
CHITRADURGA NEWS | 10 MARCH 2026
ಚಿತ್ರದುರ್ಗ: ಶಿವಶಿಂಪಿ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಮ್ಮಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಜಿಲ್ಲಾವಾರು ಪ್ರವಾಸ ಮಾಡಿ ಸಮುದಾಯವರನ್ನು ಭೇಟಿ ಮಾಡಿ ಸಂಘಟನೆ ಮಾಡಲಾಗುತ್ತಿದೆ ಎಂದು ಬನಹಟ್ಟಿಯ ಮಹಾಂತ ಮಂದಾರ ಮಠದ ಮಹಾಂತ ದೇವರು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣ | ಮಾರ್ಚ್ 13ಕ್ಕೆ ಕಾರ್ಯಕ್ರಮ
ನಗರದ ಬಸವ ಮಂಟಪದಲ್ಲಿ ಶಿವಶಿಂಪಿ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮಗೆ ಈಗ ಮಠ ಕಟ್ಟುವುದು, ವಿದ್ಯಾಪೀಠಗಳನ್ನು ನಿರ್ಮಾಣ ಮಾಡುವುದಕ್ಕಿಂತ ಮುಖ್ಯವಾಗಿ ಸಮಾಜವನ್ನು ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಎಲ್ಲೇ ಹೋದರು ಸಹಾ ನಿಮ್ಮವರು ಎಷ್ಟು ಮಂದಿ ಇದ್ದಾರೆ ಎಂದು ಕೇಳುವುದೇ ಆಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಬೀದರ್‌ನಿಂದ ಬೆಂಗಳೂರಿನವರೆಗೆ ನಮ್ಮ ಸಮುದಾಯವನ್ನು ಸಂಘಟಿಸಲು ಮುಂದಾಗಿದ್ದು, ನಮ್ಮ ಕುಲ ಗುರು ಶಿವದಾಸಿಮಯ್ಯರವರ ಬಗ್ಗೆ ಜೀವನ ಚರಿತ್ರ ವಚನಗಳು ಸಂಗ್ರಹ ಕಾರ್ಯವನ್ನು ನಮ್ಮ ಸಮಾಜದ ಸಂಶೋಧಕರಿಂದ ನಡೆಸಲಾಗುತ್ತಿದೆ.
ಸಮುದಾಯ ಸಂಘಟನೆಯಾದರೆ ಮಾತ್ರ ಸರ್ಕಾರದ ಮಟ್ಟದಲ್ಲಿ ಏನಾದರೂ ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಹೀಗೇಯೇ ಇರಬೇಕಾಗುತ್ತದೆ. ಮುಂದಿನ ದಿನದಲ್ಲಿ ಜಿಲ್ಲಾವಾರು ಸಮಾವೇಶಗಳನ್ನು ಮಾಡುವ ಮೂಲಕ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ನಮ್ಮ ಕುಲ ಗುರು ಶಿವದಾಸಿಮಯ್ಯ ಗುರುಗಳು ಸೂಜಿ ಕಾಯಕ ರಾಮಲಿಂಗ ತಂದೆಯವರಾಗಿದ್ದೆರು ಎಂದು ಒಂದು ಕಡೆ ಉಲ್ಲೇಖವಾಗಿದೆ. ಈ ಹಿನ್ನಲೆಯಲ್ಲಿ ನಾವು ಜಯಂತಿ ಮಾಡುವಾಗ ಶಿವದಾಸಿಮಯ್ಯ ಹಾಗೂ ಸೂಜಿ ಕಾಯಕ ರಾಮಲಿಂಗ ತಂದೆಯವರ ಇಬ್ಬರ ಪೋಟೋವನ್ನು ಇಟ್ಟು ಪೂಜೆಯನ್ನು ಮಾಡಬೇಕು ಎಂದು ತಿಳಿಸಿದ ಶ್ರೀಗಳು, ಶಿವದಾಸಿಮಯ್ಯ, ಜೇಡರ ದಾಸಿಮಯ್ಯ, ಹಾಗೂ ಶಂಕರ ದಾಸಿಮಯ್ಯ ಇವರು ಒಂದೇ ತಾಯಿಯ ಮಕ್ಕಳು ಆದರೆ ವೃತ್ತಿಯಲ್ಲಿ ಬೇರೆ ಬೇರೆಯಾಗಿದ್ದಾರೆ ಎಂದರು.
ಇದನ್ನೂ ಓದಿ: ಸಾಗರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ
ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಜಯದೇವಮೂರ್ತಿ, ಸಮಾಜದ ಮುಖಂಡರಾದ ಷಣ್ಮುಖಪ್ಪ, ಮುರುಗೇಶ್, ಕವಿತಾ ಸುರೇಶ್, ಗೀತಾ ರುದ್ರೇಶ್ ಮಾಲಾ ಬಸವರಾಜು, ಕುಸುಮ ರಾಜಣ್ಣ ನಂದ ಬಕ್ಕೇಶ್, ಕವಿತಾ ಪಂಪಾಪತಿ, ಇಂದಿರಾ ಜಯದೇವ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
