುತ್ತವೆ. ಲಕ್ಕುಂಡಿಯನ್ನು ಬಯಲು ಸಂಗ್ರಹಾಲಯವನ್ನಾಗಿ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ.
ಪ್ರಾಚೀನ ಅವಶೇಷಗಳು ಎಲ್ಲಿಯಾದರೂ ಕಂಡು ಬಂದಲ್ಲಿ ನಿರ್ಲಕ್ಷೆ ವಹಿಸದೆ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುವುದು ಎಲ್ಲರ ಜವಾಬ್ದಾರಿ. ರೀಲ್ಸ್ ಹುಚ್ಚಿಗಾಗಿ ಮೂರ್ತಿಗಳನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಪ್ರಾಚ್ಯವಸ್ತು, ದೇವಾಲಯಗಳು ಪೂರ್ವಜರ ಬದುಕಿನ ಸಾಂಸ್ಕøತಿಕ ಬೇರುಗಳು ಎಂದು ತಿಳಿಸಿದರು.
ನಾಯಕನಹಟ್ಟಿ ಸಮೀಪವಿರುವ ಹೊಸಗುಡ್ಡವನ್ನು ಕಾಶಿರಾಮೇಶ್ವರ ಎಂದು ಕರೆಯಲಾಗುತ್ತದೆ. ಕೋಟೆಯ ಕಲ್ಲುಗಳನ್ನು ಕಿತ್ತು ಸಣ್ಣ ಸಣ್ಣ ಗುಡಿಗಳನ್ನು ಕಟ್ಟಿ ವಿಕೃತಿ ಮೆರೆಯಲಾಗುತ್ತಿದೆ. ಪ್ರಾಚ್ಯ ಅವಶೇಷಗಳು ಹಾಳಾಗುತ್ತಿವೆ. ಇತಿಹಾಸದ ಪ್ರಜ್ಞೆ ಜನರಲ್ಲಿ ಇಲ್ಲದಂತಾಗಿದೆ. ತಿಳಿಸಿ ಹೇಳುವ ಪ್ರಕ್ರಿಯೆ ಪ್ರತಿ ಮನೆ ಮನೆಯಿಂದ ಆರಂಭವಾಗಬೇಕು. ಪ್ರಾಚ್ಯಾವಶೇಷಗಳ ರಕ್ಷಣೆ ಕಡೆ ಹೆಚ್ಚಿನ ಗಮನ ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.
ಇದನ್ನೂ ಓದಿ: ಗೌರವ ಸಮರ್ಪಣೆಯಲ್ಲಿ ಹಳೇ ನೆನಪುಗಳ ಮೆಲಕು ಹಾಕಿದ ನಿವೃತ್ತ IPS ಅಧಿಕಾರಿ ಗಗನ್‍ದೀಪ್
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಸರ್ಕಾರಿ ಕಲಾ ಕಾಲೇಜು ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಜಗನ್ನಾಥ ಬಿ.ಇ. ಮಾತನಾಡಿದರು.
ಸರ್ಕಾರಿ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
