
CHITRADURGA NEWS | 23 July 2025
ಚಿತ್ರದುರ್ಗ: ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಕಳೆದ 39 ವರ್ಷಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆ ಈ ಭಾರಿ ಅಗಸ್ಟ್ 10 ಮತ್ತು 11 ರಂದು ಆಯೋಜಿಸಲಾಗಿದೆ.
ಇದನ್ನೂ ಓದಿ: ಜುಲೈ 27 ರಿಂದ ವಿವಿ ಸಾಗರಕ್ಕೆ ಭದ್ರಾ ನೀರು | ವೇದಾವತಿ ಮೂಲಕ ಹರಿಯುವಳು ಭದ್ರೆ

ಗುರು ಶಾಂತ ದೇಶಿ ಕೇಂದ್ರ ಶ್ರೀಗಳ ೮೭ನೆಯ ಶ್ರದ್ದಾಂಜಲಿ ಅಂಗವಾಗಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಯಾವುದೇ ಕಲಾತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲಾ ಕಲಾ ತಂಡಗಳಿಗೆ ನೈಜ ಪ್ರಯಾಣದ ವೆಚ್ಛವನ್ನು ಭರಿಸಲಾಗುವುದು.
ವೀರಗಾಸೆ ಕಲೆಯ ನೈಜ ಪ್ರದರ್ಶನವನ್ನು ಮಾತ್ರ ಕಲಾವಿದರು ಪ್ರಸ್ತುತ ಪಡಿಸಬೇಕು. ಸ್ಪರ್ಧೆಯಲ್ಲಿ ಯಾವುದೇ ಪವಾಡಗಳನ್ನು ಪ್ರದರ್ಶನ ಮಾಡುವಂತಿಲ್ಲ. ನಾಲಿಗೆಯ ಮೇಲೆ ಕರ್ಪೂರ ಹಚ್ಚಿಕೊಂಡು ಬೆಳಗುವುದು, ಖಡ್ಗದಿಂದ ಅಕ್ಕಿ ತುಂಬಿದ ತಂಬಿಗೆಯನ್ನು ಮೇಲಕ್ಕೆತ್ತುವುದು, ತೆಂಗಿನಕಾಯಿಯನ್ನು ಖಡ್ಗದಿಂದ ಒಡೆಯುವ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ.
ಇದನ್ನೂ ಓದಿ: ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು ಈ 5 ವಸ್ತುಗಳನ್ನು ಸೇವಿಸಿ
ಭಾಗವಹಿಸುವ ತಂಡಗಳು ತಮ್ಮ ತಂಡದ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ವಿವರಗಳಿಗೆ ಬಿ.ಎಸ್. ಮರುಳಸಿದ್ಧಯ್ಯ, ಅಧ್ಯಕ್ಷರು, ಅಣ್ಣನ ಬಳಗ, ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ದೂರವಾಣಿ ಸಂಖ್ಯೆ 99861 91968, 88616 47555, 99725 31504, 88619 54653 ಗೆ ಸಂಪರ್ಕಿಸುವುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
