ಮುಖ್ಯ ಸುದ್ದಿ
ಕಣಿವೆ ಮಾರಮ್ಮ ಜಾತ್ರೆ | ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ | ಭರತ್ ಪೈಲ್ವಾನ್

CHITRADURGA NEWS | 21 March 2025
ಚಿತ್ರದುರ್ಗ: ನಗರ ದೇವತೆ ಶ್ರೀ ಕಣಿವೆ ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಮಾ.25 ರಂದು ಮಹಿಳಾ ಮತ್ತು ಪುರುಷ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಭಾರತೀಯ ಶೈಲಿಯ ಚಿತ್ರದುರ್ಗ ಜಿಲ್ಲಾ ಕುಸ್ತಿ ಸಂಘದ ಜಿಲ್ಲಾಧ್ಯಕ್ಷ ಭರತ್ ತಿಳಿಸಿದರು.
Also Read: ದಿನ ಭವಿಷ್ಯ | ಮಾರ್ಚ್ 21 | ಉದ್ಯೋಗ ಬಡ್ತಿ, ದೂರ ಪ್ರಯಾಣ ಬೇಡ, ಆರೋಗ್ಯದಲ್ಲಿ ಎಚ್ಚರ
ನಗರದ ಪತ್ರಿಕಾಭವನದಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಕಣಿವೆ ಮಾರಮ್ಮ ದೇವಿಯ ಜಾತ್ರೆ ಅಂಗವಾಗಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.25 ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದರು.
ಚಿತ್ರದುರ್ಗ ಗಂಡು ಮೆಟ್ಟಿನ ನಾಡು, ಕುಸ್ತಿ ಸೇರಿದಂತೆ ಅನೇಕ ಕ್ರೀಡೆಗಳಿಗೆ ರಾಜ ಮಹಾರಾಜರ ಕಾಲದಿಂದಲೂ ಹೆಸರಗಿದೆ.
ಆಧುನಿಕ ಕ್ರೀಡೆಗಳ ಹಾವಳಿಯಲ್ಲಿ ಕುಸ್ತಿಯಂತಹ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತೆ ಚಿತ್ರದುರ್ಗದಲ್ಲಿ ಪೈಲ್ವಾನರು ಅರಳಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.
Also Read: ಅಪ್ಪರ್ ಭದ್ರಾ ಯೋಜನೆ | ಅನುದಾನ ಬಿಡುಗಡೆಗೆ ಸಂಸತ್‌ನಲ್ಲಿ ಗೋವಿಂದ ಕಾರಜೋಳ ಒತ್ತಾಯ
ಚಿತ್ರದುರ್ಗದ ಎಲ್ಲ ಗರಡಿ ಮನೆಗಳಲ್ಲಿ 50ಕ್ಕೂ ಹೆಚ್ಚು ಯುವಕರು ಕುಸ್ತಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಹರಿಯಾಣ, ಮಹಾರಾಷ್ಟ್ರ, ಪೂನಾ ಸೇರಿದಂತೆ ಅನೇಕ ರಾಜ್ಯಗಳಿಂದ ಕುಸ್ತಿಪಟುಗಳು ಬರಲಿದ್ದಾರೆ.
ಕುಸ್ತಿಯಲ್ಲಿ ಗೆದ್ದ ಪುರುಷ ಪಟುಗಳಿಗೆ ಮದಕರಿ ನಾಯಕ ಕೇಸರು ಬಿರುದು ಹಾಗೂ ಟ್ರೋಫಿ, ಎರಡನೇ ಸ್ಥಾನಕ್ಕೆ ದುರ್ಗದ ಹುಲಿ,ಮೂರನೇ ಸ್ಥಾನಕ್ಕಡ ದುರ್ಗದ ಕುಮಾರ ಬಿರುದು ನೀಡಲಾಗುವುದು.
ಮಹಿಳಾ ಕುಸ್ತಿಪಟುಗಳಿಗೆ ವೀರವನಿತೆ ಒನಕೆ ಓಬವ್ವ ಬಿರುದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಭರತ್ ತಿಳಿಸಿದರು.
Also Read: ಒಳಮೀಸಲು ವಿಳಂಬ ಸಹಿಸಲು ಆಗದು | ಎಚ್. ಆಂಜನೇಯ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುಸ್ತಿ ಸಂಘದ ಜಗದೀಶ್, ದಿಲೀಪ್ ಸೋನು, ಕಾರ್ತಿಕ್, ಹೇಮಂತ್, ನಾಗರಾಜ್ ಇದ್ದರು.
