
CHITRADURGA NEWS | 23 JULY 2025
ಚಿತ್ರದುರ್ಗ: ರಾಜ್ಯದ ಜಲಾಶಯಗಳೆಲ್ಲಾ ಭರ್ತಿಯಾಗಿರುವಾಗ ಈವರೆಗೆ ಒಂದು ಹನಿ ಕೂಡಾ ನೀರು ಹರಿಯದ ಜಲಾಶಯಗಳ ಪೈಕಿ ಮಧ್ಯ ಕರ್ನಾಟಕದ ವಾಣಿವಿಲಾಸ ಸಾಗರ ಸೇರಿದೆ.
ಈಗ ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲು ದಿನಾಂಕ ನಿಗಧಿ ಮಾಡಿದ್ದು, ಬಯಲು ಸೀಮೆ ಜನರಿಗೆ ಜೀವ ಬಂದಂತಾಗಿದೆ.

ಇದನ್ನೂ ಓದಿ: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸಲು ಅನುಮತಿ | 4.21 TMC ನೀರೆತ್ತಲು ಅವಕಾಶ
ಜುಲೈ 27 ರಿಂದ ವಾಣಿವಿಲಾಸ ಸಾಗರ(ವಿವಿ ಸಾಗರ)ಕ್ಕೆ ನೀರು ಹರಿಸಲು ದಿನಾಂಕ ನಿಗಧಿ ಮಾಡಲಾಗಿದೆ. ಜುಲೈ 27 ರಿಂದ ನಾಲ್ಕು ತಿಂಗಳ ಕಾಲ ನೀರು ಹರಿದು ಬರಲಿದೆ.
ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆ ಮೂಲಕ ವೇದಾವತಿ ನದಿ ಸೇರುವ ಹಳ್ಳಗಳ ಮೂಲಕ ನೀರು ಹರಿದು ತರೀಕೆರೆ, ಕಡೂರು, ಹೊಸದುರ್ಗ ತಾಲೂಕುಗಳ ಮೂಲಕ ಭದ್ರೆ ವಿವಿ ಸಾಗರದ ಒಡಲು ಸೇರಲಿದ್ದಾಳೆ.
ಇದನ್ನೂ ಓದಿ: ಗಿಲಿಕೇನಹಳ್ಳಿ ಅಜ್ಜಯ್ಯ ಆತ್ಮಹತ್ಯೆ ಪ್ರಕರಣ | ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿಕೆ
ಭದ್ರಾ ಜಲಾಶಯದಿಂದ ಹರಿದು ಬರುವ ತಾಯಿ ಭದ್ರೆ, ಅಪ್ಪರ್ ಭದ್ರಾ ಮುಖ್ಯ ಕಾಲುವೆಯಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ವ್ಯಾಪ್ತಿಯಲ್ಲಿ ಹಾದು ಬರಲಿದ್ದಾಳೆ.
ಇಲ್ಲಿಂದ ಶಾಂತಿಪುರ ಪಂಪ್‌ಹೌಸ್-1, ಜಂಬದಹಳ್ಳ ಮೇಲ್ಗಾಲುವೆ, ಬೆಟ್ಟದ ತಾವರೆಕೆರೆ ಪಂಪ್‌ಹೌಸ್-2, ಹೆಬ್ಬೂರು ವೈ ಜಂಕ್ಷನ್ ಮೂಲಕ ನೀರು ಸಾಗಿ, ಕಾಟಿನಗೆರೆ, ಬೆಣಕುಣಸೆ, ಮುಗುಳಿ, ಬೇಗೂರು, ಅಸಂದಿ, ಹಡಗಲು, ಕಲ್ಕೆರೆ, ಎಚ್.ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೆಕೆರೆ, ಹನುಮನಹಳ್ಳಿ, ಚೌಳಹಿರಿಯೂರು, ಹಿ.ತಿಮ್ಮಾಪುರ ಮೂಲಕ ಹರಿದು ವೇದಾವತಿಯ ಒಡಲು ಸೇರುವಳು ಭದ್ರೆ.
ನಾಲ್ಕು ತಿಂಗಳಲ್ಲಿ ನಾಲ್ಕುವರೆ ಟಿಎಂಸಿ ನೀರು:
ಭದ್ರಾ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಗೆ ಮುಂದಿನ ನಾಲ್ಕು ತಿಂಗಳ ಕಾಲ 4.25 ಟಿಎಂಸಿ ನೀರು ಹರಿದು ಬರಲಿದೆ.ಇದರಲ್ಲಿ ವಾಣಿವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ಸೇರಲಿದ್ದು, ಉಳಿದಂತೆ ಪ್ಯಾಕೇಜ್ 1 ರ ಕೆರೆಗಳಿಗೆ, ತರೀಕೆರೆ, ಕಡೂರು ಭಾಗದ ನೀರಾವರಿ ಯೋಜನೆಗಳಿಗೆ ಸೇರಿ ನಾಲ್ಕುವರೆ ಟಿಎಂಸಿ ನೀರು ಹರಿಯಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
